• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಮತಾ ಬ್ಯಾನರ್ಜಿ 'ಭಯೋತ್ಪಾದಕರ ರಾಜಕೀಯ ತಾಯಿ' ಎಂದ ಬಿಜೆಪಿ ನಾಯಕ

|
Google Oneindia Kannada News

ಕೋಲ್ಕತ್ತಾ, ನವೆಂಬರ್‌ 15: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಸೌಮಿತ್ರಾ ಖಾನ್‌, "ಮಮತಾ ಬ್ಯಾನರ್ಜಿ ದೇಶದ ಎಲ್ಲಾ ಭಯೋತ್ಪಾದಕರ ರಾಜಕೀಯ ತಾಯಿ," ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ವ್ಯಾಪ್ತಿಯನ್ನು 15 ಕಿಲೋಮೀಟರ್‌ನಿಂದ 50 ಕಿಲೋಮೀಟರ್‌ಗೆ ವಿಸ್ತರಿಸುವ ಕೇಂದ್ರದ ಕ್ರಮವನ್ನು ಮಧ್ಯಸ್ಥಿಕೆ ವಹಿಸಿ ಹಿಂಪಡೆಯಬೇಕು ಎಂದು ಒತ್ತಾಯಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿರುವ ಬಿಜೆಪಿ ನಾಯಕ ಸೌಮಿತ್ರಾ ಖಾನ್‌, "ಮಮತಾ ಬ್ಯಾನರ್ಜಿ ದೇಶದ ಎಲ್ಲಾ ಭಯೋತ್ಪಾದಕರ ರಾಜಕೀಯ ತಾಯಿ," ಎಂದಿದ್ದಾರೆ.

ಟಿಎಂಸಿ, ಬಿಜೆಪಿ ವಾಕ್ಸಮರಕ್ಕೆ ಕೇಂದ್ರವಾಗಿಯೇ ಉಳಿದ ನಂದಿಗ್ರಾಮಟಿಎಂಸಿ, ಬಿಜೆಪಿ ವಾಕ್ಸಮರಕ್ಕೆ ಕೇಂದ್ರವಾಗಿಯೇ ಉಳಿದ ನಂದಿಗ್ರಾಮ

ಇನ್ನು ಇದೇ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಆಗ್ರಹವನ್ನು ಕೇಳಬೇಡಿ ಎಂದು ಪ್ರಧಾನಿ ಮೋದಿಗೆ ಮನವಿ ಮಾಡಿದ ಸೌಮಿತ್ರಾ ಖಾನ್‌, "ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳವನ್ನು ನಾಶ ಮಾಡಿದಂತೆ ಇಡೀ ದೇಶವನ್ನೇ ನಾಶ ಮಾಡಲು ಬಯಸಿದ್ದಾರೆ," ಎಂದು ದೂರಿದ್ದಾರೆ.

"ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಡೀ ದೇಶವನ್ನೇ ಧರ್ಮಶಾಲೆಯನ್ನಾಗಿಸುವ ಯತ್ನವನ್ನು ಮಾಡುತ್ತಿದ್ದಾರೆ," ಎಂದು ಆರೋಪ ಮಾಡಿದ್ದಾರೆ. "ಮಮತಾ ಬ್ಯಾನರ್ಜಿ ಪೌರತ್ವ ತಿದ್ದುಪಡಿ ಕಾಯ್ದೆಯು ಸಂಸತ್ತಿನಲ್ಲಿ ಅನುಮೋದನೆ ಆದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಮಮತಾ ಬ್ಯಾನರ್ಜಿ ದೇಶದ ಎಲ್ಲಾ ಭಯೋತ್ಪಾದಕರ ರಾಜಕೀಯ ತಾಯಿ," ಎಂದು ಟೀಕೆ ಮಾಡಿದ್ದಾರೆ.

"ಎನ್‌ಆರ್‌ಸಿ ಕಾಯ್ದೆ ಅನುಮೋದನೆ ಆದ ಸಂದರ್ಭದಲ್ಲಿ ಅದಕ್ಕೂ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಮಮತಾ ಬ್ಯಾನರ್ಜಿ ದೇಶವನ್ನು ಧರ್ಮಶಾಲೆಯನ್ನಾಗಿಸಲು ಮುಂದಾಗಿದ್ದಾರೆ. ಭಾರತವು ಮಮತಾ ಬ್ಯಾನರ್ಜಿಯ ಧರ್ಮಶಾಲೆ ಎಂದಾದರೆ, ರೋಹಿಗ್ಯಾರು ಭಾರತಕ್ಕೆ ಬರಲಿದ್ದಾರೆ. ಇಲ್ಲಿಯ ಜನರನ್ನು ಕೊಲ್ಲಲಿದ್ದಾರೆ. ಅವರು ಭಾರತ ಸರ್ಕಾರದ ಹಣವನ್ನು ದೋಚಲು ಇಲ್ಲಿಗೆ ಬರುತ್ತಾರೆ. ಭಾರತವು ರೋಹಿಗ್ಯಾರು ಭಾರತಕ್ಕೆ ಆಗಮಿಸಿ, ಇಲ್ಲಿನ ಜನರನ್ನು ಕೊಂದು, ಸರ್ಕಾರದ ಹಣವನ್ನು ದೋಚುವ ಧರ್ಮಶಾಲೆ ಆಗಬೇಕೇ," ಎಂದು ಪ್ರಶ್ನಿಸಿದರು.

