ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಸಿ ವ್ಯಾಲಿ ಬೃಹತ್ ಕೊಳವೆ ಧ್ವಂಸ: ವೈಟ್‌ ಫೀಲ್ಡ್ ಬಳಿ ರಸ್ತೆಗೆ ಹಾನಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 26: ಕೆಸಿ ವ್ಯಾಲಿಯ ಬೃಹತ್ ಕೊಳಚೆ ಪೈಪು ಧ್ವಂಸಗೊಂಡಿದ್ದು, ವೈಟ್‌ ಫೀಲ್ಡ್ ಬಳಿ ರಸ್ತೆ ಹಾನಿ ಉಂಟಾಗಿದೆ. ಕೆಸಿ ಏತ ನೀರಾವರಿ ಯೋಜನೆಯ ಪೈಪ್ ವೈಟ್‌ಫೀಲ್ಡ್ ಸಮೀಪದ ನಾಗೊಂಡನಹಳ್ಳಿಯ ಕೈತೋಟ ರಸ್ತೆಯಲಲ್ಇ ಒಡೆದು ಅಪಾರ ಪ್ರಮಾಣದ ನೀರು ಹರಿದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದೆ.

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ 126 ಕೆರೆಗಳಿಗೆ ನೀರು ತುಂಬಿಸುವ ಕೆಸಿ ವ್ಯಾಲಿ(ಕೋರಮಂಗಲ ಚಲಘಟ್ಟ) ಯೋಜನೆಯು ಆರಂಭವಾಗಿ ಕೆಲವು ತಿಂಗಳು ಮಾತ್ರ ಆಗಿದೆ. ಇದರಿಂದ 200ಕ್ಕೂ ಹೆಚ್ಚು ಅಡಿ ಉದ್ದದ ರಸ್ತೆ ಕುಸಿದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.

ಕೆಸಿ ವ್ಯಾಲಿ, ಪೈಪ್ ದುಡ್ಡು ಹೊಡೆಯೋ ಯೋಜನೆ: ಜೆಡಿಎಸ್ ಅಭ್ಯರ್ಥಿ ಬಚ್ಚೇಗೌಡ ಸಂದರ್ಶನ ಕೆಸಿ ವ್ಯಾಲಿ, ಪೈಪ್ ದುಡ್ಡು ಹೊಡೆಯೋ ಯೋಜನೆ: ಜೆಡಿಎಸ್ ಅಭ್ಯರ್ಥಿ ಬಚ್ಚೇಗೌಡ ಸಂದರ್ಶನ

ಕಳಪೆ ಪೈಪ್ ಕಾಮಗಾರಿಯಿಂದ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಕಾಡುಗೋಡಿಯಿಂದ ನಾಗೊಂನಹಳ್ಳಿ ಕೈ ತೋಟ ಹಾಗೂ ವಾಲೆಪುರದ ಮೂಲಕ ವರ್ತೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದೆ. ಅಲ್ಲದೆ ಪೈಪ್ ಅಳವಡಿಸಿರುವ ಈ ರಸ್ತೆ 200 ಅಡಿಗೂ ಹೆಚ್ಚು ಕುಸಿದಿರುವುದರಿಂದ ವಾಹನ ಸಂಚಾರಕ್ಕೂ ತೊಂದರೆ ಉಂಟಾಯಿತು.

ಸಾಕಷ್ಟು ನೀರು ಪೋಲಾದ ಬಳಿಕ ನೀರು ನಿಲ್ಲಿಸಿದ್ದಾರೆ

ಸಾಕಷ್ಟು ನೀರು ಪೋಲಾದ ಬಳಿಕ ನೀರು ನಿಲ್ಲಿಸಿದ್ದಾರೆ

ಪೈಪ್ ಒಡೆದು ಸಾಕಷ್ಟು ಪ್ರಮಾಣದ ನೀರು ಪೋಲಾದ ಬಳಿಕ ನೀರನ್ನು ನಿಲ್ಲಿಸಲಾಗಿದೆ. ಸಣ್ಣ ನೀರಾವರಿ ಇಲಾಖೆ ವತಿಯಿಂದ 148 ಕೋಟಿ ವೆಚ್ಚದಲ್ಲಿ ಕೆಸಿ ವ್ಯಾಲಿ ಪೈಪ್ ಅಳವಡಿಸಲಾಗಿದೆ. ಆಂಧ್ರ ಮೂದಲ ಮೇಘಾ ಎಂಜಿನಿಯರಿಂಗ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.

126 ಹಳ್ಳಿಗಳಿಗೆ ನೀರು ಪೂರೈಸುತ್ತಿದ್ದ ಪೈಪ್

126 ಹಳ್ಳಿಗಳಿಗೆ ನೀರು ಪೂರೈಸುತ್ತಿದ್ದ ಪೈಪ್

126 ಹಳ್ಳಿಗಳಿಗೆ ನೀರು ಪೂರೈಸುತ್ತಿದ್ದ ಪೈಪ್ ಇದಾಗಿತ್ತು, ಅಷ್ಟು ಹಳ್ಳಿಗೆ ಒಂದು ದಿನ ನೀರು ಪೂರೈಸಬಹುದಾದಷ್ಟು ನೀರು ಪೋಲಾಗಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎನ್ನುವುದು ಸ್ಪಷ್ಟವಾಗಿದೆ.

