• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿಕೆ ಶಿವಕುಮಾರ್-ಸಿದ್ದರಾಮಯ್ಯಗೆ ಸವಾಲು ಹಾಕಿದ ಎಂಟಿಬಿ ನಾಗರಾಜು

|
   ಡಿ ಕೆ ಶಿವಕುಮಾರ್ ಗೆ ಬಂತು ನೇರ ಸವಾಲು..? | DK Shivakumar | Oneindia Kannada

   ಕೋಲಾರ, ಆಗಸ್ಟ್ 29: 'ಡಿಕೆ ಶಿವಕುಮಾರ್‌ಗೆ ನನ್ನ ಕ್ಷೇತ್ರದಲ್ಲಿ ಬಂದು ತೊಡೆ ತಟ್ಟಲಿ ನೋಡೋಣ' ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜು , ಡಿಕೆ ಶಿವಕುಮಾರ್‌ಗೆ ಪ್ರತಿಸವಾಲು ಹಾಕಿದ್ದಾರೆ.

   ಕೋಲಾರಕ್ಕೆ ಭೇಟಿ ನೀಡಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, 'ನನ್ನ ಕ್ಷೇತ್ರಕ್ಕೆ ಬಂದು ಡಿ.ಕೆ.ಶಿವಕುಮಾರ್ ತೊಡೆ ತಟ್ಟಲಿ, ಆ ರೀತಿ ತೊಡೆತಟ್ಟಿವುವರನ್ನು ನಾನು ಬಹಳ ಜನರನ್ನು ನೋಡಿದ್ದೇನೆ' ಎಂದು ಎಂಟಿಬಿ ನಾಗರಾಜು ಹೇಳಿದರು.

   'ನನ್ನ ಮತ್ತು ಎಂಟಿಬಿ ನಾಗರಾಜು ಭೇಟಿ ಹೊಸಕೋಟೆ ಚುನಾವಣೆ ರಣರಂಗದಲ್ಲಿ' ಎಂದು ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧದಲ್ಲಿಯೇ ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಇಂದು ಎಂಟಿಬಿ ನಾಗರಾಜು ಮಾತನಾಡಿದರು.

   ದುಬಾರಿ ಕಾರು ಖರೀದಿಸಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್

   'ನನ್ನ ವಿರುದ್ಧ ಮಾತನಾಡುತ್ತಿರುವ ಮುಖಂಡರೆಲ್ಲಾ ಅಧಿಕಾರಕ್ಕಾಗಿ ಪಕ್ಷಕ್ಕೆ ಬಂದವರು. ನಾವು ಕಟ್ಟಿರುವ ಕಾಂಗ್ರೆಸ್ ಮನೆಯಲ್ಲಿ ಅವರು ವಾಸ ಮಾಡುತ್ತಿದ್ದಾರೆ, ಅವರು ಅಧಿಕಾರದಲ್ಲಿ ಇದ್ದಾಗ ಏನೆಲ್ಲಾ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಅವರು ಮಾಧ್ಯಮದ ಎದುರು ಚರ್ಚೆಗೆ ಬರಲಿ, ತಾಖತ್ ಇದ್ದರೆ ಮುಖಾ-ಮುಖಿ ಆರೋಪ ಮಾಡಲಿ' ಎಂದು ಎಂಟಿಬಿ ನಾಗರಾಜು ಸವಾಲು ಹಾಕಿದರು.

   'ಸರ್ಕಾರ ಉರುಳಲು ದೇವೇಗೌಡ-ಸಿದ್ದರಾಮಯ್ಯ ಕಾರಣ'

   'ಸರ್ಕಾರ ಉರುಳಲು ದೇವೇಗೌಡ-ಸಿದ್ದರಾಮಯ್ಯ ಕಾರಣ'

   ಮೈತ್ರಿ ಸರ್ಕಾರ ಪತನವಾಗಲು ದೇವೇಗೌಡ ಮತ್ತು ಸಿದ್ದರಾಮಯ್ಯ ಕಾರಣ ಎಂದ ನಾಗರಾಜು, ನಾವು ಕಟ್ಟಿದ ಮನೆಯಲ್ಲಿ (ಕಾಂಗ್ರೆಸ್‌) ಸಿದ್ದರಾಮಯ್ಯ ವಾಸಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧವೂ ಹರಿಹಾಯ್ದರು. ಹಿಂದೊಮ್ಮೆ ನನ್ನ ಎದೆಯಲ್ಲಿ ಸಿದ್ದರಾಮಯ್ಯ ಇದ್ದಾರೆ ಎಂದು ಎಂಟಿಬಿ ಹೇಳಿದ್ದರು.

