ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ.ಬಂಗಾಳ: 12ನೇ ತರಗತಿ ಉತ್ತರ ಪತ್ರಿಕೆಯಲ್ಲಿ ರಾಜಕೀಯ ಚಿಹ್ನೆ, ಸಂದೇಶ ಬರೆದರೆ ದಂಡ

|
Google Oneindia Kannada News

ಕೊಲ್ಕತ್ತಾ ಏಪ್ರಿಲ್ 7: ಪಶ್ಚಿಮ ಬಂಗಾಳದಲ್ಲಿ 12ನೇ ತರಗತಿ ಪರೀಕ್ಷೆಗಳು ಆರಂಭಗೊಂಡಿವೆ. ಕಳೆದ ತಿಂಗಳಲ್ಲಿ ನಡೆದ 10 ನೇ ತರಗತಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಒಂದು ವಿಭಾಗವು ತಮ್ಮ ಉತ್ತರ ಪತ್ರಿಕೆಗಳಲ್ಲಿ ಜನಪ್ರಿಯ ರಾಜಕೀಯ ಘೋಷಣೆಯನ್ನು ಬರೆದಿರುವುದು ಕಂಡುಬಂದಿತ್ತು. ಆದರೆ 12 ನೇ ತರಗತಿ ಪರೀಕ್ಷೆಯಲ್ಲಿ ಪರೀಕ್ಷಾರ್ಥಿಗಳು ಅದೇ ರೀತಿ ಪುನರಾವರ್ತಿಸಿದರೆ ಅವರ ವಿರುದ್ಧ ದಂಡದ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿ ಕಳೆದ ತಿಂಗಳು ನಡೆಸಿದ 10ನೇ ತರಗತಿಯ ಮಾಧ್ಯಮಿಕ ಪರೀಕ್ಷೆಯ ಪರೀಕ್ಷಕರಿಗೆ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಘೋಷಣೆಯಾದ 'ಖೇಲಾ ಹೋಬೆ' (ಆಟ ಇರುತ್ತದೆ) ಎಂದು ಬರೆದಿರುವುದು ಕಂಡುಬಂದಿದೆ.

ಹೀಗಾಗಿ 12 ನೇ ತರಗತಿಗೆ ಹೈಯರ್ ಸೆಕೆಂಡರಿ (ಎಚ್‌ಎಸ್) ಪರೀಕ್ಷೆಯನ್ನು ಆಯೋಜಿಸುವ ಪಶ್ಚಿಮ ಬಂಗಾಳದ ಹೈಯರ್ ಸೆಕೆಂಡರಿ ಎಜುಕೇಶನ್ ಕೌನ್ಸಿಲ್ (ಡಬ್ಲ್ಯುಬಿಸಿಎಚ್‌ಎಸ್‌ಇ) ಯಾವುದೇ ಅಭ್ಯರ್ಥಿಯು ಉತ್ತರ ಪತ್ರಿಕೆಗಳಲ್ಲಿ ರಾಜಕೀಯ ಸಂದೇಶಗಳು ಅಥವಾ ರೇಖಾಚಿತ್ರಗಳನ್ನು ಬರೆದರೆ ದಂಡದ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ.

West Bengal : Class 10 students write political messages on answer sheet get warning

"ಅಂತಹ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡದಂತೆ ಪರೀಕ್ಷಕರಿಗೆ ಸೂಚಿಸಲಾಗಿದೆ. ಜೊತೆಗೆ ಅಂಥಹ ವಿದ್ಯಾರ್ಥಿಗಳ ವಿರುದ್ಧ ದಂಡದ ಕ್ರಮವನ್ನು ತೆಗೆದುಕೊಳ್ಳಲಾಗುವುದು (ರಾಜಕೀಯ ಚಿಹ್ನೆಗಳನ್ನು ಬಳಸುವ ವಿದ್ಯಾರ್ಥಿಗಳ ವಿರುದ್ಧ). ಕೌನ್ಸಿಲ್ ರಚಿಸಿದ ಉನ್ನತ ಅಧಿಕಾರದ ಸಮಿತಿಯು ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸುತ್ತದೆ" ಎಂದು WBCHSE ಅಧ್ಯಕ್ಷ ಚಿರಂಜೀಬ್ ಭಟ್ಟಾಚಾರ್ಯ ಅವರು ಬುಧವಾರದಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

West Bengal : Class 10 students write political messages on answer sheet get warning

WBCHSE ಯ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸುವ ರಾಜಕೀಯ ಘೋಷಣೆಗಳು, ಪ್ರಚಾರಗಳು ಅಥವಾ ವಿವಾದಾತ್ಮಕ ವಿಷಯಗಳನ್ನು ಬರೆಯುವುದು ಕಠಿಣ ಕ್ರಮವನ್ನು ಆಹ್ವಾನಿಸುತ್ತದೆ ಎಂದು ಭಟ್ಟಾಚಾರ್ಯ ಹೇಳಿದ್ದಾರೆ. HS ಪರೀಕ್ಷೆಗಳು ಏಪ್ರಿಲ್ 2 ರಂದು ಪ್ರಾರಂಭವಾಗಿದ್ದು ಮತ್ತು ಏಪ್ರಿಲ್ 27 ರವರೆಗೆ ನಡೆಯಲಿವೆ. ಯಾವುದೇ ಆಡಳಿತ ಪಕ್ಷವು ಶಿಕ್ಷಣ ಕ್ಷೇತ್ರವನ್ನು ರಾಜಕೀಯಗೊಳಿಸಬಾರದು ಮತ್ತು ಪ್ರಭಾವಶಾಲಿಗಳು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಪ್ರಭಾವ ಬೀರಬಾರದು ಎಂದು ಖ್ಯಾತ ಭಾರತಶಾಸ್ತ್ರಜ್ಞರಾದ ಭಾದುರಿ ಹೇಳಿದರು.

English summary
West Bengal board’s class 10 examination : As a section of the students written a popular political slogan on their answer papers, the authorities have decided to take penal action against examinees if they replicate the same in the ongoing class 12 exam. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X