ಪಶ್ಚಿಮ ಬಂಗಾಳ: ಬಿಜೆಪಿಯ 'ರಥಯಾತ್ರೆ' ವಾಹನದ ಮೇಲೆ ದಾಳಿ
ಕೋಲ್ಕತ್ತಾ, ಮಾರ್ಚ್ 16: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಸೇರಿದ 'ರಥಯಾತ್ರೆ' ಪ್ರಚಾರ ವಾಹನದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಘಟನೆ ಸಂಭವಿಸಿದೆ, ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ರ‍್ಯಾಲಿ ಮುಗಿದ ಬಳಿಕ ಈ ಘಟನೆ ಸಂಭವಿಸಿದೆ. ಸ್ಥಳದಲ್ಲಿ ಸಾಕಷ್ಟು ಪೊಲೀಸರಿದ್ದರು. ಈ ದಾಳಿಯ ಹಿಂದೆ ಟಿಎಂಸಿ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿಯ ರಥಯಾತ್ರೆ ವಾಹನವು ಎಲ್ಲಾ 9 ಮತ ಕ್ಷೇತ್ರಗಳಿಗೂ ತೆರಳಿ ಪುರುಲಿಯಾಗೆ ವಾಪಸ್ ಆಗುವ ವೇಳೆ ದಾಳಿ ನಡೆದಿದೆ. ಘಟನೆಯಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ ಎಂದು ಅಮಿತ್ ಮಾಳವೀಯ ತಿಳಿಸಿದ್ದಾರೆ.

ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಟಿಎಂಸಿ ಹೇಳಿದೆ. ಒಂದೊಮ್ಮೆ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ಅಂದೇ ಮಾನವಹಕ್ಕುಗಳ ಅಂತ್ಯವಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.
ಬಂಕುರದಲ್ಲಿ ಮಾತನಾಡುತ್ತಾ, ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿರುವ ಎಲ್ಲಾ ಬ್ಯಾಂಕುಗಳಿಗೆ ಬೀಗ ಬೀಳಲಿದೆ. ಹಾಗೆಯೇ ನಿಮ್ಮ ಎಲ್ಲಾ ಹಕ್ಕುಗಳನ್ನು ಕಳೆದುಕೊಳ್ಳಲಿದ್ದೀರಿ ಎಂದಿದ್ದಾರೆ.












Click it and Unblock the Notifications