ಕೋಲ್ಕತ್ತದಲ್ಲಿ ಕರ್ನಾಟಕ ಬಿಜೆಪಿಯ ಬೆತ್ತಲಾಗಿಸಿದ ಕುಮಾರಸ್ವಾಮಿ
ಕೊಲ್ಕತ್ತ, ಜನವರಿ 19: ಬಿಜೆಪಿ ವಿರೋಧ ಪಕ್ಷಗಳ ಮಹಾ ಸಮಾವೇಶದಲ್ಲಿ ಭಾಗವಹಿಸಿರುವ ಸಿಎಂ ಕುಮಾರಸ್ವಾಮಿ, ಕೋಲ್ಕತ್ತದಲ್ಲಿ ನಿಂತು ಕರ್ನಾಟಕ ಬಿಜೆಪಿಯ ರಾಜಕೀಯವನ್ನು ಹೀಗಳೆದರು.
ಭಾರತ ಒಕ್ಕೂಟದ ಮಹಾ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಮೋದಿ ಅವರು ಭ್ರಷ್ಟಾಚಾರ ತೊಲಗಿಸುವ ಮಾತನಾಡುತ್ತಾರೆ, ಭ್ರಷ್ಟಾಚಾರದ ವಿರುದ್ಧ ಮಸೂದೆ ತರುತ್ತಾರೆ ಆದರೆ ಅದೇ ಬಿಜೆಪಿ ಕರ್ನಾಟಕದಲ್ಲಿ ಪಕ್ಷ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದರು.
ಆಡಳಿತ ಪಕ್ಷದ ಶಾಸಕರಿಗೆ ಕೋಟ್ಯಂತರ ರೂಪಾಯಿ ಹಣದ ಆಮಿಷ ಒಡ್ಡಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಅಣಕ, ಜನ ನೀಡಿರುವ ತೀರ್ಪನ್ನು ಹಣ ಕೊಟ್ಟು ಕೊಂಡುಕೊಳ್ಳುವ ಹುನ್ನಾರವನ್ನು ಸಂವಿಧಾನ ವಿರೋಧಿ ಬಿಜೆಪಿ ಮಾಡುತ್ತಿದೆ ಎಂದು ಕುಮಾರಸ್ವಮಿ ಕಟು ಮಾತುಗಳಲ್ಲಿ ಟೀಕಿಸಿದರು.
ಸಾಲಮನ್ನಾ ಬಗ್ಗೆಯೂ ಪ್ರಸ್ತಾಪ ಮಾಡಿದ ಕುಮಾರಸ್ವಾಮಿ ಅವರು, ಮೋದಿ ಅವರು ನಮ್ಮ ರೈತ ಸಾಲಮನ್ನಾ ಅನ್ನು ವ್ಯಂಗ್ಯ ಮಾಡಿದರು ಅದನ್ನು ಜೋಕ್ ಎಂದು ಕರೆದರು. ಅವರಿಗೆ ಸತ್ಯ ಗೊತ್ತಿಲ್ಲ. ನಾವು ಯೋಜನೆಯನ್ನು ಪಾರದರ್ಶಕತೆಯಿಂದ ಜನರಿಗೆ ತಲುಪಿಸುತ್ತಿದ್ದೇವೆ. ಪೂರ್ಣ ಯೋಜನೆ ಆನ್‌ಲೈನ್ ಆಗಿದ್ದು ಎಲ್ಲ ಮಾಹಿತಿಯೂ ಅದರಲ್ಲಿದೆ ಎಂದರು.

ಅಪನಗದೀಕರಣ ವಿಫಲ ಮಾದರಿ
ಅಪನಗದೀಕರಣವೊಂದು ವಿಫಲ ಮಾದರಿ ಎಂದ ಕುಮಾರಸ್ವಾಮಿ, ಅಪನಗದೀಕರಣದಿಂದ ಬಡವರಿಗೆ ತೊಂದರೆಯಾಯ್ತೆ ವಿನಃ ಇನ್ನೇನು ಆಗಲಿಲ್ಲ, ಅದು ಬೆಟ್ಟ ಅಗೆದು ಇಲಿ ಹಿಡಿದಂತಾಯಿತು ಎಂದು ಹೇಳಿದರು.

'ಸಂವಿಧಾನ ವಿರೋಧಿ ಆಡಳಿತ ನಡೆಸುತ್ತಿದ್ದಾರೆ'
ಸಂವಿಧಾನ ವಿರೋಧಿಯೊಬ್ಬರು ಇಂದು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳು ಇಂದು ಅಪಾಯದಲ್ಲಿವೆ. ಅದನ್ನು ಎತ್ತಿ ಹಿಡಿಯುವ ಜವಾಬ್ದಾರಿಗಳು ನಮ್ಮ ಮೇಲಿದೆ ಎಂದು ಸಿಎಂ ಹೇಳಿದರು.

ಒಗ್ಗಟ್ಟು ಪ್ರಸ್ತುತದ ಅವಶ್ಯಕತೆ
ಎಲ್ಲ ಪ್ರಾದೇಶಿಕ ಪಕ್ಷಗಳ ನಾಯಕರ ಒಗ್ಗಟ್ಟನ್ನು ಪ್ರಸ್ತುತ ಅವಶ್ಯಕೆ ಎಂದು ಹೇಳಿದ ಕುಮಾರಸ್ವಾಮಿ ಅವರು, ದೇಶವನ್ನು ಮರಳಿ ಸಂವಿಧಾನದ, ಪ್ರಜಾಪ್ರಭುತ್ವದ ಹಾದಿಗೆ ತರಲು ಎಲ್ಲರ ಒಗ್ಗೂಡುವಿಕೆ ಅತ್ಯಂತ ಅವಶ್ಯಕತೆ ಇದೆ ಎಂದು ಕುಮಾರಸ್ವಾಮಿ ಹೇಳಿದರು.

ಕೇಂದ್ರದ ಬಿಜೆಪಿ ಅನ್ನದಾತರನ್ನು ಅನಾಥರನ್ನಾಗಿಸಿದೆ
ಕೇಂದ್ರದ ಬಿಜೆಪಿ ಅನ್ನದಾತನನ್ನು ಅನಾಥರನ್ನಾಗಿ ಮಾಡಿದೆ ಅದು ಏನಿದ್ದರು ಶ್ರೀಮಂತರ ಪಕ್ಷವಾಗಿ ಮಾತ್ರವೇ ಉಳಿದಿದೆ. ನಾವು ಭಾರತವನ್ನು ಉಳಿಸಲು, ಅದು ಒಂದೇ ಭಾರತವಾಗಿ ಉಳಿಯಲು ಈ ಎಲ್ಲ ನಾಯಕರು ಇಲ್ಲಿ ಒಟ್ಟಾಗಿದ್ದಾರೆ. ಗುರಿ ಸಾಧನೆಗೆ ನಾವೆಲ್ಲಾ ಒಟ್ಟಾಗಿದ್ದೇವೆ ಒಟ್ಟಾಗಿಯೇ ಇರಲಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications