ಮೊದಲು ಉತ್ತರ ಪ್ರದೇಶದಲ್ಲಿ ನೋಡಿಕೊಳ್ಳಿ: ಯೋಗಿಗೆ ದೀದಿ ವಾರ್ನಿಂಗ್
Recommended Video

ಕೋಲ್ಕತ್ತಾ, ಫೆಬ್ರವರಿ 05: "ಮೊದಲು ಉತ್ತರ ಪ್ರದೇಶವನ್ನು ಸರಿಯಾಗಿ ನೋಡಿಕೊಳ್ಳಿ. ಆಮೇಲೆ ಬೇರೆ ರಾಜ್ಯಗಳಿಗೆ ತೆರಳಬಹುದಂತೆ" ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಭಾನುವಾರ ದಕ್ಷಿಣ ದಿನಜ್ ಪುರ್ ಜಿಲ್ಲೆಯ ಬಲಾರ್ ಘಾಟ್ ನಲ್ಲಿ ನಡೆದ 'ಗಣತಂತ್ರ ಬಚಾವೋ' ಸಭೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಭಾಗವಹಿಸಬೇಕಿತ್ತು. ಆದರೆ ಕಾರ್ಯಕ್ರಮ ನಡೆಯುವ ಸ್ಥಳದ ಬಳಿ ಹೆಲಿಕಾಪ್ಟರ್ ಇಳಿಸಲು ಅನುಮತಿ ನಿರಾಕರಿಸಿದ್ದರಿಂದ ಯೋಗಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಿರಲಿಲ್ಲ.

ಈ ಕುರಿತು ಪತ್ರಕರ್ತೆಯೊಬ್ಬರು ಮಮತಾ ಬ್ಯಾನರ್ಜಿ ಅವರ ಬಳಿ ಪ್ರಶ್ನಿಸಿದರು. 'ಯೋಗಿ ಆದಿತ್ಯನಾಥ್ ಅವರ ಹೆಲಿಕಾಪ್ಟರ್ ಇಳಿಯುವುದಕ್ಕೆ ಏಕೆ ಅನುಮತಿ ನೀಡಲಿಲ್ಲ?' ಎಂಬ ಪ್ರಶ್ನೆಗೆ, "ಅವರು ಬಂಗಾಳಕ್ಕೆ ಬರುವ ಅಗತ್ಯವೇನಿದೆ? ಮೊದಲು ಉತ್ತರ ಪ್ರದೇಶವನ್ನು ಅವರು ಚೆನ್ನಾಗಿ ನೋಡಿಕೊಳ್ಳಲಿ. ಅಲ್ಲಿ ಎಷ್ಟೋ ಜನರ ಕೊಲೆಯಾಗಿದೆ. ಪೊಲೀಸರೇ ಹತ್ಯೆಯಾಗಿದ್ದಾರೆ. ಎಷ್ಟೋ ಜನರಿಗೆ ಕಲ್ಲುಹೊಡೆದು ಸಾಯಿಸಲಾಗಿದೆ. ಅವರು ಚುನಾವಣೆಯಲ್ಲಿ ನಿಂತರೆ ಸೋಲುವುದು ಖಂಡಿತ. ಉತ್ತರ ಪ್ರದೇಶದಲ್ಲಿ ಚುನಾವಣೆಗೆ ಸ್ಪರ್ಧಿಸಲು ಸ್ಥಳವಿಲ್ಲ ಅನ್ನಿಸುತ್ತೆ. ಅದಕ್ಕೇ ಅವರು ಬಂಗಾಳದ ಸುತ್ತ ಮುತ್ತ ಸುತ್ತುತ್ತಿದ್ದಾರೆ" ಎಂದು ದೀದಿ ವ್ಯಂಗ್ಯವಾಡಿದರು.












Click it and Unblock the Notifications