ಪೊಲೀಸರ ಸಹಾಯಕ್ಕೆ ರಾಜ್ಯದಲ್ಲೇ ಮೊದಲು ರೆಡಿಯಾಗಿದೆ ಅತ್ಯಾಧುನಿಕ ಬೈಕ್

ಕೋಲಾರ, ಜನವರಿ 13: ಜಿಲ್ಲೆಯಲ್ಲಿ ಪುಂಡ ಪೋಕರಿಗಳ ವಿರುದ್ಧ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅವರ ಹೆಡೆಮುರಿ ಕಟ್ಟಲೆಂದೇ ಪೊಲೀಸರ ತಂಡವೊಂದು ಸಿದ್ಧವಾಗಿದೆ. ಈ ತಂಡಕ್ಕೆ ಇದೀಗ ಜೊತೆಯಾಗಿ ನಿಂತಿರುವುದು ಹೋಂಡಾ ಕಂಪನಿ. ಕ್ಷಿಪ್ರ ಕಾರ್ಯಾಚರಣೆಗೆ ಪೊಲೀಸರಿಗೆ ನೆರವಾಗಲೆಂದು ಅತ್ಯಾಧುನಿಕ ಬೈಕನ್ನು ಸಿದ್ಧಪಡಿಸಿದೆ ಕಂಪನಿ.

ಪೊಲೀಸ್​ ಇಲಾಖೆ ಹೋಂಡಾ ಕಂಪನಿ ನೆರವಿನೊಂದಿಗೆ ಜಿಲ್ಲೆಯಲ್ಲಿ ನಡೆಯುವ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಹೊಸದೊಂದು ಯೋಜನೆ ರೂಪಿಸಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪೊಲೀಸರ ಕಾರ್ಯಾಚರಣೆಗೆ ನೆರವಾಗಲೆಂದೇ ಹೊಸದೊಂದು ಬೈಕ್ ವಿನ್ಯಾಸಗೊಂಡಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ...

 ಪೊಲೀಸರಿಗೆಂದೇ ಹೋಂಡಾ ಲಿವಾ 50

ಪೊಲೀಸರಿಗೆಂದೇ ಹೋಂಡಾ ಲಿವಾ 50

ಪೆಟ್ರೋಲಿಂಗ್​, ಬೀಟ್​​ ಮತ್ತು ಕ್ಷಿಪ್ರ ಕಾರ್ಯಾಚರಣೆಗೆ ಬೈಕ್ ಗಳು ಹೇಳಿಮಾಡಿಸಿದಂತಿವೆ. ಕಂಪನಿಯು ಹೊಸ ಹೋಂಡಾ ಲಿವಾ 50 ಬೈಕ್​ಗಳನ್ನು ಚಂಡೀಗಡದಲ್ಲಿ ವಿನ್ಯಾಸ ಮಾಡಿ ಪೊಲೀಸ್​ ಇಲಾಖೆಗೆ ಅನುಕೂಲವಾಗುವ ರೀತಿ ವಿನ್ಯಾಸಗೊಳಿಸಿದೆ. ಸೈರನ್​, ಹೆಡ್​ಲೈಟ್​, ವೈರ್​ಲೆಸ್​, ಜಿಪಿಎಸ್​, ಮೈಕ್​, ಇಂಡಿಕೇಟರ್​ಗಳು ಸೇರಿದಂತೆ ಹಲವಾರು ತಂತ್ರಜ್ಞಾನಗಳನ್ನು ಅಳವಡಿಸಿ ಸ್ಟೈಲಿಷ್ ​ಆಗಿ ಸಿದ್ಧಪಡಿಸಲಾಗಿದೆ.

 40 ಲಕ್ಷ ಬೆಲೆಯಲ್ಲಿ 50 ವಿಶೇಷ ಬೈಕ್ ಗಳು

40 ಲಕ್ಷ ಬೆಲೆಯಲ್ಲಿ 50 ವಿಶೇಷ ಬೈಕ್ ಗಳು

ಹೋಂಡಾ ಕಂಪನಿ ನೀಡಿದ ಸುಮಾರು 40 ಲಕ್ಷ ರೂಪಾಯಿ ಬೆಲೆಯ 50 ವಿಶೇಷ ಬೈಕ್​ಗಳನ್ನು ನೀಡಲಾಗಿದೆ. ಆ ಎಲ್ಲಾ 50 ಜನರ ತಂಡಕ್ಕೆ ಹೊಸ ಬೈಕ್​ಗಳನ್ನು ನೀಡಿ ಜನ ಸ್ನೇಹಿಯಾಗಿ ಕ್ಷಿಪ್ರವಾಗಿ ಕೆಲಸ ಮಾಡಲು ತರಬೇತಿಯನ್ನೂ ನೀಡಲಾಗಿದೆ.

 ಪೇದೆಗಳಿಗೆ ದೊರೆತಿವೆ ಹಲವು ತರಬೇತಿ

ಪೇದೆಗಳಿಗೆ ದೊರೆತಿವೆ ಹಲವು ತರಬೇತಿ

ಜಿಲ್ಲೆಯ ಪ್ರತಿ ಪೊಲೀಸ್​ ಠಾಣೆಗೆ ಇಬ್ಬರು ಮಹಿಳಾ ಹಾಗೂ ಪುರುಷ ಪೇದೆಗಳಿಗೆ ಕರಾಟೆ, ಬೈಕ್​ ತರಬೇತಿ ಸೇರಿದಂತೆ ಹಲವು ದೈಹಿಕ ತರಬೇತಿ ನೀಡಿ ಹಲವು ತಿಂಗಳ ಕಾಲ ತಂಡವನ್ನು ಸಿದ್ಧಪಡಿಸಲಾಗಿದೆ. ಜಿಲ್ಲೆಯ ಯಾವುದೇ ಸ್ಥಳದಲ್ಲಿ ಅಪರಾಧ ಕೃತ್ಯ ನಡೆದಲ್ಲಿ ತಕ್ಷಣ ಸ್ಥಳಕ್ಕೆ ಧಾವಿಸಿ ಅಪರಾಧಿಗಳ ಹೆಡೆಮುರಿ ಕಟ್ಟಲು ಈ ಹೊಸ ತಂಡ ಕೆಲಸ ಮಾಡಲಿದೆ. ಈ ಎಲ್ಲಾ ಬೈಕ್​ಗಳನ್ನು ಸದ್ಯ ಪೊಲೀಸ್​ ಇಲಾಖೆಗೆ ಹಸ್ತಾಂತರ ಮಾಡಲಾಗಿದ್ದು, ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳನ್ನು ಕಡಿಮೆ ಮಾಡುವಲ್ಲಿ ಶ್ರಮಿಸಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಜನರಿಗೆ ಉತ್ತಮ ಸೇವೆ ನೀಡಲು ನಿರ್ಧಾರ

ಜನರಿಗೆ ಉತ್ತಮ ಸೇವೆ ನೀಡಲು ನಿರ್ಧಾರ

ಜನರಿಗೆ ಉತ್ತಮ ಸೇವೆ ನೀಡಬೇಕು, ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶದೊಂದಿಗೆ ಈ ಹೊಸ ತಂಡವನ್ನು ತಯಾರು ಮಾಡಲಾಗಿದೆ. ಒಟ್ಟಾರೆ ಕೋಲಾರ ಜಿಲ್ಲಾ ಪೊಲೀಸರು ಹೊಸ ವಿನ್ಯಾಸದ ಬೈಕ್​ನೊಂದಿಗೆ ಹೊಸ ಹುಮ್ಮಸ್ಸಿನಿಂದ ಜಿಲ್ಲೆಯ ಹಲವು ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಹೊರಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+