ವಿದೇಶದಿಂದ ಬಂದ ಸಂಸದೆ ಮಿಮಿ ಚಕ್ರವರ್ತಿ 7 ದಿನಗಳ ಗೃಹಬಂಧನ

ಕೊಲ್ಕತ್ತಾ, ಮಾರ್ಚ್ 18: ಸಂಸದೆ ಹಾಗೂ ನಟಿ ಮಿಮಿ ಚಕ್ರವರ್ತಿ ಅವರನ್ನು 7 ದಿನಗಳ ಕಾಲ ಗೃಹ ಬಂಧನದಲ್ಲಿರುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ. ಲಂಡನ್‌ಗೆ ತೆರಳಿದ್ದ ಮಿಮಿ ಚಕ್ರವರ್ತಿ ಮಂಗಳವಾರವಷ್ಟೆ ಭಾರತಕ್ಕೆ ಬಂದಿದ್ದಾರೆ. ಕೊರೊನಾ ಸೋಂಕು ಅನುಮಾನದಿಂದ ಮನೆಯಲ್ಲಿರಲು ಸೂಚಿಸಲಾಗಿದೆ.

ಮುಂದಿನ ತಪಾಸಣೆವರೆಗೂ ಪ್ರತ್ಯೇಕ ಕೊಠಡಿಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಿಮಿ ಚಕ್ರವರ್ತಿ ಇರಬೇಕಾಗಿದೆ. ಖುದ್ದು ಮನೆಯವರು ಕೂಡ ಆಕೆಯನ್ನು ಭೇಟಿ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.

'ಭಾಜಿ' ಸಿನಿಮಾದ ಶೂಟಿಂಗ್ ಕಾರಣದಿಂದ ಲಂಡನ್‌ಗೆ ಹೋಗಿದ್ದ ಮಿಮಿ ಮಂಗಳವಾರ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಕೊರೊನಾ ಪರೀಕ್ಷೆಗೆ ಒಳಪಡಿಸಿ ಥರ್ಮಲ್ ಸ್ಕ್ರೀನಿಂಗ್ ಕೂಡ ಮಾಡಲಾಗಿದೆ. ವಿದೇಶದಿಂದ ಬಂದ ಪ್ರಯಾಣಿಕರನ್ನು 7 ದಿನದ ವರೆಗೂ ಗೃಹ ಬಂಧನದಲ್ಲಿಡುಂತೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿರುವ ಹಿನ್ನೆಲೆ ಮಿಮಿ ಚಕವರ್ತಿ ಕೂಡ ಗೃಹ ಬಂಧನಕ್ಕೆ ಒಳಗಾಗಬೇಕಿದೆ.

Mimi Chakraborty Will Be Home Quarantined For 14 Days

ಈ ಕುರಿತು ಮಿಮಿ ಚಕ್ರವರ್ತಿ ಪ್ರತಿಕ್ರಿಯಿಸಿದ್ದು ''ನಾನು ಲಂಡನ್‌ನಿಂದ ದುಬೈಗೆ ತೆರೆಳಿ ಅಲ್ಲಿಂದ ಭಾರತಕ್ಕೆ ಬಂದಿದ್ದೇನೆ. ನಾನು ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ನನ್ನ ಪೋಷಕರಿಗೂ ತಿಳಿಸಿದ್ದೇನೆ. ನನ್ನನ್ನು ಮನೆಯಲ್ಲಿ ಯಾರೂ ಭೇಟಿ ಮಾಡಬೇಡಿ ಎಂದು. ನನ್ನ ತಂದೆಗೆ 65 ವರ್ಷ ವಯಸ್ಸಾಗಿದೆ. ಮೊದಲ ಏಳು ದಿನ ನಾನು ಮನೆಯಲ್ಲೇ ಇರಲಿದ್ದೇನೆ'' ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

''ಇನ್ನು ಲಂಡನ್‌ನಲ್ಲಿ ಹೇಗಿದೆ ಸ್ಥಿತಿ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಿಮಿ ''ಅಲ್ಲಿ ಮಾಸ್ಕ್‌ ಧರಿಸಿರುವ ಜನರು ಹೆಚ್ಚಾಗಿ ನೋಡಲಿಲ್ಲ. ವಿಮಾನ ನಿಲ್ದಾಣಗಳು ಖಾಲಿ ಇದ್ದವು. ದುಬೈನಲ್ಲಿ ಅದೇ ರೀತಿ ಇತ್ತು. ಅಂಗಡಿಗಳು ಮಾತ್ರ ತೆರೆದಿತ್ತು'' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+