ಕೋಲ್ಕತ್ತಾ ಮೆಟ್ರೋ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ಹನ್ನೆರಡು ಮಂದಿ ಅಸ್ವಸ್ಥ

ಕೋಲ್ಕತ್ತಾ, ಡಿಸೆಂಬರ್ 27: ಮೆಟ್ರೋ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು, ಆ ನಂತರ ಹೊಗೆ ಹೆಚ್ಚಾಗಿ ಹನ್ನೆರಡರಷ್ಟು ಪ್ರಯಾಣಿಕರು ಅಸ್ವಸ್ಥರಾದ ಘಟನೆ ಗುರುವಾರ ಕೋಲ್ಕತ್ತಾದಲ್ಲಿ ನಡೆದಿದೆ. ರಬೀಂದ್ರ ಸದನ್ ಹಾಗೂ ಮೈದಾನ ನಿಲ್ದಾಣದ ಮಧ್ಯೆ ಸಂಚರಿಸುವ ಮೆಟ್ರೋ ರೈಲಿನ ಮೊದಲ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತು.

ಬೆಂಕಿ ಕಾಣಿಸಿಕೊಂಡ ನಂತರ ಹಬ್ಬಿದ ಹೊಗೆಗೆ ಹನ್ನೆರಡು ಮಂದಿ ಅಸ್ವಸ್ಥರಾದರು. ಆ ಪೈಕಿ ಹಲವರು ಹಿರಿಯ ನಾಗರಿಕರು. ಮೆಟ್ರೋ ಸಿಬ್ಬಂದಿ ನೀರು ಬಳಸಿ, ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಪಶ್ಚಿಮ ಬಂಗಾಲ ಅಗ್ನಿಶಾಮಕ ಸೇವೆ ಹಾಗೂ ಕೋಲ್ಕತ್ತಾ ಪೊಲೀಸ್ ವಿಪತ್ತು ನಿರ್ವಹಣಾ ಗುಂಪಿನ ಸದಸ್ಯರು ಸ್ಥಳಕ್ಕೆ ಧಾವಿಸಿದ್ದಾರೆ.

12 passengers fall ill after fire onboard Kolkata metro

ಹೊಗೆ ಕಾಣಿಸಿಕೊಂಡಾಗ ಪ್ರಯಾಣಿಕರು ಗಾಬರಿಗೊಳಗಾಗಿದ್ದಾರೆ. ಜತೆಗೆ ಅಧಿಕಾರಿಗಳಿಂದ ಕೂಡ ಸನ್ನಿವೇಶದ ಬಗ್ಗೆ ಸರಿಯಾದ ಮಾಹಿತಿ ದೊರೆತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಮಾತನಾಡಿ, ಚಾಲಕರು ಈ ಬಗ್ಗೆ ಘೋಷಣೆ ಮಾಡಬೇಕಿತ್ತು. ಒಂದು ವೇಳೆ ಮಾಡಿಲ್ಲ ಅಂದರೆ ಈ ಬಗ್ಗೆ ತನಿಖೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+