ಮಾಲೂರಿನ ಈ ಗ್ಯಾರೇಜ್ ನಲ್ಲಿದೆ ರಾಜ ಮಹಾರಾಜರ ಕಾಲದ ಅಪರೂಪದ ಕಾರುಗಳು

ಅವೆಲ್ಲಾ

ನಮ್ಮ
ತಾತ
ಮುತ್ತಾತನ
ಕಾಲದ
ಕಾರು​ಗಳು.
ಸಿನಿಮಾದಲ್ಲಷ್ಟೇ
ನೋಡಿದಂಥ
ಹಳೇ
ಜಮಾನದ
ಕಾರುಗಳು.
ಸದ್ಯ
ಇಲ್ಲೊಂದು
ಗ್ಯಾರೇಜ್​
ನಲ್ಲಿ
ಅಂತಹ
ಕಾರು​ಗಳಿಗೆ
ಹೊಸತನ
ನೀಡುತ್ತಿದ್ದು,
ಟ್ರೆಂಡ್
ಸೆಟ್​
ಮಾಡುವ
ಕೆಲಸವೊಂದು
ಸದ್ದಿಲ್ಲದೆ
ನಡೆಯುತ್ತಿದೆ.

id="toptextpromo">
id='are-slot-1'
class='oiad
oi-axt
oiadv'>

ಬ್ರಿಟಿಷರ

ಕಾಲದ
ಮತ್ತು
ರಾಜ
ಮಹಾರಾಜರ
ಕಾಲದ
ಹತ್ತಾರು
ಬಗೆಯ
ಕಾರುಗಳ
ದೊಡ್ಡ
ಸಂಗ್ರಹವೇ
ಇಲ್ಲಿದೆ.
ಅಷ್ಟೇ
ಅಲ್ಲ,
ಇವಕ್ಕೆ
ಹಳೆಯ
ಕಾಲದ
ಬೈಕ್
ಗಳೂ
ಸಾಥ್
ನೀಡಿವೆ.

id='are-slot-2'
class='oiad
oi-axt
oiadv'>

 ಮಾಲೂರು ತಾಲೂಕಿನಲ್ಲಿನ ಗ್ಯಾರೇಜ್

ಮಾಲೂರು ತಾಲೂಕಿನಲ್ಲಿನ ಗ್ಯಾರೇಜ್

ಈ ಕಾರುಗಳ ಗ್ಯಾರೇಜ್ ಕಂಡುಬಂದಿದ್ದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಹನುಮನಾಯಕನಹಳ್ಳಿ ಗ್ರಾಮದ ಬಳಿ. ಅಪರೂಪದ ಕಾರುಗಳನ್ನು ಹೊಂದಿರುವ ಈ ಗ್ಯಾರೇಜ್ ನಲ್ಲಿ ರಾಜ ಮಹಾರಾಜರು, ಆಗಿನ ಶ್ರೀಮಂತರು, ಬ್ರಿಟಿಷ್​ ಅಧಿಕಾರಿಗಳು ಬಳಸುತ್ತಿದ್ದ ಕಾರುಗಳಿವೆ. ಒಂದಕ್ಕಿಂತ ಒಂದು ವಿಭಿನ್ನ. ಕಾರು​ಗಳ ಬಗ್ಗೆ ಆಸಕ್ತಿ ಇರುವ, ಮೂಲತಃ ಕಾರ್​ ಮೆಕಾನಿಕ್ ಆಗಿರುವ ನವೀನ್​ ಮತ್ತು ಅವರ ಸ್ನೇಹಿತರು ಈ ಕಾರುಗಳ ಸಂಗ್ರಹದಲ್ಲಿ ತೊಡಗಿದ್ದಾರೆ.

