ಪಶ್ಚಿಮ ಬಂಗಾಲದಲ್ಲಿ ಇದೇಕೆ ಹಿಂದೂಗಳ ಮೇಲೆ ಈ ಪರಿಯ ದಾಳಿ?

ಈ ಬಾರಿ ಲೋಕಸಭಾ ಚುನಾವಣೆ ಆರಂಭವಾದ ವೇಳೆ ಹಾಗೂ ನಡೆಯುವಾಗ ಪಶ್ಚಿಮ ಬಂಗಾಲದಲ್ಲಿ ಈ ಹಿಂದೆಂದೂ ಕಂಡಿರದ ಹಿಂಸಾಚಾರ. ಯಾವಾಗ ಬಿಜೆಪಿ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ವೇಳೆ ಟಿಎಂಸಿಗೆ ನಂಟು ಹೊಂದಿದ ಗೂಂಡಾಗಳು ದಾಳಿ ನಡೆಸಿದರು ಅನ್ನೋವಲ್ಲಿಗೆ ಪರಿಸ್ಥಿತಿ ವಿಕೋಪಕ್ಕೆ ತಲುಪಿತ್ತು.

ವಿದ್ಯಾಸಾಗರ್ ಕಾಲೇಜಿನಲ್ಲಿ ನಡೆದ ಹಿಂಸಾಚಾರವು ಕೋಲ್ಕತ್ತಾದ ಮತ್ತೊಂದು ಭಾಗದಲ್ಲಿ ನಡೆದಿದ್ದ ಹಿಂಸಾಚಾರದ ಕಡೆಗೆ ಹೆಚ್ಚು ಗಮನ ಹರಿಸದಂತೆ ಮಾಡಿತು. ಕಳೆದ ಶುಕ್ರವಾರದಿಂದಲೇ ಡೈಮಂಡ್ ಹಾರ್ಬರ್ ನ ಸಾತ್ ಗಚಿಯಾ ವಿಧಾನಸಭಾ ಚುನಾವಣೆಯಲ್ಲಿ ಹಿಂಸಾಚಾರ ಭುಗಿಲೆದ್ದಿತು. ಅದನ್ನು ನಿಯಂತ್ರಿಸುವುದರಲ್ಲಿ ಅಧಿಕಾರಿಗಳು ಹೈರಾಣಾದರು.

ವರದಿಗಳ ಪ್ರಕಾರ: ತೃಣಮೂಲ ಕಾಂಗ್ರೆಸ್ ಗೆ ಸೇರಿದವರು ಹಿಂದೂಗಾಳಿಗೆ ಸೇರಿದ ಮನೆ, ಮಳಿಗೆಗಳಿಗೆ ಬೆಂಕಿ ಹೊತ್ತಿಸಿದರು. ಆ ಹಿಂಸಾಚಾರವನ್ನು ಕೋಮುಗಲಭೆ ಅನ್ನೋದಕ್ಕಿಂತ ರಾಜಕೀಯ ಪ್ರೇರಿತವಾದದ್ದು ಎಂದವರೇ ಹೆಚ್ಚು. ಶುಕ್ರವಾರ ರಾತ್ರಿ ಆರಂಭವಾದ ಹಿಂಸಾಚಾರ ಸತತ ಮೂರು ದಿನ ಮುಂದುವರಿಯಿತು. "ಯಾವುದೇ ಸಾವು- ನೋವು ಸಂಭವಿಸಿಲ್ಲ" ಎಂಬುದು ಅಧಿಕಾರಿಗಳ ಮಾತು. ಜಿಲ್ಲಾಡಳಿತದಿಂದ ಮಾಹಿತಿ ಕೇಳಿರುವುದಾಗಿ ಐಎಎಸ್ ಅಧಿಕಾರಿ ಹೇಳಿದ್ದಾರೆ.

Mamata Banerjee

ಈ ಹಿಂಸಾಚಾರಕ್ಕೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂಬುದು ಆರೋಪ. ಆ ಪ್ರದೇಶದ ಸುತ್ತಮುತ್ತ ಕೂಡ ಹಿಂಸಾಚಾರದ ವರದಿ ಆಗಿದೆ. ಮೊದಲಿಗೆ ಈ ಪ್ರದೇಶಗಳಿಗೆ ಪೊಲೀಸರಿಗೇ ಪ್ರವೇಶ ಸಿಕ್ಕಿಲ್ಲ. ಆ ನಂತರ ಕ್ಷಿಪ್ರ ಕಾರ್ಯ ಪಡೆ ಪೊಲೀಸರು ಒಳ ಹೋಗಿದ್ದಾರಾದರೂ ಅವರಲ್ಲಿ ಕೆಲವರಿಗೆ ಗಾಯಗಳಾಗಿವೆ.

ಒಂದು ಕಡೆ ಈ ಹಿಂಸಾಚಾರಕ್ಕೆ ಕೋಮು ದ್ವೇಷದ ಬಣ್ಣ ಇಲ್ಲ ಎಂಬ ಮಾತು ಕೇಳಿದರೆ, ಕೆಲ ವರದಿಗಳ ಪ್ರಕಾರ ಇದು ಕೋಮು ಹಿಂಸಾಚಾರವೇ. ರಾಜಕೀಯ ಸಿದ್ಧಾಂತಗಳನ್ನೇನೂ ನೋಡದೆ ಮುಸ್ಲಿಮರು ಹಿಂದೂಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ಆ ವರದಿಯ ಸಾರಾಂಶ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಪ್ರಕಾರ: ಮುಸ್ಲಿಮೇತರರನ್ನು ಕೊಲ್ಲುವಂತೆ ಮಸೀದಿಗಳಿಂದ ಕರೆ ನೀಡಲಾಗಿದೆ. ಕಾರಣಕ್ಕೆ ಹಿಂದೂಗಳು ತಮ್ಮ ಸ್ಥಳಗಳನ್ನು ತೊರೆದಿದ್ದಾರೆ. ಈಚೆಗೆ ಪಶ್ಚಿಮ ಬಂಗಾಲದಲ್ಲಿ ಹಿಂದೂಗಳ ಮೇಲೆ ಮುಸ್ಲಿಮರಿಂದ ಹಲವು ಬಾರಿ ದಾಳಿಗಳಾದ ಬಗ್ಗೆ ವರದಿಗಳಾಗಿವೆ.

ಮಾಲ್ಡಾ, ಬಶಿರ್ ಹತ್ ನಲ್ಲಿ ನಡೆದ ಕಾರ್ಯಕ್ರಮದ ವೇಳೆ ಮುಸ್ಲಿಮರಿಂದ ಹಿಂದೂಗಳನ್ನು ರಕ್ಷಿಸಲು ಪೊಲೀಸರು ವಿಫಲರಾಗಿದ್ದಾರೆ. ಇದೇ ಮಾದರಿಯಲ್ಲೇ ಡೈಮಂಡ್ ಹಾರ್ಬರ್ ನಲ್ಲೂ ಆಗಿದೆ. ಟಿಎಂಸಿ ಜತೆಗೆ ಗುರುತಿಸಿಕೊಂಡ ಮುಸ್ಲಿಮರು ಯಾವ ರಾಜಕೀಯ ಸಿದ್ಧಾಂತಕ್ಕೆ ಸೇರಿದವರು ಎಂಬುದನ್ನೂ ನೋಡದೆ ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ ಎನ್ನುತ್ತಿವೆ ವರದಿಗಳು.

ಮಮತಾ ಬ್ಯಾನರ್ಜಿ ಅವರು ಮಾತ್ರ, ಬಿಜೆಪಿಯವರು ಯಾವ ರೀತಿ ತಾವು ಹಿಂದೂಪರ ಎನ್ನುತ್ತಾರೋ ನಾನು ಅದೇ ರೀತಿ ಎನ್ನುತ್ತಾರೆ. ಆದರೆ ಮುಸ್ಲಿಮ್ ದುಷ್ಕರ್ಮಿಗಳಿಂದ ಹಿಂದೂಗಳಿಗೆ ಭದ್ರತೆ ಒದಗಿಸಲು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+