ಕೋಲಾರ: ನವಜಾತ ಶಿಶುವನ್ನು ಕದ್ದ ಕಳ್ಳರು
ಕೋಲಾರ, ಫೆಬ್ರವರಿ 24: ನಿನ್ನೆ ರಾತ್ರಿ ಹುಟ್ಟಿದ ಶಿಸುವನ್ನು ಅಪರಿಚಿತರಾರೊ ಕದ್ದೊಯ್ದಿರುವ ಘಟನೆ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಚಲ್ದಿಗಾನಹಳ್ಳಿಯ ರವಿ, ಮತ್ತು ಮಾಲಾ ದಂಪತಿಗೆ ಕೆಜಿಎಫ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ 9 ಗಂಟೆಗೆ ಗಂಡು ಮಗು ಜನಿಸಿತ್ತು, ರಾತ್ರಿ ಮಲುಗುವಾಗ ತಾಯಿಯ ಪಕ್ಕದಲ್ಲೇ ಮಗುವನ್ನು ಮಲಗಿಸಲಾಗಿತ್ತು ಆದರೆ ಬೆಳೆಗೆದ್ದು ನೋಡಿದರೆ ಮಗು ಕಾಣೆ.
ನವ ಮಾಸ ಹೊತ್ತು, ಹೆತ್ತಿದ್ದ ಕೂಸು ಕೆಲವೇ ಗಂಟೆಗಳಲ್ಲಿ ತನ್ನಿಂದ ದೂರಾಗಿರುವುದರಿಮಂದ ಘಾಸಿಗೊಳಗಾಗಿರುವ ತಾಯಿ ಮಾಲಾ ಆಕ್ರಂದನ ಮುಗಿಲು ಮುಟ್ಟಿದ್ದು, ಪೋಷಕರು ರಾಬರ್ಟ್‌ಸನ್ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಸ್ಥಳೀಯರೆ ಯಾರೊ ಮಗು ಕದ್ದಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ನಿಧಿ ಶೋಧಕರ ಕೃತ್ಯವೂ ಇರಬಹುದೆಂಬ ಊಹಾಪೋಹ ಹರಿದಾಡುತ್ತಿದೆ.












Click it and Unblock the Notifications