 ಹಳೆ ಕಾರುಗಳಿಗೆ ಮರುಜೀವ

ಹಳೆ ಕಾರುಗಳಿಗೆ ಮರುಜೀವ

ಹಳೇ ಕಾರು​ಗಳನ್ನು ಮತ್ತೆ ರಿಪೇರಿ ಮಾಡಿ ರೋಡಿಗಿಳಿಸುವ ನಿಟ್ಟಿನಲ್ಲಿ ಈ ಯುವಕರು ಪ್ರಯತ್ನವೊಂದನ್ನು ಆರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಳೆಯ ಕಾರುಗಳ ಮತ್ತು ಬೈಕ್​ಗಳ ಬಗ್ಗೆ ಯುವಕರಲ್ಲಿ ಹೊಸ ಕ್ರೇಜ್​ ಶುರುವಾಗಿರುವುದು ಇವರ ಈ ಪ್ರಯತ್ನಕ್ಕೆ ಹುಮ್ಮಸ್ಸು ತಂದಿದೆ. ಇತ್ತೀಚಿನ ದಿನಗಳಲ್ಲಿ ತೆರೆಕಾಣುತ್ತಿರುವ ಸಿನಿಮಾಗಳಲ್ಲೂ ಹಳೆಯ ಕಾರ್​ಗಳನ್ನು ಬಳಸುತ್ತಿರುವುದರಿಂದ ಅಂಥ ಕಾರುಗಳನ್ನು ಎಲೆಕ್ಟ್ರಿಕ್​ ಕಾರ್​ಗಳಾಗಿ ಬದಲಾಯಿಸಬೇಕು ಎನ್ನುವುದು ನವೀನ್​ ಅವರ ಆಶಯ.

 ವಿದೇಶದಿಂದ ಬಿಡಿಭಾಗಗಳ ಆಮದು

ವಿದೇಶದಿಂದ ಬಿಡಿಭಾಗಗಳ ಆಮದು

ಗ್ಯಾರೇಜ್ ನಲ್ಲಿ ಚೆನೈ, ಬೆಂಗಳೂರು, ಆಂಧ್ರ ಸೇರಿದಂತೆ ಹಲವು ರಾಜ್ಯಗಳಿಂದ ಹತ್ತಾರು ಬಗೆಯ ಕಾರುಗಳನ್ನು ತಂದು ರಿಪೇರಿ ಮಾಡುವ ಕೆಲಸ ನಡೆಸಲಾಗುತ್ತಿದೆ. ಈ ಎಲ್ಲಾ ಕಾರ್​ಗಳು ಯುರೋಪ್, ಅಮೆರಿಕ ದೇಶದ ಕಾರು​ಗಳಾಗಿರುವ ಹಿನ್ನೆಲೆಯಲ್ಲಿ ಇದರ ಬಿಡಿಭಾಗಗಳನ್ನು ಅಲ್ಲಿಂದಲೇ ತರಿಸಿಕೊಂಡು ರಿಪೇರಿ ಮಾಡಲಾಗುತ್ತಿದೆ. ಬೀಟಲ್​, ಆಸ್ಟಿನ್​-11, ಆಸ್ಟಿನ್​-8, ಬೀಟಲ್​ ಬಗ್​, ಮೋರಿಸ್​, ಫೋರ್ಡ್​ ಆಸ್ಟಿನ್​-7, ಫೋರ್ಡ್​ ಫರ್ಪೆಕ್ಟ್​, ಅಮೇರಿಕ ಮೂಲದ ಕೆಡಿಲಾಕ್​ ಸೇರಿದಂತೆ ಹತ್ತಾರು ಬಗೆಯ ಹಳೆಯ ಬೈಕ್​​ ಕಲೆಕ್ಷನ್​ ಕೂಡಾ ಇಲ್ಲಿದೆ.

 ರೋಡಿಗಿಳಿಯಲಿವೆ ಮೂಲೆ ಸೇರಿದ್ದ ಕಾರುಗಳು

ರೋಡಿಗಿಳಿಯಲಿವೆ ಮೂಲೆ ಸೇರಿದ್ದ ಕಾರುಗಳು

ಯುವಕರಲ್ಲಿ ಈ ವಿಂಟೇಜ್ ಕಾರುಗಳ ಕ್ರೇಜ್​ ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ನವೀನ್​ ಹಾಗೂ ಅವರ ಸ್ನೇಹಿತರು ಕಾರುಗಳನ್ನು ತಯಾರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅಂದುಕೊಂಡಂತೆ ಎಲ್ಲವೂ ಆದರೆ ಮೂಲೆ ಸೇರಿದ್ದ ನಮ್ಮ ತಾತ ಮುತ್ತಾತನ ಕಾಲದ ಕಾರು​ಗಳು ಮಾಲಿನ್ಯ ರಹಿತ ಕಾರು​ಗಳಾಗಿ ಮತ್ತೆ ರೋಡಿಗೆ ಇಳಿಯೋದ್ರಲ್ಲಿ ಯಾವುದೇ ಅನುಮಾನವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+