ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕುಟುಂಬದ ಮೂವರಿಗೆ ಕೊರೊನಾ ಸೋಂಕು

|
Google Oneindia Kannada News

ಕೊಲ್ಕತ್ತ, ಜೂನ್ 20: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಕುಟುಂಬದ ಮೂವರಿಗೆ ಕೊರೊನಾ ಸೋಂಕು ತಗುಲಿದೆ.

ಸೌರವ್ ಗಂಗೂಲಿ ಸಹೋದರ ಸ್ನೇಹಶೀಶ್ ಪತ್ನಿ ಹಾಗೂ ಆಕೆಯ ತಂದೆ ತಾಯಿಗೆ ಸೋಂಕು ಇರುವುದು ದೃಢಪಟ್ಟಿದೆ. ಸ್ನೇಹಶೀಶ್ ಮಾಜಿ ರಣಜಿ ಕ್ರಿಕೆಟರ್‌ ಆಗಿದ್ದಾರೆ.

Breaking: ಭಾರತದಲ್ಲಿ ಮತ್ತೆ 14,516 ಕೊರೊನಾ ಸೋಂಕಿತರು ಪತ್ತೆBreaking: ಭಾರತದಲ್ಲಿ ಮತ್ತೆ 14,516 ಕೊರೊನಾ ಸೋಂಕಿತರು ಪತ್ತೆ

ಗಂಗೂಲಿ ಸಹೋದರನ ಪತ್ನಿ ಹಾಗೂ ಆಕೆಯ ಪೋಷಕರಿಗೆ ಒಂದೇ ರೀತಿಯ ಅನಾರೋಗ್ಯ ಕಾಣಿಸಿಕೊಂಡಿತ್ತು. ಆದರೆ ಅವರ್ಯಾರೂ ಬೆಹಾಲಾದಲ್ಲಿರುವ ಗಂಗೂಲಿ ಅವರ ಮನೆಯಲ್ಲಿರಲಿಲ್ಲ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ನೇಹಶೀಶ್ ಅವರಿಗೆ ಕೊರೊನಾ ನೆಗೆಟಿವ್ ಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೊಲ್ಕತ್ತ, ಜೂನ್ 20: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಕುಟುಂಬದ ನಾಲ್ವರಿಗೆ ಕೊರೊನಾ ಸೋಂಕು ತಗುಲಿದೆ. ಸೌರವ್ ಗಂಗೂಲಿ ಅವರ ತಂದೆ-ತಾಯಿ ಹಾಗೂ ಅಹೋದರ ಸ್ನೇಹಶೀಶ್ ಅವರ ಪತ್ನಿಗೆ ಸೋಂಕು ಇರುವುದು ದೃಢಪಟ್ಟಿದೆ.ಸ್ನೇಹಶೀಶ್ ಮಾಜಿ ರಣಜಿ ಕ್ರಿಕೆಟರ್‌ ಆಗಿದ್ದಾರೆ. ಗಂಗೂಲಿ ಸಹೋದರ, ಅವರ ಪತ್ನಿ ಹಾಗೂ ಗಂಗೂಲಿ ಪೋಷಕರಿಗೆ ಒಂದೇ ರೀತಿಯ ಅನಾರೋಗ್ಯ ಕಾಣಿಸಿಕೊಂಡಿತ್ತು. ಆದರೆ ಅವರ್ಯಾರೂ ಬೆಹಾಲಾದಲ್ಲಿರುವ ಗಂಗೂಲಿ ಅವರ ಮನೆಯಲ್ಲಿರಲಿಲ್ಲ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸಲಾಗಿದ್ದು, ವರದಿ ಬಂದ ಬಳಿಕ ಅವನ್ನು ಆಸ್ಪತ್ರೆಯಲ್ಲೇ ಇರಿಸಿಕೊಳ್ಳುವುದಾ ಅಥವಾ ಮನೆಗೆ ಕಳುಹಿಸುವುದಾ ಎನ್ನುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಕೊರೊನಾ ವೈರಸ್ ದೇಶದಲ್ಲಿ ಹರಡಲು ಆರಂಭಿಸಿದ ದಿನದಿಂದ ಬಡವರು, ಹಿಂದುಳಿದವ ವರ್ಗ, ವಲಸೆ ಕಾರ್ಮಿಕರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ. ಇಸ್ಕಾನ್‌ನಲ್ಲಿ ನಿತ್ಯ 10 ಸಾವಿರ ಮಂದಿಗೆ ಆಹಾರ ಒದಗಿಸಲು ಧನ ಸಹಾಯ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿರುವ ಬೇಲೂರು ಮಠಕ್ಕೆ 2 ಸಾವಿರ ಕೆಜಿ ಅಕ್ಕಿಯನ್ನು ನೀಡಿದ್ದಾರೆ.

ಇಂದು ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸಲಾಗಿದ್ದು, ವರದಿ ಬಂದ ಬಳಿಕ ಅವನ್ನು ಆಸ್ಪತ್ರೆಯಲ್ಲೇ ಇರಿಸಿಕೊಳ್ಳುವುದಾ ಅಥವಾ ಮನೆಗೆ ಕಳುಹಿಸುವುದಾ ಎನ್ನುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಕೊರೊನಾ ವೈರಸ್ ದೇಶದಲ್ಲಿ ಹರಡಲು ಆರಂಭಿಸಿದ ದಿನದಿಂದ ಬಡವರು, ಹಿಂದುಳಿದವ ವರ್ಗ, ವಲಸೆ ಕಾರ್ಮಿಕರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ. ಇಸ್ಕಾನ್‌ನಲ್ಲಿ ನಿತ್ಯ 10 ಸಾವಿರ ಮಂದಿಗೆ ಆಹಾರ ಒದಗಿಸಲು ಧನ ಸಹಾಯ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿರುವ ಬೇಲೂರು ಮಠಕ್ಕೆ 2 ಸಾವಿರ ಕೆಜಿ ಅಕ್ಕಿಯನ್ನು ನೀಡಿದ್ದಾರೆ.ಪಶ್ಚಿಮ ಬಂಗಾಳದಲ್ಲಿ 13,090 ಮಂದಿ ಕೊರೊನಾ ಸೋಂಕಿತರಿದ್ದಾರೆ.

7,303 ಮಂದಿ ಗುಣಮುಖರಾಗಿದ್ದಾರೆ. 529 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಒಂದೇ ದಿನ 14,516 ಮಂದಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. 24 ಗಂಟೆಗಳಲ್ಲಿ 375 ಮಂದಿ ಮೃತಪಟ್ಟಿದ್ದಾರೆ.

ಇದುವರೆಗೂ ಒಟ್ಟು 3,95,048 ಸೋಂಕಿತರಿದ್ದಾರೆ, 2,13,831 ಮಂದಿ ಗುಣಮುಖರಾಗಿದ್ದಾರೆ. 168269 ಸಕ್ರಿಯ ಪ್ರಕರಣಗಳಿವೆ.

ಭಾರತದಲ್ಲಿ ಗುಣಮುಖರಾದವರ ಪ್ರಮಾಣ ಶೇ.54.12ರಷ್ಟು ಏರಿಕೆಯಾಗಿದೆ. ಒಂದೇ ದಿನದಲ್ಲಿ 14 ಸಾವಿರ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ. ದಿನದಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.

English summary
The Coronavirus scare continues to spread all across the country, with former India captain and current Board of Control for Cricket in India (BCCI) president Sourav Ganguly' family members being the latest to contract the virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X