   12 ಕೋಟಿ ಕಾರಿನಿಂದ ಸುದ್ದಿಯಾದ ಎಂಟಿಬಿ ನಾಗರಾಜ್ ಯಾರು?

   'ನನ್ನ ಖಾತೆಯಲ್ಲಿ ಎಚ್‌ಡಿಕೆ-ರೇವಣ್ಣ ಮೂಗು ತೂರಿಸುತ್ತಿದ್ದರು'

   'ನನ್ನ ಖಾತೆಯಲ್ಲಿ ಎಚ್‌ಡಿಕೆ-ರೇವಣ್ಣ ಮೂಗು ತೂರಿಸುತ್ತಿದ್ದರು'

   'ನಾನು ಮೈತ್ರಿ ಸರ್ಕಾರದಲ್ಲಿ ಮಂತ್ರಿ ಆಗಿ ಏನೂ ಸಾಧನೆ ಮಾಡಲು ಆಗಲಿಲ್ಲ, ಕುಮಾರಸ್ವಾಮಿ ಮತ್ತು ರೇವಣ್ಣ ನನ್ನ ಖಾತೆಯಲ್ಲಿ ಮೂಗು ತೂರಿಸುತ್ತಿದ್ದರು. ಹೀಗಾಗಿಯೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಅವರಿಗೆ ನಾನು ಮೊದಲೇ ಹೇಳಿದ್ದೆ' ಎಂದು ಎಂಟಿಬಿ ನಾಗರಾಜು ಕಾರಣ ನೀಡಿದರು.

   ರಮೇಶ್ ಕುಮಾರ್ ಸತ್ಯ ಹರಿಶ್ಚಂದ್ರನಲ್ಲ: ಎಂಟಿಬಿ

   ರಮೇಶ್ ಕುಮಾರ್ ಸತ್ಯ ಹರಿಶ್ಚಂದ್ರನಲ್ಲ: ಎಂಟಿಬಿ

   ತಮ್ಮನ್ನು ಅನರ್ಹಗೊಳಿಸಿದ ರಮೇಶ್ ಕುಮಾರ್ ವಿರುದ್ಧವೂ ಮಾತನಾಡಿದ ಅವರು, 'ರಮೇಶ್ ಕುಮಾರ್ ಸತ್ಯ ಹರಿಶ್ಚಂದ್ರರಂತೆ ಮಾತನಾಡುತ್ತಾರೆ ಆದರೆ ಅವರಿಗೆ ಸತ್ಯ ಹರಿಶ್ಚಂದ್ರನ ಗುಣಗಳಿಲ್ಲ' ಎಂದು ವಾಗ್ದಾಳಿ ನಡೆಸಿದರು.

   ನನ್ನ, ನಿನ್ನ ಯುದ್ದ ಇನ್ನೇನಿದ್ದರೂ ರಣರಂಗದಲ್ಲಿ: ಡಿಕೆಶಿ ಓಪನ್ ಚಾಲೆಂಜ್

   ರಮೇಶ್ ಕುಮಾರ್ ಮನೆಯಿಂದ ನೀರು ಕದ್ದಿಲ್ಲ: ಎಂಟಿಬಿ

   ರಮೇಶ್ ಕುಮಾರ್ ಮನೆಯಿಂದ ನೀರು ಕದ್ದಿಲ್ಲ: ಎಂಟಿಬಿ

   ಸರ್ಕಾರದ ಅನುದಾನದಲ್ಲಿಯೇ ಕೆ.ಸಿ.ವ್ಯಾಲಿ ಯೋಜನೆ ಜಾರಿ ಆಗಿದೆ. ಸರ್ಕಾರದ ಅನುಮತಿಯಂತೆಯೇ ಕೆ.ಸಿ.ವ್ಯಾಲಿ ನೀರನ್ನು ಕ್ಷೇತ್ರಕ್ಕೆ ಬಳಸಿಕೊಂಡಿದ್ದೇವೆ. ನಾವು ರಮೇಶ್ ಕುಮಾರ್ ಮನೆಯಿಂದ ನೀರನ್ನು ತೆಗೆದುಕೊಂಡು ಹೋಗಿಲ್ಲ ಎಂದು ರಮೇಶ್ ಕುಮಾರ್‌ ಅವರು ಕೆ.ಸಿ.ವ್ಯಾಲಿ ಯೋಜನೆಯ ನೀರನ್ನು ಹೊಸಕೋಟೆಗೆ ಬಳಸಿಕೊಂಡಿದ್ದರ ವಿರುದ್ಧ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

   English summary
   MTB Nagaraju challenged DK Shivakumar and Siddaramaiah. He said let DK Shivakumar to come to his constituency first.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X