ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಅಂತ್ಯವಾಗುವವರೆಗು ಮದ್ಯ ನಿಷೇಧ ಮಾಡೋದು ಒಳ್ಳೆಯದು

|
Google Oneindia Kannada News

ಕೋಲಾರ, ಏಪ್ರಿಲ್ 29: ಕೊರೊನಾ ಅಂತ್ಯವಾಗುವವರೆಗು ಮದ್ಯ ನಿಷೇಧ ಮಾಡೋದು ಒಳ್ಳೆಯದು ಎಂದು ಅಬಕಾರಿ ಸಚಿವ ಎಚ್‌ ನಾಗೇಶ್‌ ಹೇಳಿದ್ದಾರೆ. ಮದ್ಯ ನಿಷೇಧದ ಬಗ್ಗೆ ಕೋಲಾರದಲ್ಲಿ ಅವರ ಮಾತನಾಡಿದ್ದಾರೆ.

''ಮೇ 3ನೇ ತಾರೀಖಿನವರೆಗೂ ಬಾರ್‌ಗಳು ಓಪನ್ ಮಾಡುವುದಿಲ್ಲ. ಪ್ರಧಾನ ಮಂತ್ರಿಗಳು ಮದ್ಯಪಾನ ನಿಷೇಧ ಮಾಡಿದ್ದೇವೆ ಅಂತ ಕಟ್ಟುನಿಟ್ಟಾಗಿ ಹೇಳಿದ್ದಾರೆ.'' ಎಂದಿರುವ ಅವರು ಕೊರೊನಾ ಅಂತ್ಯ ಕಾಣುವವರೆಗೆ ಮದ್ಯ ನಿಷೇಧ ಮಾಡೋದು ಒಳ್ಳೆಯದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮದ್ಯದಂಗಡಿ ಓಪನ್ ಮಾಡಿ ಅಂತ ಅಧಿಕಾರಿಗಳು ಹೇಳಿದ್ರೂ, ಸಿಎಂ ಒಪ್ಪುತ್ತಿಲ್ಲ!ಮದ್ಯದಂಗಡಿ ಓಪನ್ ಮಾಡಿ ಅಂತ ಅಧಿಕಾರಿಗಳು ಹೇಳಿದ್ರೂ, ಸಿಎಂ ಒಪ್ಪುತ್ತಿಲ್ಲ!

''ಒಂದೆರೆಡು ತಿಂಗಳು ಮದ್ಯಪಾನ ಇಲ್ಲ ಅಂದ್ರೆ ಏನೂ ಆಗೋದಿಲ್ಲ.'' ಅದ್ದರಿಂದ ಕೊರೊನಾ ಕೊನೆಯಾದ ನಂತರವಷ್ಟೇ ಮದ್ಯದ ಅಂಗಡಿ ತೆರೆದರೆ ಒಳಿತು ಎಂದು ಎಚ್‌ ನಾಗೇಶ್‌ ಹೇಳಿದ್ದಾರೆ.

It Better To Ban Liquor Till Corona Cases Endes Says Excise Minister Nagesh

ಮದ್ಯ ಮಾರಾಟದಿಂದ ರಾಜ್ಯದಲ್ಲಿ ಕಳ್ಳಬಟ್ಟಿ ತಯಾರಿಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ 30 ಸಾವಿರ ಲೀಟರ್ ನಷ್ಟು ಕಳ್ಳಬಟ್ಟಿಯನ್ನು ಈಗಾಗಲೇ ವಶಕ್ಕೆ ಪಡೆದಿದ್ದೇವೆ. ಹೊಸದಾಗಿ 15 ಕಳ್ಳಬಟ್ಟಿ ಜಾಲ ಹುಟ್ಟಿಕೊಂಡಿದೆ ಎಂದಿದ್ದಾರೆ.

ಕೆಲವರು ಇಂಟರ್ನೆಟ್ ಮೂಲಕ ತಿಳಿದು ಕಳ್ಳಬಟ್ಟಿ, ವೈನ್ ತಯಾರಿಸಿಕೊಳ್ಳುತ್ತಿದ್ದಾರೆ. ಇದನ್ನು ಬಿಟ್ಟು ಕುಡುಕರು ತಾಳ್ಮೆಯಿಂದ ಸಹಕರಿಸಿ ಎಂದು ಮನವಿ ಮಾಡಿದ ಸಚಿವ ನಾಗೇಶ್.

ಮತ್ತೊಂದು ಕಡೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಹ ಮದ್ಯ ಮಾರಾಟಕ್ಕೆ ಅನುಮತಿ ನೀಡಿಲ್ಲ. ಅಧಿಕಾರಿಗಳು ಮದ್ಯ ಮಾರಾಟ ಮಾಡುಬಹುದು ಎಂದರು ಸಹ ಬಿಎಸ್‌ವೈ ಸದ್ಯಕ್ಕೆ ಮದ್ಯ ಮಾರಾಟ ನಿರ್ಬಂಧವನ್ನು ಹಿಂಪಡೆದಿಲ್ಲ.

English summary
It better to ban liquor till corona cases endes says karnataka excise minister H Nagesh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X