ಕೋಲಾರ ಶಾಸಕ ವರ್ತೂರ್ ಪ್ರಕಾಶ್ ಗೆ ಪತ್ನಿ ವಿಯೋಗ

ಬೆಂಗಳೂರು, ಜುಲೈ 26 : ಕೋಲಾರದ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಅವರ ಪತ್ನಿ ಇಂದು ಬೆಳಗ್ಗೆ (ಬುಧವಾರ) ನಿಧನರಾಗಿದ್ದಾರೆ.

ಕಳೆದೊಂದು ವಾರದಿಂದ ಡೆಂಗ್ಯೂ ಜ್ವರ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 40 ವರ್ಷದ ಶ್ಯಾಮಲಾ ಅವರು ಇಂದು ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಕಾರಿಯಾಗದೆ ಕೊನೆಯುಸಿರೆಳೆದರು.

Kolar independent MLA Varthur prakash's wife pass away

ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಶ್ಯಾಮಾಲಾ ಅವರಿಗೆ ಕಳೆದ ಎರಡು ದಿನಗಳಿಂದ ಡಯಾಲಿಸಿಸ್ ಮಾಡಲಾಗುತಿತ್ತು.

ಆದರೆ, ಇದೀಗ ಮಲ್ಟಿ ಆರ್ಗನ್ಸ್ ಫೇಲ್ಯೂರ್ ನಿಂದ ಮೃತಪಟ್ಟಿದ್ದಾರೆ ಹೊರತು ಡೆಂಗ್ಯೂನಿಂದ ಅಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ವರ್ತೂರಿಗೆ ಶ್ಯಾಮಲಾ ಮೃತದೇಹ ರವಾನೆ ಮಾಡಲಾಗುತ್ತಿದ್ದು, ವರ್ತೂರಿನಲ್ಲಿ ಇಂದು 3 ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ.

ಶ್ಯಾಮಲಾ ಅವರು ಪತಿ ವರ್ತೂರ್ ಪ್ರಕಾಶ್ ಹಾಗೂ ತೇಜಸ್, ರಕ್ಷಿತ್ ಸೇರಿದಂತೆ ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+