ಕೋಲಾರಕ್ಕೂ ಬಂದ ಮಿಡತೆ ಸೈನ್ಯ: ರೈತರಲ್ಲಿ ಆತಂಕ
ಕೋಲಾರ, ಮೇ 28: ಬೆಳೆಯನ್ನು ಸಂಪೂರ್ಣವಾಗಿ ನಾಶಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿರುವ ಮರುಭೂಮಿ ಮಿಡತೆಗಳ ಕಾಟ ಈಗ ಚಿನ್ನದ ನಾಡು ಕೋಲಾರಕ್ಕೂ ಬಂದಿದೆ.
Recommended Video
ಕೋಲಾರ ತಾಲೂಕಿನ ದಿಂಬ, ದೊಡ್ಡಹಸಾಳ ಗ್ರಾಮಗಳ ಬಳಿ ಮಿಡತೆಗಳು ಕಾಣಿಸಿಕೊಂಡಿವೆ. ವಿದ್ಯುತ್ ಕಂಬ ಹಾಗೂ ಗಿಡಗಳ ಮೇಲೆ ಮಿಡತೆಗಳ ಸೈನ್ಯವು ಕಾಣಿಸಿಕೊಂಡಿವೆ.
ಸ್ಥಳಕ್ಕೆ ಕೃಷಿ ಇಲಾಖೆ ವಿಜ್ಞಾನಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮಿಡತೆಗಳಿಗೆ ಬೆಂಕಿ ಹಚ್ಚಿ ಸ್ಥಳೀಯರು ಸುಟ್ಟಿದ್ದಾರೆ. ಮಿಡತೆಗಳ ಕಾಟಕ್ಕೆ ಸುತ್ತಮುತ್ತಲಿನ ಗ್ರಾಮದ ರೈತರಲ್ಲಿ ಆತಂಕ ಶುರುವಾಗಿದೆ.

ರಾಜಸ್ಥಾನ ಮತ್ತು ಗುಜರಾತ್ ಭಾಗಗಳಲ್ಲಿ ಮಿಡತೆಗಳಿಗೆ ಸೇವಿಸಲು ಕೀಟಗಳು ಲಭ್ಯವಾಗುತ್ತಿಲ್ಲ. ಹೀಗಾಗಿ, ಭಾರಿ ಗಾಳಿ ಜೊತೆ ಮಿಡತೆಗಳು ದಕ್ಷಿಣ ಭಾರತದ ಇತರೆ ಭಾಗಗಳಿಗೆ ಪ್ರವೇಶಿಸುತ್ತಿವೆ.

ಮಿಡತೆ ಕಾಟ ತಡೆಯಲು ರೈತರು ತಗಡಿನ ಡಬ್ಬಿ, ಡ್ರಮ್, ತಟ್ಟೆ ಇವುಗಳನ್ನು ಬಾರಿಸುವ ಮೂಲಕ ಭಾರಿ ಶಬ್ದವನ್ನು ಹುಟ್ಟಿಸಬೇಕು. ರೇಡಿಯೋ ಅಥವಾ ಎಲೆಕ್ಟ್ರಾನಿಕ್ ಸೌಂಡ್ ಗಳನ್ನು ಹಾಕಬೇಕು. ಇದರಿಂದ ಮಿಡತೆ ತಂಡಗಳು ಭೂಮಿಯ ಮೇಲಿನ ಬೆಳೆಗಳಿಗೆ ಬರುವುದಿಲ್ಲ.












Click it and Unblock the Notifications