ಕೋಲಾರದಲ್ಲಿ ಶ್ರೀರಾಮ ಸೇನೆಯಿಂದ ಅನೈತಿಕ ಪೊಲೀಸ್ ಗಿರಿ
ಕೋಲಾರ, ಫೆಬ್ರವರಿ 14: ಪ್ರೇಮಿಗಳ ದಿನವನ್ನು ವಿರೋಧಿಸುತ್ತಾ ಬಂದಿರುವ ಬಲಪಂಥೀಯ ಸಂಘಟನೆ ಶ್ರೀರಾಮ ಸೇನೆ ಇಂದು ಕೋಲಾರದಲ್ಲಿ ಪ್ರೇಮಿಗಳಿಗೆ ಬೆದರಿಕೆ ಹಾಕಿದೆ.
ಕೋಲಾರ ಅಂತರಗಂಗೆಯಲ್ಲಿ ಏಕಾಂತದಲ್ಲಿದ್ದ ಪ್ರೇಮಿಗಳ ಮೇಲೆ ಏಕಾ-ಏಕಿ ದಾಳಿ ನಡೆಸಿದ ಕೊಲಾರ ಶ್ರೀರಾಮ ಸೇನಾ ಬಳಗದ ಸದಸ್ಯರು 'ಒಟ್ಟಿಗೆ ಓಡಾಡಿದರೆ ಮದುವೆ ಮಾಡಿಸುತ್ತೇವೆ' ಎಂದು ಭಯಗೊಳಿಸಿ, ಪ್ರೇಮಿಗಳ ಪೋಷಕರ ಮೊಬೈಲ್ ಸಂಖ್ಯೆ ಪಡೆದು ಅವರಿಗೆ ಕರೆ ಮಾಡಿ ಅವರ ಮಕ್ಕಳ ಪ್ರೇಮದ ವಿಷಯ ತಿಳಿಸಿದ್ದಾರೆ.
ಕೋಲಾರದಲ್ಲಿ ಪ್ರೇಮಿಗಳ ಫೇವರೇಟ್ ಸ್ಪಾಟ್ ಆಗಿರುವ ಅಂತರಗಂಗೆಯಲ್ಲಿ ಈ ಹಿಂದೆಯೂ ಶ್ರೀರಾಮ ಸೇನೆ ಗೂಂಡಾಗಳು ಅನೈತಿಕ ಪೊಲೀಸ್ ಗಿರಿ ಮೆರೆದಿದ್ದರು. ಇಂದೂ ಸಹ ಅದು ಮುಂದುವರೆದಿದೆ.

ಅಂತರಗಂಗೆ ಕ್ಷೇತ್ರದ ಸುತ್ತಾ ಪ್ರೇಮಿಗಳಿಗಾಗಿ ಶೋಧ ನಡೆಸಿದ ಕೇಸರಿ ಬಾವುಟ, ಶಾಲು ಹೊದ್ದ 'ಧರ್ಮ ರಕ್ಷಕರು' ಸಿಕ್ಕ ಪ್ರೇಮಿಗಳನ್ನೆಲ್ಲಾ ಹೆದರಿಸಿ- ಬೆದರಿಸಿ ಮನೆಗೆ ಅಟ್ಟಿದ್ದಾರೆ.
ಶ್ರೀರಾಮ ಸೇನೆಯ ಈ ಅನೈತಿಕ ಪೊಲೀಸ್ ಗಿರಿ ಬಗ್ಗೆ ದೂರು ದಾಖಲಾಗಿರುವ ಬಗ್ಗೆ ಮಾಹಿತಿ ಇಲ್ಲ.












Click it and Unblock the Notifications