ಕೊಪ್ಪಳದಲ್ಲಿ ಕೋವಿಡ್ - 19 ಪ್ರಯೋಗಾಲಯ ಉದ್ಘಾಟನೆ
ಕೊಪ್ಪಳ, ಜೂನ್ 05 : ಕೊಪ್ಫಳ ಜಿಲ್ಲೆಗೆ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳನ್ನು ಪತ್ತೆ ಮಾಡಲು ಪ್ರಯೋಗಾಲಯ ಸಿಕ್ಕಿದೆ. ಈ ಲ್ಯಾಬ್‌ನಲ್ಲಿ ಪ್ರತಿದಿನ 140 ರಿಂದ 145 ಪರೀಕ್ಷೆಗಳನ್ನು ಮಾಡಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Recommended Video
ಕೊಪ್ಪಳ ಜಿಲ್ಲಾ ಉಸ್ತುವಾರಿ, ಕೃಷಿ ಸಚಿವ ಬಿ. ಸಿ. ಪಾಟೀಲ್ ಕೊಪ್ಪಳದ ಕಿಮ್ಸ್ ಆವರಣದಲ್ಲಿ ಶುಕ್ರವಾರ ಕೋವಿಡ್-19 ಸ್ಕ್ರೀನಿಂಗ್ ಪರೀಕ್ಷೆ ಹಾಗೂ ಆರ್‌ಟಿಪಿಸಿಆರ್ ಪ್ರಯೋಗಾಲಯ ಉದ್ಘಾಟನೆ ಮಾಡಿದರು. ಜಿಲ್ಲೆಯಲ್ಲಿ ಕೋವಿಡ್ - 19 ಪರೀಕ್ಷೆಗೆ ಈ ಲ್ಯಾಬ್ ಸಹಾಯಕವಾಗಿದೆ.
ಈ ಪ್ರಯೋಗಾಲಯಕ್ಕೆ ಎಸ್. ಡಿ. ಆರ್. ಎಫ್ ನಿಧಿಯಲ್ಲಿ ಸಿವಿಲ್ ಕಾಮಗಾರಿಗೆ ರೂ. 23.70 ಲಕ್ಷ ಹಣ ಖರ್ಚು ಮಾಡಲಾಗುತ್ತಿದೆ. ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಉಪಕರಣಗಳನ್ನು ಖರೀದಿ ಮಾಡಲಾಗಿದೆ.

ಟ್ರೂನಾಟ್ ಉಪಕರಣದಲ್ಲಿ ಪ್ರತಿ ಶಿಫ್ಟ್‌ನಲ್ಲಿ 20 ರಿಂದ 25 ಜನ ಹಾಗೂ ಪ್ರತಿ ದಿನ 40 ರಿಂದ 50 ಪರೀಕ್ಷೆಗಳನ್ನು ಮಾಡಲಾಗುತ್ತದೆ. ಆರ್‌ಟಿಪಿಸಿಆರ್ ಉಪಕರಣದಲ್ಲಿ ಪ್ರತಿ ಶಿಫ್ಟ್‌ಗೆ 70 ರಿಂದ 75 ಜನರು ಹಾಗೂ ಪ್ರತಿದಿನ 140 ರಿಂದ 145 ಪರೀಕ್ಷೆಗಳನ್ನು ಮಾಡಲಾಗುತ್ತದೆ.
ಸ್ಕ್ರೀನಿಂಗ್ ಪರೀಕ್ಷೆ(ಟ್ರೂನಾಟ್), ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಸಂಶೋಧನಾ ವಿಜ್ಞಾನಿಗಳು, ಸಂಶೋಧನಾ ಸಹಾಯಕರು, ಪ್ರಯೋಗಶಾಲಾ ತಜ್ಞರು ಮಾಡುತ್ತಾರೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಾಯೋಗಿಕವಾಗಿ 55 ಪರೀಕ್ಷೆಗಳನ್ನು ಮಾಡಿದ್ದು, ಎಲ್ಲಾ 55 ಪರೀಕ್ಷೆಗಳ ವರದಿ ನೆಗೆಟಿವ್ ಬಂದಿವೆ.












Click it and Unblock the Notifications