ಗಾಳಿಯಿಂದಲೂ ಕೊರೊನಾ: ಕಡ್ಡಾಯವಾಗಿ ಮಾಸ್ಕ್ ಧರಿಸಲು ಮಮತಾ ಸೂಚನೆ
ಕೊಲ್ಕತ್ತ, ಅಕ್ಟೋಬರ್ 07: ಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತಿದ್ದು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೂಚನೆ ನೀಡಿದ್ದಾರೆ.
'ನಾನು ನೋಡಿದಂತೆ ಸಾಕಷ್ಟು ಮಂದಿ ಮಾಸ್ಕ್ ಧರಿಸುತ್ತಿಲ್ಲ, ದುರ್ಗಾ ಪೂಜೆಯ ವೇಳೆ ಸರ್ಕಾರ ಹಾಗೂ ಪೊಲೀಸರು ಕಡ್ಡಾಯವಾಗಿ ಮಾಸ್ಕ್ ಹಂಚಿಕೆ ಮಾಡಬೇಕು, ಜನರು ಮಾಸ್ಕ್ ಧರಿಸುವುದರಿಂದಾಗುವ ಪ್ರಯೋಜನಗಳ ಬಗ್ಗೆ ಅರಿತುಕೊಳ್ಳಬೇಕು' ಎಂದರು.
ಯಾರು ನಂಬುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ಕೊರೊನಾ ಸೋಂಕು ಇದೀಗ ಗಾಳಿಯ ಮೂಲಕವೂ ಹುಟ್ಟಿಕೊಳ್ಳುತ್ತಿದೆ. ನಮ್ಮ ಮನೆಯಲ್ಲಿ ನನಗೆ ಟೀ ನೀಡುತ್ತಿದ್ದ ಮನೆಕೆಲಸದವನಿಗೂ ಕೂಡ ಕೊರೊನಾ ತಗುಲಿದೆ, ಹೀಗಿ ಸೋಂಕು ಗಾಳಿಯಿಂದ ಹರಡುತ್ತಿದೆ ಎಂಬುದು ಸಾಬೀತಾಗಿದೆ.

ಕೇಂದ್ರ ಆರೋಗ್ಯ ಇಲಾಖೆಯು ಇಲ್ಲಿಯವರೆಗೆ ಗಾಳಿಯಿಂದ ಕೂಡ ಕೊರೊನಾ ಸೋಂಕು ಹರಡುತ್ತದೆ ಎನ್ನುವಂತಹ ಎಚ್ಚರಿಕೆಯ ಸಂದೇಶವನ್ನು ರವಾನಿಸಿಲ್ಲ. ಈ ಹಿಂದೆ ಮಮತಾ ಬ್ಯಾನರ್ಜಿಯವರು ಸಮುದಾಯ ಸೋಂಕಿನ ಕುರಿತು ಕೂಡ ಎಚ್ಚರಿಕೆ ನೀಡಿದ್ದರು. ದುರ್ಗಾ ಪೂಜೆಯ ವೇಳೆ ಹಲವು ನಿರ್ಬಂಧಗಳನ್ನು ಹೇರಬೇಕಾಗಿದೆ.
ಹೆಚ್ಚು ಮಂದಿ ಸೇರುವುದನ್ನು ತಡೆಯಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ದುರ್ಗಾ ಪೂಜೆಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ 3370 ಪ್ರಕರಣಗಳು ಪತ್ತೆಯಾಗಿವೆ.63 ಮಂದಿ ಸಾವನ್ನಪ್ಪಿದ್ದಾರೆ.












Click it and Unblock the Notifications