• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಲಾರ; ದಾರಿ ತಪ್ಪಿ ಬಂದಿದ್ದ ಪಂಗೋಲಿನ್ ಕೊಂದು ವಿಕೃತಿ ಮೆರೆದ ಜನ

By ಕೋಲಾರ ಪ್ರತಿನಿಧಿ
|

ಕೋಲಾರ, ಜುಲೈ 25: ವಸತಿ ಪ್ರದೇಶಕ್ಕೆ ದಾರಿ ತಪ್ಪಿ ಬಂದಿದ್ದ ಪಂಗೋಲಿನ್ ಕಿಡಿಗೇಡಿಗಳಿಂದ ಹತ್ಯೆಯಾಗಿರುವ ಘಟನೆ ಕೋಲಾರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

   ಯೋಧನ ಪತ್ನಿಗೆ ಸರ್ಕಾರಿ ಕೆಲಸ, 5 ಕೋಟಿ ದುಡ್ಡು, ಸೈಟು | Oneindia Kannada

   ನಗರದ ಹೊರವಲಯದಲ್ಲಿನ ಅಂತರಗಂಗೆ ಬೆಟ್ಟದಿಂದ ಷಹಿನ್ ಷಾ ನಗರಕ್ಕೆ ಬಂದ ಪಂಗೋಲಿನ್ ದುರುಳರ ಕೈಗೆ ಸಿಕ್ಕಿ ಸಾವನ್ನಪ್ಪಿದೆ. ಕೋಲಾರ ನಗರದಾದ್ಯಂತ ಕಳೆದ ವಾರ ಜಡಿ ಮಳೆ‌ ಸುರಿದಿದೆ. ರಾತ್ರಿ 10 ಗಂಟೆ ವೇಳೆಯಲ್ಲಿ ಅಂತರಗಂಗೆ ಬೆಟ್ಟದಿಂದ ಪಂಗೋಲಿನ್ ತಪ್ಪಲಿನಲ್ಲಿರುವ ಷಹಿನ್ ಷಾ ನಗರಕ್ಕೆ ದಿಕ್ಕು ತಪ್ಪಿ ಬಂದಿದೆ.

   ವಿರಾಜಪೇಟೆಯಲ್ಲಿ ಮಾಂಸಕ್ಕಾಗಿ ಮಂಗಗಳ ಬೇಟೆ

   ಈ ಸಂದರ್ಭದಲ್ಲಿ ಅಲ್ಲಿದ್ದ ಕೆಲವರು ಪಂಗೋಲಿನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ವಿಕೃತಿ ಮೆರೆದಿದ್ದಾರೆ. ಪಂಗೋಲಿನ್ ಮೃತ ದೇಹವನ್ನು ಕಬ್ಬಿಣದ ಹಾರೆಗೆ ಸಿಕ್ಕಿಸಿಕೊಂಡು ಮೆರವಣಿಗೆ ನಡೆಸಿ ವಿಕೃತಿ ಮೆರೆದಿರುವ ವಿಡಿಯೋ ಮತ್ತು ಫೋಟೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

   ಪಂಗೋಲಿನ್ ಹತ್ಯೆಗೈದಿರುವ ಕಿಡಿಗೇಡಿಗಳ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ.

   English summary
   The Miscreants killed the pangolin which came to residential area in kolar. This incident happened in shahin sha layout of kolar,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X