ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾಗೆ ಮೋಯ್ನಾದಿಂದ ಟಿಕೆಟ್ ನೀಡಿದ ಬಿಜೆಪಿ

ಕೋಲ್ಕತಾ, ಮಾರ್ಚ್ 7: ಕಳೆದ ತಿಂಗಳು ಬಿಜೆಪಿ ಸೇರ್ಪಡೆಯಾಗಿದ್ದ ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾ, ಪಶ್ಚಿಮ ಬಂಗಾಳದ ಪುರ್ಬ ಮೇದಿನಿಪುರ ಜಿಲ್ಲೆಯ ಮೋಯ್ನಾ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಬಲಗೈ ವೇಗಿ ದಿಂಡಾ ಅವರು ತಮ್ಮ ಅಭ್ಯರ್ಥಿಯಾಗಿರಲಿದ್ದಾರೆ ಎಂದು ಬಿಜೆಪಿ ಶನಿವಾರ ಪ್ರಕಟಿಸಿದೆ.

ಕೋಲ್ಕತಾದಲ್ಲಿ ಕಳೆದ ತಿಂಗಳು ನಡೆದ ಸಾರ್ವಜನಿಕ ಸಭೆಯೊಂದರ ವೇಳೆ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರ್ಜುನ್ ಸಿಂಗ್ ಅವರ ಸಮ್ಮುಖದಲ್ಲಿ ಅಶೋಕ್ ದಿಂಡಾ ಬಿಜೆಪಿಗೆ ಸೇರಿಕೊಂಡಿದ್ದರು.

ಪಶ್ಚಿಮ ಬಂಗಾಳ ರಣಜಿ ತಂಡದಲ್ಲಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದ ಅಶೋಕ್ ದಿಂಡಾ, ಭಾರತ ತಂಡದ ಪರ 13 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿ 12 ಹಾಗೂ 17 ವಿಕೆಟ್‌ಗಳನ್ನು ಪಡೆದಿದ್ದರು.

West Bengal Assembly Election 2021: Former Cricketer Ashoke Dinda Is BJPs Candidate From Moyna

ತಮ್ಮ ಕ್ರಿಕೆಟ್ ಸಹೋದ್ಯೋಗಿಯಾಗಿದ್ದ ಮನೋಜ್ ತಿವಾರಿ ತೃಣಮೂಲ ಕಾಂಗ್ರೆಸ್ ಸೇರಿಕೊಂಡ ದಿನವೇ ಅಶೋಕ್ ದಿಂಡಾ ಬಿಜೆಪಿ ಸೇರ್ಪಡೆಯಾಗಿದ್ದರು.

ಮೊಯ್ನಾ ಕ್ಷೇತ್ರದಲ್ಲಿ 2016ರ ಚುನಾವಣೆಯಲ್ಲಿ ಟಿಎಂಸಿಯ ಸಂಗ್ರಾಮ್ ಕುಮಾರ್ ದೋಲಾ ಅವರು ಕಾಂಗ್ರೆಸ್‌ನ ಮಾಣಿಕ್ ಭೌಮಿಕ್ ಅವರನ್ನು ಸುಮಾರು 12,000 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿಯೂ ಅವರೇ ಟಿಎಂಸಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+