ಕಾಂಗ್ರೆಸ್ ಕದ ತಟ್ಟುತ್ತಿರುವ ಮಾಜಿ ಸಚಿವ ವರ್ತೂರು ಪ್ರಕಾಶ್

ಕೋಲಾರ, ಫೆಬ್ರವರಿ 15; ಮಾಜಿ ಸಚಿವ ವರ್ತೂರು ಪ್ರಕಾಶ್ ಕಾಂಗ್ರೆಸ್ ಪಕ್ಷ ಸೇರಲು ಪ್ರಯತ್ನ ನಡೆಸುತ್ತಿದ್ದಾರೆ. "ಸಿದ್ದರಾಮಯ್ಯ ಅವರು ಏನೂ ಮಾಡು ಅಂದರೂ ಮಾಡುವುದಕ್ಕೆ ಸಿದ್ಧ" ಎಂದು ಅವರು ಹೇಳಿದ್ದಾರೆ.

ಸೋಮವಾರ ಕೋಲಾರದಲ್ಲಿ ಮಾತನಾಡಿದ ವರ್ತೂರು ಪ್ರಕಾಶ್, "ನನಗೆ ಕಾಂಗ್ರೆಸ್ ಸೇರಲು ಆಸೆಯಾಗಿದೆ. ಈಗಾಗಲೇ ಕಾಂಗ್ರೆಸ್ ಮುಖಂಡರ ಜೊತೆ ಮಾತುಕತೆ ನಡೆಯುತ್ತಿದೆ" ಎಂದು ಹೇಳಿದರು.

"ಸಿದ್ದರಾಮಯ್ಯ ಅವರು ಏನೂ ಮಾಡು ಅಂದರೂ ಮಾಡುವುದಕ್ಕೆ ಸಿದ್ಧ. ಬೇಕಾದರೆ ಕೋಲಾರದಿಂದಲೇ ಅಹಿಂದ ಸಮಾವೇಶ ಪ್ರಾರಂಭಿಸಲಿ. ನಾನೇ ಮುಂದೆ ನಿಂತು ಒಂದರಿಂದ ಎರಡು ಲಕ್ಷ ಜನ ಸೇರಿಸುತ್ತೇನೆ" ಎಂದರು.

I Will Join Congress Says Former Minister Varthur Prakash

"ನಾನು ಸ್ಥಾಪನೆ ಮಾಡಿದ ನಮ್ಮ ಕಾಂಗ್ರೆಸ್ ಈಗ ಇಲ್ಲ. ನನ್ನದೇನಿದ್ದರೂ ನಡೆ ಇನ್ನು ಮುಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಡೆ. ಇನ್ನು 26 ತಿಂಗಳ ಬಳಿಕ ಚುನಾವಣೆ ಬರಲಿದೆ. ನಾನು ಏನಾದರೂ ಮಾಡಿ ಶಾಸಕ ಆಗಬೇಕು" ಎಂದು ವರ್ತೂರು ಪ್ರಕಾಶ್ ತಿಳಿಸಿದರು.

"ನಮ್ಮ ಕಾರ್ಯಕರ್ತರ ಒತ್ತಾಯದಿಂದ ಕಾಂಗ್ರೆಸ್ ಬೇಕು ಎಂದು ಹೇಳುತ್ತಿದ್ದೇನೆ. ನನಗೆ ಮೊದಲಿನಿಂದಲೂ ಬಿಜೆಪಿ ಪಕ್ಷ ಕಂಡರೆ ಆಗುವುದಿಲ್ಲ. ಬಿಜೆಪಿ ಸರ್ಕಾರದಲ್ಲಿ ನಾನು ಮಂತ್ರಿ ಆಗಿದ್ದು ಹೌದು, ಆದರೆ ಪಕ್ಷವೇ ಬೇರೆ, ಸರ್ಕಾರವೇ ಬೇರೆ" ಎಂದು ಸ್ಪಷ್ಟಪಡಿಸಿದರು.

"ಸಮುದಾಯದ ವಿಚಾರದಲ್ಲಿ ಈಶ್ವರಪ್ಪ ನಮ್ಮ ನಾಯಕ ಅಂತ ಸಹ ಹೇಳಿದ್ದೆ. ಕಾಂಗ್ರೆಸ್ ಪಕ್ಷ ಸಿಗದೆ ಇದ್ದರೆ ಹೊಲಿಗೆ ಮಿಷನ್ ಗುರುತಿನಲ್ಲಿ ನಿಲ್ಲುತ್ತೇನೆ. ಕೆ. ಎಚ್. ಮುನಿಯಪ್ಪ ನನ್ನನ್ನು ಬೇಡ ಅಂತಿದ್ದಾರೆ. ಮುನಿಯಪ್ಪ ಅವರಿಗೆ ಯಾವ ಹಳ್ಳಿಯಲ್ಲಿ ಯಾವ ಲೀಡರ್ ಅಂತ ಗೊತ್ತಿಲ್ಲ. ನಾನು ಅವರ ಪರವಾಗಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದ್ದೇನೆ" ಎಂದರು.

"ಇನ್ನು ಮೂರು ದಿನಗಳಲ್ಲಿ ಕೆ. ಎಚ್. ಮುನಿಯಪ್ಪ ಅವರನ್ನು ಭೇಟಿ ಮಾಡುತ್ತೇನೆ. ಕಾಂಗ್ರೆಸ್‌ಗೆ ಬೇಡ ಅಂತ ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಹಾಗೂ ಕೆ. ಎಚ್. ಮುನಿಯಪ್ಪ ಹೇಳಿಕೆ ನೀಡಿದ್ದಾರೆ" ಎಂದು ವರ್ತೂರು ಪ್ರಕಾಶ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+