ಕೊಪ್ಪಳ ಕಾಂಗ್ರೆಸ್‌ನಲ್ಲಿ ಭಿನ್ನಮತ, ಹಲವು ಮುಖಂಡರು ರಾಜಿನಾಮೆ

Posted By:
Subscribe to Oneindia Kannada

ಕೊಪ್ಪಳ, ಡಿಸೆಂಬರ್ 23; ಕೊಪ್ಪಳ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು ದಶಕಗಳಿಂದಲೂ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಮಾಜಿ ಎಂಎಲ್‌ಸಿ ಎಚ್.ಆರ್.ಶ್ರೀನಾಥ್ ಪಕ್ಷಕ್ಕೆ ರಾಜಿನಾಮೆ ಘೋಷಿಸಿದ್ದಾರೆ. ಅವರ ಜೊತೆಗೆ ಅವರ ಬೆಂಬಲಿಗರೂ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.

ಜೆಡಿಎಸ್ ನಿಂದ ಇತ್ತೀಚೆಗಷ್ಟೆ ಕಾಂಗ್ರೆಸ್ ಸೇರಿರುವ ಇಕ್ಬಾಲ್ ಅನ್ಸಾರಿ ಅವರಿಗೆ ಗಂಗಾವತಿಗೆ ಪಕ್ಷದಿಂದ ಟಿಕೆಟ್ ಘೋಷಣೆ ಮಾಡುತ್ತಿರುವುದು ಶ್ರೀನಾಥ್ ಹಾಗೂ ಬೆಂಬಲಿಗರ ಸಿಟ್ಟಿಗೆ ಕಾರಣವಾಗಿದೆ.

ಎಚ್.ಆರ್.ಶ್ರೀನಾಥ್ ಅವರ ರಾಜಕೀಯ ವೈರಿ ಮಿಕ್ಬಾಲ್ ಅನ್ಸಾರಿ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳಬಾರದು ಎಂದು ಈ ಮುಂಚೆ ಕೆಲವು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದರು ಆದರೆ ಮುಖ್ಯಮಂತ್ರಿಗಳು ಗಂಗಾವತಿಗೆ ಕಾರ್ಯಕ್ರಮಕ್ಕೆ ಬಂದಾಗ ಇಕ್ಬಾಲ್ ಅನ್ಸಾರಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು.

Ex MLC HR Shrinath

ಇದೀಗ ಇಕ್ಬಾಲ್ ಅನ್ಸಾರಿ ಅವರಿಗೆ ಗಂಗಾವತಿ ಇಂದ ಟಿಕೆಟ್ ಕೂಡ ನೀಡುತ್ತಿರುವ ಕಾರಣ ಸಿಟ್ಟಿಗೆದ್ದಿರುವ ಎಚ್.ಆರ್.ಶ್ರೀನಾಥ್ ಕೆಪಿಸಿಸಿ ಅಧ್ಯಕ್ಷರಿಗೆ ರಾಜಿನಾಮೆ ಪತ್ರ ಕಳಿಸಿದ್ದು, ಗಂಗಾವತಿ ನಗರ ಸಭೆಯ ಕಾಂಗ್ರೆಸ್‌ನ 11 ಸದಸ್ಯರು ಸೇರಿದಂತೆ ಹಲವು ಜನ ಕಾಂಗ್ರೆಸ್ ಕಾರ್ಯಕರ್ತರು ರಾಜಿನಾಮೆ ಪತ್ರವನ್ನು ಕೆಪಿಸಿಸಿ ಕಚೇರಿಗೆ ರವಾನಿಸಿದ್ದಾರೆ.

