ಕೊಪ್ಪಳ: ಕಾಪಿ ಮಾಡಲು ಬಿಡಲಿಲ್ಲವೆಂದು ಸುತ್ತಿಗೆಯಿಂದ ಹಲ್ಲೆ
ಕೊಪ್ಪಳ, ಮಾರ್ಚ್ 02: ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಾಕಶ ಮಾಡಿಕೊಡಲಿಲ್ಲ ಎಂದು ಕಾಲೇಜು ಪ್ರಾಂಶುಪಾಲ ಮತ್ತು ಸಿಬ್ಬಂದಿಗಳು ಗಂಗಾವತಿಯ ವೈಜೆಆರ್‌ಪಿಯು ಕಾಲೇಜಿನ ನಿರ್ದೇಶಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಗಂಗಾವತಿ ವಿದ್ಯಾನಿಕೇತನ ಕಾಲೇಜಿನ ಪ್ರಾಂಶುಪಾಲ ಶರತ್ ಚಂದ್ರ ಹಾಗೂ ಅದೇ ಕಾಲೇಜಿನ ಸಿಬ್ಬಂದಿ ತಮ್ಮ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ನೀಡಲಿಲ್ಲವೆಂದು ಪರೀಕ್ಷೆ ನಡೆಯುತ್ತಿದ್ದ ವೈಜೆಆರ್ ಪಿಯುಸಿ ಕಾಲೇಜಿನ ನಿರ್ದೇಶಕ ರಾಮಚಂದ್ರ ಮೇಲೆ ಹಲ್ಲೆ ನಡೆಸಿದ್ದಾರೆ.
ನಿನ್ನೆ ಸಂಜೆ ರಾಮಚಂದ್ರ ಅವರ ಮೇಲೆ ಹಲ್ಲೆ ನಡೆಸಿದ್ದು, ಸುತ್ತಿಗೆಯಿಂದ ಅವರ ತಲೆಗೆ ಬಲವಾಗಿ ಹೊಡೆಯಲಾಗಿದೆ, ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ರಾಮಕೃಷ್ಣ ಅವರನ್ನು ಗಂಗಾವತಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications