ಸೋನಿಯರಿಂದ ಅಚ್ಚರಿಯ ನಡೆ, ಬಂಗಾಳಕ್ಕೆ ಅಧೀರ ಅಧ್ಯಕ್ಷರಾಗಿದ್ದು ಹೇಗೆ?

ನವದೆಹಲಿ, ಸೆ. 10: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಚ್ಚರಿಯ ನಡೆ ಇಟ್ಟಿದ್ದಾರೆ. ಲೋಕಸಭಾ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ರಾಜ್ಯ ರಾಜಕೀಯದತ್ತ ಹೊರಳಲು ಸೂಚಿಸಿದ್ದಾರೆ.

ಈ ಮೂಲಕ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಒಬ್ಬ ಸ್ಪರ್ಧಿಯ ಸ್ಥಾನ ಪಲ್ಲಟವಾಗಿದೆ ಎನ್ನಬಹುದು. ಇದಲ್ಲದೆ, ಈಗ ಲೋಕಸಭೆಯಲ್ಲಿ ವಿಪಕ್ಷ ನಾಯಕನ ಸ್ಥಾನ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆಯೂ ಉದ್ಭವವಾಗಲಿದೆ ಒಬ್ಬ ವ್ಯಕ್ತಿಗೆ ಒಂದು ಪ್ರಧಾನ ಹುದ್ದೆ ಎಂಬುದು ಬಿಜೆಪಿಯಲ್ಲಷ್ಟೇ ಅಲ್ಲ ಕಾಂಗ್ರೆಸ್ ನಲ್ಲೂ ಚಾಲ್ತಿಯಲ್ಲಿದೆ. ಅಧೀರ್ ರಂಜನ್ avaruಪಶ್ಚಿಮ ಬಂಗಾಳದ ಬೆಹ್ರಾಂಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ಅಧೀರ್ ರಂಜನ್ ಚೌಧರಿ ಅವರನ್ನು ನೇಮಿಸಿ ಸೋನಿಯಾ ಅವರು ಬುಧವಾರದಂದು ಆದೇಶ ಹೊರಡಿಸಿದ್ದಾರೆ.

''ಬಂಗಾಳ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋಮೆನ್ ಮಿತ್ತಾ ಜುಲೈ ತಿಂಗಳಿನಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಬಂಗಾಳದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬೆಳೆಸಲು ಸಮರ್ಥ ನಾಯಕತ್ವ ಹಾಗೂ ಜನಪ್ರಿಯ ನಾಯಕರ ಅಗತ್ಯವಿತ್ತು ಹೀಗಾಗಿ ಅಧೀರ್ ರಂಜನ್ ಅವರನ್ನು ನೇಮಿಸಲಾಗಿದೆ'' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣು ಗೋಪಾಲ್ ಹೇಳಿದ್ದಾರೆ.

Adhir Ranjan Chowdhury appointed West Bengal Congress chief

ಪಶ್ಚಿಮ ಬಂಗಾಳ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಸಿಎಂ ಮಮತಾ ಬ್ಯಾನರ್ಜಿ ಎದುರಿಸಲು ಅಧೀರ್ ಸಮರ್ಥರಾಗಿದ್ದಾರೆ. ಈ ಹಿಂದೆ ಕೂಡಾ ಮಮತಾ ವಿರುದ್ಧ ಅಧೀರ್ ವಾಗ್ದಾಳಿ ನಡೆಸಿ, ಸರ್ಕಾರ ಹಲವು ನಡೆಗಳನ್ನು ಟೀಕಿಸಿದ್ದಾರೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+