ಮತ್ತೆ ಟಿಎಂಸಿ ಸೇರ್ಪಡೆ ಬೆನ್ನಲ್ಲೇ ಮುಕುಲ್ ರಾಯ್ ಝಡ್ ಶ್ರೇಣಿ ಭದ್ರತೆ ಹಿಂಪಡೆದ ಕೇಂದ್ರ

ನವದೆಹಲಿ, ಜೂನ್ 17: ಭಾರತೀಯ ಜನತಾ ಪಕ್ಷವನ್ನು ತೊರೆದು ಮತ್ತೆ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾದ ಬೆನ್ನಲ್ಲೇ ಮುಕುಲ್‌ ರಾಯ್‌ಗೆ ನೀಡಲಾಗಿದ್ದ ಝಡ್ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಟಿಎಂಸಿ ತೊರೆದು ಬಿಜೆಪಿಗೆ ಸೇರಿದ್ದ ಮುಕುಲ್ ರಾಯ್ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು.

ಪಶ್ಚಿಮ ಬಂಗಾಳ ಸರ್ಕಾರ ಮುಕುಲ್ ರಾಯ್‌ಗೆ ಈಗಾಗಲೇ ವೈ ಶ್ರೇಣಿಯಭದ್ರತೆಯನ್ನು ಒದಗಿಸಿರುವುದಾಗಿವರದಿ ವಿವರಿಸಿದೆ, ತಮಗೆ ನೀಡಿರುವ ಝಡ್ ಶ್ರೇಣಿಯ ಭದ್ರತೆಯನ್ನು ವಾಪಸ್ ಪಡೆಯುವಂತೆ ಮುಕುಲ್ ರಾಯ್ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದರು ಎನ್ಉವ ಮಾಹಿತಿ ಲಭ್ಯವಾಗಿದೆ.

 Centre Withdraws Z Security Cover Of Mukul Roy, Days After His Return To TMC

ಬಳಿಕ ಕೇಂದ್ರ ಸರ್ಕಾರ ರಾಯ್‌ಗೆ ಝಡ್ ಶ್ರೇಣಿಯ ಭದ್ರತೆ ಒದಗಿಸಿತ್ತು, ಚುನಾವಣೆ ಬಳಿಕ ಬದಲಾದ ರಾಜಕೀಯ ಸನ್ನಿವೇಶದ ಪರಿಣಾಮ ಮುಕುಲ್ ರಾಯ್ ಮತ್ತೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಸೇರ್ಪಡೆಯಾಗಿದ್ದರು. ಇದೀಗ ರಾಯ್‌ಗೆ ನೀಡಲಾಗಿರುವ ಝಡ್‌ ಶ್ರೇಣಿಯ ಭದ್ರತೆಯನ್ನು ಹಿಂಪಡೆದಿರುವುದಾಗಿ ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಮುಕುಲ್ ರಾಯ್ ಪುತ್ರ ಶುಭ್ರಾಂಶು ರಾಯ್ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಭದ್ರತಾ ರಕ್ಷಣೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ ರಾಯ್ 2017 ರಲ್ಲಿ ಟಿಎಂಸಿಯಿಂದ ಬಿಜೆಪಿಗೆ ಸೇರಿದ ನಂತರ ರಾಯ್‌ಗೆ ಕೇಂದ್ರ ಭದ್ರತಾ ರಕ್ಷಣೆಯನ್ನು ನೀಡಲಾಗಿತ್ತು.

ಪಶ್ಚಿಮ ಬಂಗಾಳದಲ್ಲಿ 2021 ರ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ರಾಯ್ ಭದ್ರತೆಯನ್ನು ಡಿ ವರ್ಗಕ್ಕೆ ನವೀಕರಿಸಲಾಯಿತು. ಟಿಎಂಸಿಯಿಂದ ದಾಳಿಯ ಸಾಧ್ಯತೆಯಿಂದ ಚುನಾವಣೆಗೆ ಮುಂಚಿತವಾಗಿ ಭದ್ರತೆ ನವೀಕರಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+