ಪಶ್ಚಿಮ ಬಂಗಾಳಕ್ಕೆ 7 ಹೊಸ ಜಿಲ್ಲೆಗಳ ಸೇರ್ಪಡೆ
ಕೋಲ್ಕತ್ತಾ, ಆಗಸ್ಟ್. 1: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯವು ಏಳು ಹೊಸ ಜಿಲ್ಲೆಗಳನ್ನು ಪಡೆಯಲಿದೆ ಎಂದು ಘೋಷಿಸಿದ್ದಾರೆ.
ಈ ಮೂಲಕ ಪಶ್ಚಿಮ ಬಂಗಾಳದ ಒಟ್ಟು ಜಿಲ್ಲೆಗಳ ಸಂಖ್ಯೆಯನ್ನು 30ಕ್ಕೆ ಏರಲ್ಪಟ್ಟಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಘೋಷಿಸಲಾದ ಏಳು ಹೊಸ ಜಿಲ್ಲೆಗಳಲ್ಲಿ ಸುಂದರ್ಬನ್, ಇಚೆಮತಿ, ರಾಣಾಘಾಟ್, ಬಿಷ್ಣುಪುರ್, ಜಂಗಿಪುರ, ಮತ್ತು ಬೆಹ್ರಾಂಪುರ ಹಾಗೂ ಬಸಿರ್‌ಹತ್ ಎಂದು ಹೆಸರಿಸಲಾಗಿದೆ.
ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ 23 ಜಿಲ್ಲೆಗಳಿದ್ದವು. ಈಗ ಅದನ್ನು 30ಕ್ಕೆ ಹೆಚ್ಚಿಸಲಾಗಿದೆ. ಆ 7 ಹೊಸ ಜಿಲ್ಲೆಗಳೆಂದರೆ ಸುಂದರ್ಬನ್, ಇಚೆಮತಿ, ರಾಣಾಘಾಟ್, ಬಿಷ್ಣುಪುರ್, ಜಂಗಿಪುರ್, ಬೆಹ್ರಾಂಪುರ ಮತ್ತು ಬಸಿರ್‌ಹತ್ ಜಿಲ್ಲೆ ಎಂದು ಕರೆಯಲಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಏಳು ಹೊಸ ಜಿಲ್ಲೆಗಳ ರಚನೆಯ ಕುರಿತು ಘೋಷಣೆ ಹೊರಬಿದ್ದಿದ್ದು, ಮುಖ್ಯಮಂತ್ರಿಗಳು ಜಿಲ್ಲೆಗಳ ಪುನರ್ ರಚನೆಯು ಅಂತಿಮ ಹಂತದಲ್ಲಿದೆ. ಮುಂದುವರಿದು ಸಚಿವ ಸಂಪುಟಕ್ಕೆ ನಾಲ್ಕರಿಂದ ಐದು ಹೊಸ ಮುಖಗಳು ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ ಎಂದು ಘೋಷಿಸಿದ್ದಾರೆ.
ಕ್ಯಾಬಿನೆಟ್‌ಗೆ ಹೊಸ ಸಚಿವರ ಸೇರ್ಪಡೆಯನ್ನು ಘೋಷಿಸಿದ ಮಮತಾ ಬ್ಯಾನರ್ಜಿ, ಬಂಗಾಳ ಕ್ಯಾಬಿನೆಟ್‌ನಲ್ಲಿ ಪಂಚಾಯತ್, ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್, ಗ್ರಾಹಕ ವ್ಯವಹಾರಗಳು ಮತ್ತು ಸ್ವಸಹಾಯ ಗುಂಪುಗಳಂತಹ ಹಲವಾರು ಇಲಾಖೆಗಳು ಯಾವುದೇ ಮೀಸಲಾದ ಮಂತ್ರಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಈ ಇಲಾಖೆಗಳ ಜವಾಬ್ದಾರಿಯನ್ನು ಹೊರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ನಾವು ನಮ್ಮ ಕ್ಯಾಬಿನೆಟ್ ಅನ್ನು ಪುನರ್ರಚನೆ ಮಾಡಬೇಕಾಗಿದೆ. ಆದರೆ ನಾನು ಕ್ಯಾಬಿನೆಟ್ ಅನ್ನು ವಿಸರ್ಜಿಸಿ ಹೊಸದನ್ನು ರಚಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ಹಲವಾರು ಇಲಾಖೆಗಳು ಸಚಿವರನ್ನು ಹೊಂದಿಲ್ಲ. ನಾನು ಈ ಇಲಾಖೆಗಳ ಜವಾಬ್ದಾರಿಯನ್ನು ಹೊರಲು ಸಾಧ್ಯವಿಲ್ಲ. ನಾಲ್ಕೈದು ಹೊಸ ಮುಖಗಳನ್ನು ಶೀಘ್ರದಲ್ಲೇ ಸಂಪುಟಕ್ಕೆ ಪರಿಚಯಿಸಲಾಗುವುದು ಮತ್ತು ಆಗಸ್ಟ್ 3 ಬುಧವಾರ ಪುನರ್ ರಚನೆ ಮಾಡಲಾಗುವುದು. ನಾವು ನಾಲ್ಕರಿಂದ ಐದು ಹೊಸ ಮುಖಗಳನ್ನು ಸಂಪುಟಕ್ಕೆ ಪರಿಚಯಿಸುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಪಂಚಾಯತ್, ಆರೋಗ್ಯ, ಇಂಜಿನಿಯರಿಂಗ್, ಗ್ರಾಹಕ ವ್ಯವಹಾರಗಳು ಮತ್ತು ಸ್ವಸಹಾಯ ಗುಂಪುಗಳ ಇಲಾಖೆಗಳನ್ನೂ ಮಮತಾ ಬ್ಯಾನರ್ಜಿ ನೋಡಿಕೊಳ್ಳುತ್ತಿದ್ದರು. ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಶಿಕ್ಷಕರ ನೇಮಕಾತಿ ಹಗರಣದಲ್ಲಿ ಪಾರ್ಥ ಚಟರ್ಜಿ ಅವರನ್ನು ಬಂಧಿಸಿದಾಗಿನಿಂದ ಮಮತಾ ಬ್ಯಾನರ್ಜಿ ಅವರ ಇಲಾಖೆಗಳನ್ನೂ ನೋಡಿಕೊಳ್ಳುತ್ತಿದ್ದರು.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications