ಪಶ್ಚಿಮ ಬಂಗಾಳದಲ್ಲಿ ಎರಡು ತಲೆ ಹಾವು ಪತ್ತೆ!

ಕಲ್ಕತ್ತಾ, ಡಿಸೆಂಬರ್ 11: ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಕಾಡಂಚಿನ ಹಳ್ಳಿಯೊಂದರಲ್ಲಿ ಎರಡು ತಲೆಯ ನಾಗರ ಹಾವೊಂದು ಕಾಣಿಸಿಕೊಂಡು ಅಚ್ಚರಿಗೆ ಕಾರಣವಾಗಿದೆ.

ಮಿಡ್ನಾಪುರ ಜಿಲ್ಲೆಯ ಬೆಲ್ಡಾ ಅರಣ್ಯ ವಲಯದ ಎಕರುಕಿ ಗ್ರಾಮವೊಂದರಲ್ಲಿ ಈ ಎರಡು ತಲೆಯ ಹಾವು ಕಾಣಿಸಿಕೊಂಡಿದೆ. ಇದರಿಂದ ತೀವ್ರ ಅಚ್ಚರಿಗೆ ಒಳಗಾದ ಗ್ರಾಮಸ್ಥರು, ಇದು ದೈವ ಸೃಷ್ಠಿ ಎಂದು ಅದಕ್ಕೆ ಪೂಜೆ ಮಾಡಿ, ಹಾಲುಣಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳಿಗೆ ಈ ಹಾವನ್ನು ವಶಕ್ಕೆ ಒಪ್ಪಿಸಲು ಗ್ರಾಮಸ್ಥರು ನಿರಾಕರಿಸಿದ ಘಟನೆ ನಡೆದಿತ್ತು.

Two Headed Snake Spotted In West Bengal People Surprised

ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಜೀವಿಶಾಸ್ತ್ರಜ್ಞರ ಜೊತೆ ಗ್ರಾಮಕ್ಕೆ ಆಗಮಿಸಿ, ತಿಳಿ ಹೇಳಿದ ನಂತರ ಹಾವನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದೆ. ಈ ಹಾವು ಯಾವುದೇ ದೇವರ ಸೃಷ್ಠಿ ಅಲ್ಲ. ಅಪರೂಪಕ್ಕೆ ಭ್ರೂಣದಲ್ಲಿ ಉಂಟಾದ ಜೈವಿಕ ವ್ಯತ್ಯಾಸದಿಂದ ಎರಡು ತಲೆಯ ಹಾವು ಹುಟ್ಟುತ್ತವೆ. ಸಯಾಮಿ ಶಿಶುಗಳಂತೆ ಇದೂ ಸಹ. ವಿಷಕಾರಿ ಹಾವು ಇದಾಗಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+