ಕೊಲ್ಕತ್ತದ ಬಹುಮಹಡಿ ಕಟ್ಟಡದಲ್ಲಿ ಬೆಂಕಿ: ಇಬ್ಬರು ಸಾವು
ಕೊಲ್ಕತ್ತ, ಅಕ್ಟೋಬರ್ 17: ಕೊಲ್ಕತ್ತದ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 12 ವರ್ಷದ ಬಾಲಕ ಸೇರಿ ಇಬ್ಬರು ಬೆಂಕಿಗೆ ಆಹುತಿಯಾಗಿದ್ದಾರೆ.
ಗಣೇಶ್‌ಚಂದ್ರ ಅವೆನ್ಯೂವಿನ ನೆಲಮಹಡಿಯಲ್ಲಿರುವ ಅಳವಡಿಸಲಾಗಿದ್ದ ಮೀಟರ್ ಬಾಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ಬಳಿಕ ಅದು ಕಟ್ಟಡದ ಇತರೆ ಪ್ರದೇಶಗಳಿಗೂ ಆವರಿಸಿಕೊಂಡಿತ್ತು.
ಆ ಕಟ್ಟಡದಲ್ಲಿ ಸುಮಾರು 50 ಕುಟುಂಬ ವಾಸವಾಗಿದೆ. ಭಯದಿಂದ ಮೊದಲ ಫ್ಲೋರ್‌ನಿಂದ ಜಿಗಿದಿರುವ ಕಾರಣ 12 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮತ್ತೊಂದು ಮನೆಯಲ್ಲಿ ವಯಸ್ಸಾದ ಮಹಿಳೆಯೊಬ್ಬರ ಶವ ದೊರೆತಿದೆ.

ಸ್ಥಳಕ್ಕೆ 10 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದಾರೆ. ರಕ್ಷಣಾ ಕಾರ್ಯ ಮುಂದುವರೆದಿದೆ. ಕಟ್ಟಡದ ಒಳಗೆ ಸಂಪೂರ್ಣವಾಗಿ ನೀರನ್ನು ಸಿಂಪಡಿಸಲಾಗುತ್ತಿದೆ.
ಬೆಂಕಿಯನ್ನು ನಿಯಂತ್ರಿಸಲಾಗಿದ್ದು, ಕಟ್ಟಡದಲ್ಲಿದ್ದ ಎಲ್ಲರನ್ನೂ ರಕ್ಷಿಸಲಾಗಿದೆ.
ಬೆಂಗಾಲ್ ಫೈರ್ ಸರ್ವೀಸ್ ಸಚಿವ ಸುಜಿತ್ ಬೋಸ್ ಅವರು ಮಾತನಾಡಿ, ಕಟ್ಟಡದಲ್ಲಿದ್ದ ಎಲ್ಲರನ್ನೂ ರಕ್ಷಿಸಲಾಗಿದೆ. ಬೆಂಕಿ ಕೂಡ ನಿಯಂತ್ರಣಕ್ಕೆ ಬಂದಿದೆ. ಕಟ್ಟಡ ಇದೀಗ ಕೊಂಚ ತಂಪಾಗುತ್ತಿದೆ.
ಬೆಂಕಿಯನ್ನು ನಂದಿಸಿದರೂ ಕೂಡ ಇಂದು ಕಟ್ಟಡದಿಂದ ಹೊರಗೆ ಹೊಗೆ ಕಾಣಿಸಿಕೊಳ್ಳುತ್ತಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications