ಹಾಲಿನ ಖರೀದಿ ದರ ಲೀಟರ್‌ಗೆ 2.1 ರೂಪಾಯಿ ಹೆಚ್ಚಳ

ಕಳೆದ ಕೆಲವು ದಿನಗಳಿಂದ ಒಕ್ಕೂಟದಲ್ಲಿ ಹಾಲು ಸಂಗ್ರಹಣೆ ಕಡಿಮೆಯಾಗಿದ್ದು, ಬೆಂಗಳೂರು ಸೇರಿದಂತೆ ವಿವಿಧೆಡೆ ಸರಬರಾಜಿನ ಮೇಲೆ ಪರಿಣಾಮ ಬೀರಿದೆ.

ಕೋಲಾರ, ಮಾರ್ಚ್‌ 13: ಹಾಲಿನ ಉತ್ಪಾದನೆಯಲ್ಲಿನ ಕೊರತೆ ಉಂಟಾಗುತ್ತಿರುವುದರಿಂದ ಪರಿಸ್ಥಿತಿಯನ್ನು ನಿವಾರಿಸಲು ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಲಿಮಿಟೆಡ್ (ಕೋಮುಲ್) ಮಾರ್ಚ್ 16 ರಿಂದ ಹಾಲಿನ ಸಂಗ್ರಹಣೆ ದರವನ್ನು ಲೀಟರ್‌ಗೆ 2.1 ರೂ.ಗಳಷ್ಟು ಹೆಚ್ಚಿಸಲು ನಿರ್ಧರಿಸಿದೆ.

ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾತನಾಡಿ, ಕಳೆದ ಕೆಲವು ದಿನಗಳಿಂದ ಒಕ್ಕೂಟದಲ್ಲಿ ಹಾಲು ಸಂಗ್ರಹಣೆ ಕಡಿಮೆಯಾಗಿದ್ದು, ಬೆಂಗಳೂರು ಸೇರಿದಂತೆ ವಿವಿಧೆಡೆ ಸರಬರಾಜಿನ ಮೇಲೆ ಪರಿಣಾಮ ಬೀರಿದೆ. ಆದರೆ ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದಿದ್ದಾರೆ.

Purchase price of milk from Komul hiked by Rs 2.1 per litre

ಕೋಮುಲ್ ಹಾಲು ಉತ್ಪಾದಕರಿಗೆ ಪ್ರಸ್ತುತ 31.9 ರೂಪಾಯಿ ನೀಡುತ್ತಿದ್ದು, ಈಗ ಅದು 33.9 ರೂಪಾಯಿಗೆ ಏರಲಿದೆ. ಗ್ರಾಮೀಣ ಮಟ್ಟದಲ್ಲಿ ರೈತರಿಂದ ಹಾಲು ಖರೀದಿಸುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ 10 ಪೈಸೆ ಹೆಚ್ಚುವರಿ ಸಿಗಲಿದೆ. ಸೊಸೈಟಿಗಳು ಈಗ ಪ್ರತಿ ಲೀಟರ್‌ಗೆ 35.25 ರೂ. ಪಾವತಿಸಲಿದ್ದಾರೆ.

ಮುಂದಿನ ಸೂಚನೆ ಬರುವವರೆಗೆ ದೊಡ್ಡ ಆರ್ಡರ್‌ಗಳನ್ನು ಸ್ವೀಕರಿಸದಂತೆ ಕೋಲಾರ ಮತ್ತು ಇತರೆಡೆ ಹಾಲಿನ ವಿತರಕರಿಗೆ ಮೌಖಿಕ ಸೂಚನೆ ನೀಡಲಾಗಿದೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದಿಂದಾಗಿ ಹಾಲು ಸಂಗ್ರಹಣೆ ಕುಸಿತಕ್ಕೆ ಕಾರಣವಾಗಿದೆ, ಇದರಿಂದಾಗಿ ಅನೇಕ ರೈತರು ಹೈನುಗಾರಿಕೆ ಚಟುವಟಿಕೆಗಳಿಂದ ದೂರ ಸರಿಯುತ್ತಿದ್ದಾರೆ.

ಕಳೆದ ಡಿಸೆಂಬರ್‌ನಲ್ಲೂ ಕೂಡ ಕೋಮುಲ್‌ ಹೈನುಗಾರಿಕೆ ಪ್ರೋತ್ಸಾಹಿಸಿ ಹಾಲು ಉತ್ಪಾದನೆ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿತ್ತು. ಅಲ್ಲದೆ ನವೆಂಬರ್‌ 16ರಂದು ಪ್ರತಿ ಲೀಟರ್‌ ಹಾಲಿನ ಖರೀದಿ ದರವನ್ನು 2 ರೂಪಾಯಿ ಹೆಚ್ಚಿಸಿದ್ದ ಕೋಮುಲ್‌ ಸರ್ಕಾರ ಹೆಚ್ಚಿಸಿದ 2 ರೂ.ಗಳನ್ನು ನೇರವಾಗಿ ರೈತರಿಗೆ ನೀಡಲು ಮುಂದಾಗಿತ್ತು. ಆ ಮೂಲಕ ರಾಜ್ಯದ 14 ಹಾಲು ಒಕ್ಕೂಟಗಳ ಪೈಕಿ ರೈತರಿಗೆ ಹೆಚ್ಚಿನ ದರ ನೀಡುತ್ತಿರುವ ಒಕ್ಕೂಟವೆಂಬ ಕೀರ್ತಿಗೆ ಪಾತ್ರವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+