ಬಿಜೆಪಿಗೆ 'ಶ್ರೀರಾಮ' ಚುನಾವಣಾ ಏಜೆಂಟ್ ಇದ್ದಂತೆ: ಮಮತಾ ಟೀಕೆ
Recommended Video
ಕೋಲ್ಕತ್ತ, ಮೇ 7: 'ಶ್ರೀರಾಮ' ಬಿಜೆಪಿಗೆ ಚುನಾವಣಾ ಏಜೆಂಟ್ ಇದ್ದಂತೆ, ಮೋದಿಯ ಅಧಿಕಾರಾವಧಿಯಲ್ಲಿ ಒಂದಾದರೂ ರಾಮ ಮಂದಿರ ನಿರ್ಮಿಸಿದ್ದಾಆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಶ್ರೀರಾಮನನ್ನು ಚುನಾವಣಾ ಏಜೆಂಟ್‌ಗಳನ್ನಾಗಿ ಮಾಡಿಕೊಂಡಿದ್ದಾರೆ, ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಅನ್ಯರ ಮೇಲೆ ಒತ್ತಡ ಹೇರಲು ನಿಮಗೆ ಅಧಿಕಾರವಿಲ್ಲ.
ಜರ್ಗ್ರಾಂನಲ್ಲಿ ಸೋಮವಾರ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಶ್ರೀ ರಾಮಚಂದ್ರನನ್ನು ಪ್ರಶಂಸಿದ್ದಲ್ಲದೆ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ಧೈರ್ಯವಿದ್ದರೆ ತಮ್ಮನ್ನು ಬಂಧಿಸುವಂತೆ ಮಮತಾ ಬ್ಯಾನರ್ಜಿ ಅವರಿಗೆ ಸವಾಲು ಹಾಕಿದ್ದರು.

ಶ್ರೀರಾಮನ ಬಗ್ಗೆ ನಮಗೂ ಗೌರವವಿದೆ. ಆ ಗೌರವವನ್ನು ಹೇಗೆ ತೋರಿಸಿಕೊಳ್ಳಬೇಕು ಎಂಬುದನ್ನು ನಿಮ್ಮಿಂದ ಕಲಿಯುವ ಅಗತ್ಯವಿಲ್ಲ. ನಾನು ಜೈ ಹಿಂದ್, ವಂದೇ ಮಾತರಂ, ಮಾ, ಮಾಟಿ, ಮಾನುಷ್ ಕಿ ಜೈ, ತೃಣಮೂಲ ಕಾಂಗ್ರೆಸ್ ಕಿ ಜೈ ಎಂದು ಘೋಷಣೆ ಕೂಗುತ್ತೇನೆ ಹೊರತು, ಬಿಜೆಪಿಯ ಬಯಕೆಯ ಘೋಷಣೆಗಳನ್ನು ಎಂದಿಗೂ ಕೂಗುವುದಿಲ್ಲ ಎಂದರು.
ಕೆಲದಿನಗಳ ಹಿಂದೆ ಮಮತಾ ಬ್ಯಾನರ್ಜಿ ತೆರಳುತ್ತಿದ್ದ ಮಾರ್ಗದಲ್ಲಿ ನಿಂತಿದ್ದ ಕೆಲವು ಯುವಕರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು.












Click it and Unblock the Notifications