• search
 • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೀದಿ ನಾಡಲ್ಲಿ ಜೈಶ್ರೀರಾಮ್ ಅನ್ನೋ ಹಾಗಿಲ್ಲ, ಇಫ್ತಾರ್ ಕೂಟಕ್ಕೆ ಅಡ್ಡಿಯಿಲ್ಲ!

|
   ಮಮತಾ ಬ್ಯಾನರ್ಜಿಗೆ ಜೈ ಶ್ರೀರಾಮ್ ಅಂದ್ರೆ ಅಪಥ್ಯ.....ಇಫ್ತಾರ್ ಕೂಟಕ್ಕೆ ಅಡ್ಡಿಯಿಲ್ಲ | Oneindia Kannada

   ಕೋಲ್ಕತ್ತಾ, ಜೂನ್ 04: ಕೋಲ್ಕತ್ತಾ ಮುನ್ಸಿಪಲ್ ಕಾರ್ಪೋರೇಶನ್ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾಗವಹಿಸಿದ್ದು ಇದೀಗ ಹೊಸ ಚರ್ಚೆಗೆ ನಾಂದಿ ಹಾಡಿದೆ.

   "ಮಮತಾ ಬ್ಯಾನರ್ಜಿ ಅವರಿಗೆ ಜೈ ಶ್ರೀರಾಮ್ ಅಪಥ್ಯ. ಆದರೆ ಇಫ್ತಾರ್ ಕೂಟಕ್ಕೆ ಮಾತ್ರ ಅಡ್ಡಿಯಿಲ್ಲ" ಎಂದು ರಾಮಭಕ್ತರು ಲೇವಡಿ ಮಾಡಿದ್ದಾರೆ.

   ವಿಡಿಯೋ: ಬಿಜೆಪಿ ಕಚೇರಿ ಬಾಗಿಲು ಮುರಿದು ಟಿಎಂಸಿ ಚಿಹ್ನೆ ಬಿಡಿಸಿದ ದೀದಿ!

   ಜಾತ್ಯಾತೀತರು ಎನ್ನುವವರು ಎಲ್ಲಾ ಮತಗಳಿಗೂ ಸಮಾನ ಗೌರವ ನೀಡಬೇಕು. ಆದರೆ ಹಿಂದುಗಳು ಜೈಶ್ರೀರಾಮ್ ಎಂದು ಕೂಗಿದರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವವರು, ಮುಸ್ಲಿಮರ ಇಫ್ತಾರ್ ಕೂಟದಲ್ಲಿ ಮಾತ್ರ ಸಂತೋಷದಿಂದ ಭಾಗವಹಿಸುವುದು ತಾರತಮ್ಯವಲ್ಲವೇ ಎಂದು ಬಂಗಾಳದ ಜನರು ಪ್ರಶ್ನಿಸಿದ್ದಾರೆ.

   Mamata Banerjee opposes chanting of Jai Sriram, but attends Iftar party

   'ಜೈ ಶ್ರೀರಾಮ್'ಗೆ ಪ್ರತ್ಯುತ್ತರ: ಪ್ರೊಫೈಲ್ ಚಿತ್ರ ಬದಲಿಸಿದ ದೀದಿ!

   ಇತ್ತೀಚೆಗಷ್ಟೇ ಟಿಎಂಸಿ ಮುಖಂಡೆ ಮಮತಾ ಬ್ಯಾನರ್ಜಿ ಅವರು ತಮ್ಮ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಕೆಲವರು ರಸ್ತೆಯಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದರು. ಇದರಿಂದ ಕೋಪಗೊಂಡ ಮಮತಾ ಬ್ಯಾನರ್ಜಿ ಕಾರಿನಿಂದ ಇಳಿದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಅವರೆಲ್ಲರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರು.

   English summary
   West Bengal chief minister Mamata banerjee who opposes people for chanting Jai Sriram, now attended an Iftar party in Kolkata becomes controversy now.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X