ಪಶ್ಚಿಮ ಬಂಗಾಳ: ಕೇಂದ್ರ ತನಿಖಾ ಸಂಸ್ಥೆ ವಿರುದ್ದ ವಿಧಾನ ಸಭೆಯಲ್ಲಿ ನಿರ್ಣಯ ಅಂಗೀಕಾರ

ಕಲ್ಕತ್ತಾ, ಸೆಪ್ಟೆಂಬರ್ 19: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 'ಕೇಂದ್ರ ತನಿಖಾ ಸಂಸ್ಥೆಗಳ ಅತಿಯಾದ ಬಳಕೆ' ವಿರುದ್ಧ ನಿಯಮ 169 ರ ಅಡಿಯಲ್ಲಿ ನಿರ್ಣಯವನ್ನು ಅಂಗೀಕರಿಸಿತು. ಪಶ್ಚಿಮ ಬಂಗಾಳವು ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ಇತರ ತನಿಖಾ ಸಂಸ್ಥೆಗಳ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ಮೊದಲ ರಾಜ್ಯವಾಗಿದೆ.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ನಡೆಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ತೀವ್ರವಾಗಿ ಟೀಕಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದೆ ನ್ಯಾಯಾಂಗದ ವಿರುದ್ಧ ನಿರ್ಣಯವನ್ನು ತರುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ ಪ್ರಶ್ನೆ

"ಎಸ್‌ಎಸ್‌ಸಿ ಹಗರಣ, ಕಲ್ಲಿದ್ದಲು ಮತ್ತು ಜಾನುವಾರು ಕಳ್ಳಸಾಗಣೆ ಪ್ರಕರಣಗಳು, ಮಮತಾ ಬ್ಯಾನರ್ಜಿ ಹತ್ತಿರದ ಕುಟುಂಬದ ಸಂಪತ್ತು ಅಸಮಾನ ಏರಿಕೆ, ಎಲ್ಲವನ್ನೂ ಕೇಂದ್ರ ಏಜೆನ್ಸಿಗಳಿಗೆ ಹಸ್ತಾಂತರಿಸಲಾಗಿದೆ. ಅವರು ತಪ್ಪು ಮಾಡಿದ ಬಗ್ಗೆ ದೊಡ್ಡ ಪುರಾವೆಗಳನ್ನು ಕಂಡುಕೊಂಡಿದ್ದಾರೆ, ನ್ಯಾಯಾಲಯದ ಆದೇಶದ ಮೇರೆಗೆ ಡಬ್ಲ್ಯುಬಿ ಸಿಎಂ ನ್ಯಾಯಾಂಗದ ವಿರುದ್ಧವೂ ಮಸೂದೆ ಇದೆಯೇ?" ಎಂದು ಸೋಮವಾರ ನಿರ್ಣಯಕ್ಕೆ ಮುನ್ನ ಬಿಜೆಪಿ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ ಪ್ರಶ್ನಿಸಿದ್ದಾರೆ.

West Bengal:Legislative Assembly passed a resolution against Central Investigating Agencies

ಟಿಎಂಸಿ ಮುಖಂಡ ಜಾಯ್ ಪ್ರಕಾಶ್ ಮಜುಂದಾರ್ ಹೇಳಿದ್ದೇನು

ರಾಜಕೀಯ ವಿರೋಧದ ವಿರುದ್ಧ ಬಿಜೆಪಿ ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಟಿಎಂಸಿ ಮುಖಂಡ ಜಾಯ್ ಪ್ರಕಾಶ್ ಮಜುಂದಾರ್ ಆರೋಪಿಸಿದ್ದಾರೆ. "ಇಡಿ, ಸಿಬಿಐ ನಿರೂಪಣೆ ಮಾಡುತ್ತಿದೆ. ನಾರದ ಹಗರಣ, ಚಿಟ್ ಫಂಡ್ ಹಗರಣದ ತನಿಖೆಗೆ ಹೈಕೋರ್ಟ್ ಆದೇಶಿಸಿದೆ. ಆದರೆ ಸುವೇಂದು ಅಧಿಕಾರಿಗೆ ರಿಲೀಫ್ ಸಿಕ್ಕಿತು? ಇದು ಯಾವ ರೀತಿಯ ತನಿಖೆ? ತನಿಖೆ ನಿಷ್ಪಕ್ಷಪಾತವಾಗಿರಬೇಕು. ಆದರೆ ಮೋದಿ ಮತ್ತು ಅಮಿತ್ ಶಾ ಹೇಳುತ್ತಿದ್ದಾರೆ. ಇಂದು ವಿರೋಧ ಪಕ್ಷ ಮುಕ್ತ ಭಾರತ, ನಾಳೆ ಲೋಕತಂತ್ರ ಮುಕ್ತ ಭಾರತ" ಎಂದು ಹೇಳುತ್ತಾರೆ ಎಂದಿದ್ದಾರೆ.

2024ರಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಭಯ ಬಿಜೆಪಿಗಿದೆ ಎಂದು ಮಜುಂದಾರ್ ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳದ ಸಂಸದೀಯ ವ್ಯವಹಾರಗಳ ಸಚಿವ ಶೋಭಾಂದೇಬ್ ಚಟ್ಟೋಪಾಧ್ಯಾಯ ಅವರು ಇಂತಹ ನಿರ್ಣಯವನ್ನು ತಂದ ಮೊದಲ ರಾಜ್ಯ ಬಂಗಾಳವಾಗಲಿದೆ ಎಂದು ಹೇಳುತ್ತಿದ್ದಂತೆ ಸದನದಲ್ಲಿ ಗಲಾಟೆ ಆರಂಭವಾಯಿತು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಒಳಗೊಂಡಿರುವ ಪ್ರತಿಪಕ್ಷಗಳು ನಿರ್ಣಯವನ್ನು ಮಂಡಿಸಿದಾಗ ಅದರ ಮೇಲಿನ ಚರ್ಚೆಯಲ್ಲಿ ಭಾಗವಹಿಸಬಹುದು ಎಂದು ಅವರು ಪ್ರತಿಪಾದಿಸಿದರು.

West Bengal:Legislative Assembly passed a resolution against Central Investigating Agencies

ಪಶ್ಚಿಮ ಬಂಗಾಳದಲ್ಲಿ ಭ್ರಷ್ಟಾಚಾರದ ಆರೋಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಜಿ ಸಚಿವರು ಸೇರಿದಂತೆ ಹಲವು ಪಕ್ಷದ ನಾಯಕರನ್ನು ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿರುವ ಸಮಯದಲ್ಲಿ ಟಿಎಂಸಿ ಈ ನಿರ್ಧಾರ ಕೈಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+