ರಾಜಿನಾಮೆ ಘೋಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಆರ್.ಶ್ರೀನಾಥ್ 'ಸಿದ್ದರಾಮಯ್ಯ ಅವರಲ್ಲಿ ಮೂಲ ಕಾಂಗ್ರೆಸ್ ರಕ್ತ ಇಲ್ಲ ಹಾಗಾಗಿ ಅವರು ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡುತ್ತಿದ್ದಾರೆ' ಎಂದು ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಪಕ್ಷ 'ಸಿದ್ದರಾಮಯ್ಯ ಕಾಂಗ್ರೆಸ್' ಆಗಿ ಪರಿವರ್ತನೆ ಆಗುತ್ತಿದೆ, ಅವರು ಕೆಪಿಸಿಸಿ ಅಧ್ಯಕ್ಷರನ್ನೆ 'ಪವರ್ ಲೆಸ್' ಮಾಡಿಬಿಟ್ಟಿದ್ದಾರೆ, ಸಿದ್ದರಾಮಯ್ಯ ಅವರ ತಾಳಕ್ಕೆ ಹೈಕಮಾಂಡ್ ಕೂಡ ಕುಣಿಯುತ್ತಿದೆ ಎಂದು ತಮ್ಮ ಅಸಮಧಾನ ಹೊರಹಾಕಿದರು.

ಸಿದ್ದರಾಮಯ್ಯ ಅವರನ್ನು ಹಿಟ್ಲರ್ ಗೆ ಹೋಲಿಸಿದ ಶ್ರೀನಾಥ್, ಸಿದ್ದರಾಮಯ್ಯ ಅವರು ಪಕ್ಷಕ್ಕೆ ಬಂದ ಮೇಲೆ 'ಎಸ್.ಎಂ.ಕೃಷ್ಣ, ಶ್ರೀನಿವಾಸ್ ಪ್ರಸಾದ್, ಎಚ್.ಆರ್.ವಿಶ್ವನಾಥ್ ಅವರಂತಹಾ ಹಿರಿಯ ಕಾಂಗ್ರೆಸ್ಸಿಗರೇ ಪಕ್ಷ ಬಿಡುವಂತೆ ಮಾಡಿಬಿಟ್ಟಿರು, ಈಗ ನನ್ನನ್ನು ಪಕ್ಷ ಬಿಡಿಸಿದ್ದಾರೆ, ಇನ್ನೂ ಹಲವು ಮೂಲ ಕಾಂಗ್ರೆಸ್ಸಿಗರನ್ನು ಸಿದ್ದರಾಮಯ್ಯ ಅವರು ಪಕ್ಷ ಬಿಡಿಸಲಿದ್ದಾರೆ' ಎಂದು ಆರೋಪ ಮಾಡಿದರು.

ಮುಂದೆ ಯಾವ ಪಕ್ಷವನ್ನೂ ಸೇರುವುದಿಲ್ಲವೆಂದು ಹೇಳಿದ ಅವರು ಪಕ್ಷೇತರವಾಗಿ ಚುನಾವಣೆ ಸ್ಪರ್ಧಿಸಿ ಆರಿಸಿ ಬರುವುದಾಗಿ ಹೇಳಿದರು.

ಶ್ರೀನಾಥ್ ಅವರ ತಂದೆ ರಾಮಲೂರು ಅವರು ಇಂದಿರಾಗಾಂಧಿ ಅವರಿಗೆ ಬಹಳ ಆಪ್ತರಾಗಿದ್ದರು, ರಾಜ್ಯ ಕಾಂಗ್ರೆಸ್‌ನ ಹೈಕಮಾಂಡ್ ಎಂದೇ ಅವರನ್ನು ಗುರುತಿಸಲಾಗುತ್ತಿತ್ತು. ಬಹಳ ವರ್ಷಗಳಿಂದಲೂ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ಮುಖಂಡರೆಂದು ಗುರುತಿಸಿಕೊಂಡಿದ್ದ ಎಚ್.ಆರ್.ಶ್ರೀನಾಥ್ ಒಂದು ಬಾರಿ ಎಂಎಲ್‌ಸಿ ಕೂಡ ಆಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Koppala congress leader ex MLC HR Shrinath sent his resignation to KPCC. He said CM Siddaramaiah is in favor of defective congress men. real congress party leaders are being neglected.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