ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪಾಸಿಟಿವ್ ವರದಿ ಇಟ್ಟುಕೊಂಡು ಮೂರು ರಾಜ್ಯ ಸುತ್ತಿದ

|
Google Oneindia Kannada News

ಕೊಲ್ಕತ್ತ, ಜುಲೈ 17: ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರೂ, ಮೂರು ರಾಜ್ಯಗಳನ್ನು ಸುತ್ತಾಡಿ ಬೇಜವಾಬ್ದಾರಿಯಿಂದ ವರ್ತಿಸಿರುವ ಘಟನೆ ನಡೆದಿದೆ.

Recommended Video

Bengaluru Lockdown ಮುಂದಿನ ವಾರವೂ ಇರುತ್ತಾ ? | Oneindia Kannada

34 ವರ್ಷದ ವ್ಯಕ್ತಿಯೊಬ್ಬ ತನಗೆ ಸೋಂಕು ಬಂದಿರುವ ಬಗ್ಗೆ ಸಿಕ್ಕಿರುವ ವರದಿಯನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು, ವಿಮಾನದಲ್ಲಿ ಮೂರು ರಾಜ್ಯಗಳನ್ನು ಸುತ್ತಿದ್ದಾನೆ.

ಏರ್ ಇಂಡಿಯಾ ಸಿಬ್ಬಂದಿಗೆ 5 ವರ್ಷದವರೆಗೆ ವೇತನ ರಹಿತ ರಜೆಏರ್ ಇಂಡಿಯಾ ಸಿಬ್ಬಂದಿಗೆ 5 ವರ್ಷದವರೆಗೆ ವೇತನ ರಹಿತ ರಜೆ

ಆದರೆ ವಿಮಾನ ನಿಲ್ದಾಣದ ಚೆಕಿಂಗ್‌ ಪಾಯಿಂಟ್‌ನಲ್ಲಿ ಜ್ವರ ತಪಾಸಣೆ ಮಾಡುವ ಸಂದರ್ಭದಲ್ಲಿ ನೆಗೆಟಿವ್‌ ತೋರಿಸಿರುವ ಕಾರಣ, ಯಾರಿಗೂ ಈತ ಪಾಸಿಟಿವ್‌ ಗೊತ್ತಾಗಿರಲಿಲ್ಲ.

Man Flies 3 States With COVID-19 Report In Pocket

ಆತ ಮಹಾರಾಷ್ಟ್ರ, ದೆಹಲಿ, ಅಸ್ಸಾಂ ಮೂಲಕ ಗುವಾಹಟಿಗೆ ಹೋಗಿದ್ದಾನೆ. ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ಹೋಗಿದ್ದ. ಸ್ಪೈಸ್‌ ಜೆಟ್‌ ವಿಮಾನದಲ್ಲಿ ಈತ ಎಲ್ಲಾ ಕಡೆ ಪ್ರಯಾಣ ಬೆಳೆಸಿದ್ದರೂ, ಯಾರಿಗೂ ಈತ ಕರೊನಾ ಸೋಂಕಿತ ಎಂದು ತಿಳಿದಿರಲಿಲ್ಲ.

ಕೊಲ್ಕತ್ತಾಕ್ಕೆ ತೆರಳಿದ ಬಳಿಕ ವಿಮಾನನಿಲ್ದಾಣದ ಅಧಿಕಾರಿಗಳಿಗೆ ತಮ್ಮನ್ನು ಕ್ವಾರಂಟೈನ್‌ ಕೇಂದ್ರಕ್ಕೆ ಕೂಡಲೇ ರವಾನೆ ಮಾಡುವಂತೆ ಹೇಳಿದ್ದಾರೆ. ತಮಗೆ ಕೆಮ್ಮಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂದಿದ್ದಾರೆ.

ಆದರೆ ಅವರನ್ನು ಚೆಕ್‌ ಮಾಡಿದ ಅಧಿಕಾರಿಗಳು ನಿಮಗೆ ಏನೂ ಆಗಿಲ್ಲ, ಎಲ್ಲವೂ ಸರಿಯಾಗಿದೆ ಎಂದಿದ್ದಾರೆ. ನಂತರ ತಮ್ಮ ಬ್ಯಾಗ್‌ನಲ್ಲಿದ್ದ ಪಾಸಿಟಿವ‌ ರಿಪೋರ್ಟ್‌ ತೋರಿಸಿದ ಮೇಲೆ ಅಧಿಕಾರಿಗಳು ಹೌಹಾರಿದ್ದರು.

ಕೂಡಲೇ ಅವರನ್ನು ಆರೋಗ್ಯ ಇಲಾಖೆಗೆ ಕಳುಹಿಸಲಾಯಿತು. ಇದೀಗ ವಿಮಾನದಲ್ಲಿನ ಎಲ್ಲಾ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದೆ. ಇದೇ ಕಾರಣಕ್ಕೆ ವಿಮಾನಯಾನವನ್ನು ಸ್ಥಗಿತಗೊಳಿಸಲಾಗಿತ್ತು.

English summary
A 34-year-old man flew from New Delhi to Guwahati and landed in Kolkata to declare at the airport that he was coronavirus positive and needed to be kept in quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X