ಕೋಲಾರ ಕರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಲು ಹೈಕೋರ್ಟ್‌ ಅಸ್ತುಕೋಲಾರ ಕರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಲು ಹೈಕೋರ್ಟ್‌ ಅಸ್ತು

ಕೆಸಿ ವ್ಯಾಲಿ ಮೂಲಕ ನೀರು ಹರಿಸದಂತೆ ಹೈಕೋರ್ಟ್ ಆದೇಶ ನೀಡಿತ್ತು

ಕೆಸಿ ವ್ಯಾಲಿ ಮೂಲಕ ನೀರು ಹರಿಸದಂತೆ ಹೈಕೋರ್ಟ್ ಆದೇಶ ನೀಡಿತ್ತು

ಕೋರಮಂಗಲ-ಚೆಲ್ಲಘಟ್ಟ ವ್ಯಾಲಿ(ಕೆಸಿ ವ್ಯಾಲಿ) ಯೋಜನೆ ಮೂಲಕ ಕೋಲಾರ ಜಿಲ್ಲೆಯ ಕೆರೆಗಳಿಗೆ ನೀರುವ ಹರಿಸುವ ಕಾರ್ಯಕ್ಕೆ ಮೊದಲ ಹಿನ್ನಡೆಯಾಗಿದೆ. ಆಗಸ್ಟ್ 1ರವರೆಗೆ ಕೆಸಿ ವ್ಯಾಲಿ ನೀರನ್ನು ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸದಂತೆ ಹೈಕೋರ್ಟ್‌ ಆದೇಶ ನೀಡಿತ್ತು. ಅದರ ಬಳಿಕ ಯಾವುದೇ ಸೂಚನೆ ನೀಡಿಲ್ಲ.

ಕೆಸಿ ವ್ಯಾಲಿ ಕಲುಷಿತ ನೀರು: ಅಧಿಕಾರಿಗಳ ವರ್ತನೆಗೆ ಹೈಕೋರ್ಟ್‌ ತರಾಟೆಕೆಸಿ ವ್ಯಾಲಿ ಕಲುಷಿತ ನೀರು: ಅಧಿಕಾರಿಗಳ ವರ್ತನೆಗೆ ಹೈಕೋರ್ಟ್‌ ತರಾಟೆ

ಕೆಸಿ ವ್ಯಾಲಿ , ಪೈಪ್ ದುಡ್ಡು ಹೊಡೆಯೋ ಯೋಜನೆ

ಕೆಸಿ ವ್ಯಾಲಿ , ಪೈಪ್ ದುಡ್ಡು ಹೊಡೆಯೋ ಯೋಜನೆ

ಸಿ ವ್ಯಾಲಿ ಈ ಭಾಗಕ್ಕೆ ಅನಗತ್ಯ. ಅಂತರ್ಜಲದಲ್ಲಿ ರಾಸಾಯನಿಕ ಪದಾರ್ಥಗಳು ಸೇರಿದಾಗ ಅದು ಮಾರಕ ರೋಗಕ್ಕೆ ಕಾರಣವಾಗುತ್ತದೆ. ಅದರ ಬಗ್ಗೆ ಸೈಂಟಿಸ್ಟ್ ಗಳನ್ನು ಕರೆದು ಸಂಶೋಧನೆಗಳನ್ನೂ ಮಾಡಿದ್ದೇವೆ. ಜನರಿಗೆ ಈ ವಿಚಾರವನ್ನು ತಿಳಿಸಿದ್ದೇವೆ. ಇದು ಪೈಪ್ ಲೈನ್ ಲಾಬಿಗಾಗಿ, ಅದರಿಂದ ದುಡ್ಡು ಹೊಡೆಯಲು ಮಾಡಿದ ಯೋಜನೆಯಿದು. ಎತ್ತಿನಹೊಳೆಯಿಂದ ನೀರು ಬರುತ್ತದೆ, ಆದರೆ, ಕಾಮಗಾರಿ ನಡೆಯುತ್ತಿರುವ ವೇಗ ನೋಡಿದರೆ, ಇನ್ನು ಹತ್ತು ವರ್ಷವಾದರೂ ಆ ಯೋಜನೆ ಪೂರ್ಣಗೊಳ್ಳುವುದಿಲ್ಲ. ಶರಾವತಿಯಿಂದ ಹೇಮಾವತಿಗೆ ನೀರನ್ನು ಹರಿಸಿ, ವಾಣಿವಿಲಾಸ ಡ್ಯಾಂಗೆ ನೀರು ತಂದರೆ ತುಮಕೂರು ಜಿಲ್ಲೆಗೆ ನೀರು ಬರುತ್ತದೆ ಎಂದು ಬಚ್ಚೇಗೌಡ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

English summary
Pipeline of KC lift irrigation valley was damaged near White Field and around 200 meter road was destroyed at Nagondahalli on Thursday. MLS Aravind Limbavali has alleged substandard work was the reason for this pipeline damage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X