ಬಂಗಾಳ ಸಚಿವ ಸುಬ್ರಾತ ಮುಖರ್ಜಿ ನಿಧನ: 'ಆಘಾತವನ್ನು ಎದುರಿಸಲು ಆಗುತ್ತಿಲ್ಲ' ಎಂದ ಮಮತಾಬಂಗಾಳ ಸಚಿವ ಸುಬ್ರಾತ ಮುಖರ್ಜಿ ನಿಧನ: 'ಆಘಾತವನ್ನು ಎದುರಿಸಲು ಆಗುತ್ತಿಲ್ಲ' ಎಂದ ಮಮತಾ

ರೋಹಿಗ್ಯಾರಿಗೆ ಮಮತಾ ಬೆಂಬಲ ಎಂದ ಸೌಮಿತ್ರಾ ಖಾನ್‌

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೇಶದ ಭದ್ರತೆಯನ್ನು ಕೊನೆ ಮಾಡುವ ನಿಟ್ಟಿನಲ್ಲಿ ರೋಹಿಗ್ಯರಿಗೆ ಬೆಂಬಲವನ್ನು ನೀಡುತ್ತಿದ್ದಾರೆ ಎಂದು ಕೂಡಾ ಬಿಜೆಪಿ ನಾಯಕ ಸೌಮಿತ್ರಾ ಖಾನ್‌ ದೂರಿದ್ದಾರೆ. "ಮಮತಾ ಬ್ಯಾನರ್ಜಿ ದೇಶದ ಭದ್ರತೆಗೆ ತೊಂದರೆ ಉಂಟು ಮಾಡುವ ರೋಹಿಗ್ಯರಿಗೆ ಬೆಂಬಲ ನೀಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ವ್ಯಾಪ್ತಿಯನ್ನು 15 ಕಿಲೋಮೀಟರ್‌ನಿಂದ 50 ಕಿಲೋಮೀಟರ್‌ಗೆ ವಿಸ್ತರಿಸುವ ಕೇಂದ್ರದ ಕ್ರಮದಿಂದಾಗಿ ಭಯೋತ್ಪಾದಕರು ಭಾರತಕ್ಕೆ ಆಗಮಿಸಲು ಸಾಧ್ಯವಾಗುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಅಸಮಾಧಾನಗೊಂಡಿದ್ದಾರೆ. ಇದರಿಂದಾಗಿ ಈ ಕೇಂದ್ರದ ಕ್ರಮವನ್ನು ವಿರೋಧ ಮಾಡುತ್ತಿದ್ದಾರೆ. ಇದು ಮಮತಾರ ರಾಜಕೀಯ," ಎಂದು ಆರೋಪ ಮಾಡಿದ್ದಾರೆ.

ಪಶ್ಚಿಮ ಬಂಗಾಳ ಸಂಸತ್ತಿನಲ್ಲಿ ನಿರ್ಣಯವನ್ನು ಮಂಡನೆ ಮಾಡಲಿರುವ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಇದಕ್ಕೆ ಪ್ರತಿಕ್ರಿಯೆ ನೀಡಿದ ಸೌಮಿತ್ರಾ ಖಾನ್‌, "ಮುಖ್ಯಮಂತ್ರಿಗೆ ರಾಜ್ಯದ ಮೇಲೆ ನಂಬಿಕೆ ಇಲ್ಲ. ಸಿಎಂ ಮಮತಾ ಸಂಸತ್ತಿನ ನೀತಿಯನ್ನು ಕೂಡಾ ಪಾಲಿಸುವುದಿಲ್ಲ," ಎಂದು ಹೇಳಿದರು. "ಭಾರತದ ರಚನೆಯ ಮೇಲೆ ಮಮತಾ ಬ್ಯಾನರ್ಜಿ ಎಂದಾದರೂ ನಂಬಿಕೆ ಇರಿಸಿದ್ದಾರೆಯೇ?, ಮಮತಾ ಬ್ಯಾನರ್ಜಿ ರಾಜ್ಯಗಳ ಮೇಲೆ ನಂಬಿಕೆ ಇರಿಸಿಲ್ಲ, ಸಂಸತ್ತಿನ ನೀತಿಯನ್ನು ಮಮತಾ ಪಾಲನೆ ಮಾಡುವುದಿಲ್ಲ. ದೇಶವನ್ನು ವಿರೋಧ ಮಾಡುವುದೇ ಮಮತಾ ಬ್ಯಾನರ್ಜಿಯ ಉದ್ಯೋಗವಾಗಿ ಬಿಟ್ಟಿದೆ," ಎಂದು ಲೇವಡಿ ಮಾಡಿದರು.

(ಒನ್‌ಇಂಡಿಯಾ ಸುದ್ದಿ)

English summary
Mamata Banerjee Political Mother Of Terrorists In Country says BJP Leader Saumitra Khan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion