ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ; ಟಿಎಂಸಿ ಸಂಸದೆ ನುಸ್ರತ್ ಜಹಾನ್ ಸಿಟ್ಟಿಗೆದ್ದ ವಿಡಿಯೋ ಹಂಚಿಕೊಂಡ ಬಿಜೆಪಿ

|
Google Oneindia Kannada News

ಕೋಲ್ಕತ್ತಾ, ಮಾರ್ಚ್ 29: ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮೊದಲನೇ ಹಂತದ ಚುನಾವಣೆ ಮುಗಿದಿದೆ. ಉಳಿದ ಏಳು ಹಂತದ ಚುನಾವಣೆಗೆ ಸೋಮವಾರ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಅವರ ವಿಡಿಯೋವೊಂದನ್ನು ಬಿಜೆಪಿ ಹಂಚಿಕೊಂಡಿದೆ.

ಸೋಮವಾರ ನಟಿ/ ಟಿಎಂಸಿ ಸಂಸದೆ ನುಸ್ರತ್ ಅವರು ಒಂದು ಗಂಟೆಗೂ ಹೆಚ್ಚಿನ ಕಾಲ ರೋಡ್ ಶೋ ನಡೆಸಿದ್ದರಿಂದ ಕೋಪಗೊಂಡು ಕೂಗಾಡಿದ ಸಂಗತಿ ನಡೆದಿದ್ದು, ಆ ವಿಡಿಯೋವನ್ನು ಬಿಜೆಪಿ ಹಂಚಿಕೊಂಡಿದೆ. "ಒಂದು ಗಂಟೆಯಿಂದ ಪ್ರಚಾರದಲ್ಲಿ ತೊಡಗಿದ್ದೇನೆ. ಇನ್ನೂ ಹೆಚ್ಚು ನನ್ನಿಂದ ಸಾಧ್ಯವಿಲ್ಲ. ಮುಖ್ಯಮಂತ್ರಿಗೂ ನಾನು ಇನ್ನಷ್ಟು ಹೆಚ್ಚು ಕಾಲ ಪ್ರಚಾರ ಮಾಡಲು ಸಿದ್ಧವಿಲ್ಲ" ಎಂದು ಜಹಾನ್ ಹೇಳಿರುವುದು ವಿಡಿಯೋದಲ್ಲಿ ಕೇಳಿಬಂದಿದೆ.

BJP Tweets Video Of TMC MP Nusrat Loses Cool After Campaigning

 "ಕೊರೊನಾಗಿಂತ ಅಪಾಯಕಾರಿ ಯಾವುದು ಗೊತ್ತಾ?"; ಬಿಜೆಪಿ ಸಿಟ್ಟಿಗೆ ಕಾರಣವಾಯ್ತು ಈ ಹೇಳಿಕೆ

ವಾಹನದ ಮೇಲೆ ನಿಂತಿದ್ದ ನುಸ್ರತ್, ಕೋಪಗೊಂಡು ಕೆಳಗಿಳಿದಿದ್ದಾರೆ. ಸ್ವಲ್ಪ ದೂರ ಮುಖ್ಯರಸ್ತೆ ಬರುತ್ತದೆ. ಇನ್ನು ಅರ್ಧ ಕಿಲೋ ಮೀಟರ್ ಅಷ್ಟೆ ಎಂದು ವ್ಯಕ್ತಿಯೊಬ್ಬರು ಕೇಳಿಕೊಳ್ಳುತ್ತಿದ್ದು, ಇನ್ನು ಆಗುವುದಿಲ್ಲ ಎಂದು ಸಿಟ್ಟಿಗೆದ್ದಿದ್ದಾರೆ. 25 ಸೆಕೆಂಡ್‌ಗಳ ವಿಡಿಯೋ ಕ್ಲಿಪ್‌ನಲ್ಲಿ ಈ ದೃಶ್ಯವಿದ್ದು, ಬಿಜೆಪಿ ಬಂಗಾಳ ಘಟಕ ಈ ವಿಡಿಯೋ ಪೋಸ್ಟ್ ಮಾಡಿ, "MamataLosingNandigram" ಎಂದು ಟ್ವೀಟ್ ಮಾಡಿದೆ.

ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮಾ 27ರಂದು ಮೊದಲನೇ ಹಂತದ ಚುನಾವಣೆ ಮುಗಿದಿದೆ. ಏಪ್ರಿಲ್ 1ರಿಂದ 29ರವರೆಗೂ ಇನ್ನುಳಿದ ಏಳು ಹಂತದ ಮತದಾನ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

English summary
BJP tweets video of Tmc MP Nusrat Jahan loses cool after campaigning for an hour in west bengal ahead of assembly election
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X