ಪಶ್ಚಿಮ ಬಂಗಾಳದಲ್ಲಿ ತೆಲಂಗಾಣ ಮಾದರಿ ಅತ್ಯಾಚಾರ, ಕೊಲೆ
ಕೊಲ್ಕತ್ತಾ, ಜನವರಿ 08: ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಮಾಡಿ ಹತ್ಯೆಗೈದ ಮಾದರಿಯಲ್ಲಿಯೇ ಪಶ್ಚಿಮ ಬಂಗಾಳದಲ್ಲಿ ಅತ್ಯಾಚಾರ ನಡೆದಿದೆ.
ಪಶ್ಚಿಮ ಬಂಗಾಳದ ದಿನಾಜ್‍ಪುರ್ ಜಿಲ್ಲೆಯ ಬಾಲುಘಾಟ್ ಪ್ರದೇಶದಲ್ಲಿ 17 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಪ್ರಕರಣ ನಡೆದಿದೆ.
ಮೂರು ಮಂದಿ ಕಿರಾತಕರು ಯುವತಿಯನ್ನು ಹೊತ್ತೊಯ್ದು ಅತ್ಯಾಚಾರ ಮಾಡಿ ಸುಟ್ಟು ಹಾಕಿದ್ದಾರೆ. ಮೂವರನ್ನು ಪೊಲೀಸರು ಬಂಧಿಸಿದ್ದು ತೀವ್ರ ವಿಚಾರಣೆ ನಡೆಸಿದ್ದಾರೆ.

ಭಾನುವಾರ ಸಂಜೆ ಅಂಗಡಿಗೆ ಹೋಗಿದ್ದ ಹುಡುಗಿ ಮನೆಗೆ ವಾಪಸ್ ಬಂದಿರಲಿಲ್ಲ, ಆತಂಕಕ್ಕೆ ಒಳಗಾಗಿದ್ದ ಪೋಷಕರು ಹುಡುಕಾಟ ನಡೆಸಿದ್ದರು, ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಿನ್ನೆ ಸಂಜೆ ಕುಮಾರ್‍ಗಂಜ್ ಪ್ರದೇಶದ ಕಾಲುವೆಯೊಂದರಲ್ಲಿ ಸುಟ್ಟು ಕರಕಲಾದ ಯುವತಿ ಶವ ಪತ್ತೆಯಾಗಿತ್ತು.
ಅಳಿದುಳಿದ ಶವದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ತೆಲಂಗಾಣದ ಹೈದರಾಬಾದ್ ಬಳಿ ಕೆಲವು ದಿನಗಳ ಹಿಂತಹುದೇ ಘಟನೆ ವರದಿ ಆಗಿತ್ತು. ಪಶುವೈದ್ಯೆಯನ್ನು ಡ್ರಾಪ್ ನೀಡುವ ನೆಪದಲ್ಲಿ ಹೊತ್ತೊಯ್ದಿದ್ದ ನಾಲ್ವರು ಅತ್ಯಾಚಾರಗೈದು, ಸುಟ್ಟು ಹಾಕಿದ್ದರು. ನಂತರ ಅವರನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆಗೈದರು.












Click it and Unblock the Notifications