ಕೋಲಾರ ಕರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಲು ಹೈಕೋರ್ಟ್ ಅಸ್ತು
ಬೆಂಗಳೂರು, ಸೆಪ್ಟೆಂಬರ್ 28: ಕೋಲಾರ ಜಿಲ್ಲೆಯ ಕೆರೆಗಳಿಗೆ ಕೆ.ಸಿ.ವ್ಯಾಲಿ (ಕೋಲಾರ-ಛಲಘಟ್ಟ) ಯಿಂದ ನೀರು ಹರಿಸಲು ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ.
ಕೆ.ಸಿ ವ್ಯಾಲಿಯಿಂದ ಕೋಲಾರ ಜಿಲ್ಲೆ ಕೆರೆಗಳಿಗೆ ಸಂಸ್ಕರಿತ ತ್ಯಾಜ್ಯ ನೀರನ್ನು ಹರಿಸಲು ಈ ಮುಂಚೆ ಮಧ್ಯಂತರ ಪೀಠವು ತಡೆ ಆಜ್ಞೆ ವಿಧಿಸಿತ್ತು. ಆ ತಡೆ ಆಜ್ಞೆಯನ್ನು ಇಂದು ಹೈಕೋರ್ಟ್ ತೆರವುಗೊಳಿಸಿದೆ.
ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯ ಆಂಜನೇಯ ಎಂಬುವರು ಹಾಕಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಮಧ್ಯಂತರ ತಡೆಯನ್ನು ತೆರವುಗೊಳಿಸಿದ್ದು, ಇನ್ನು ಮುಂದೆ ಕೆ.ಸಿ.ವ್ಯಾಲಿಯ ಸಂಸ್ಕರಿತ ನೀರು ಕೋಲಾರದ ಕೆರೆಗಳಿಗೆ ಹರಿಸಬಹುದಾಗಿದೆ.

ತ್ಯಾಜ್ಯ ನೀರಿನ ಪೂರ್ಣ ಸಂಸ್ಕರಣೆ ಮಾಡದೆ ಕೆರೆಗಳಿಗೆ ಹರಿಸಲಾಗುತ್ತಿದೆ ಎಂದು ಆರೋಪಿಸಿ ನೀರು ಹರಿವು ತಡೆಗೆ ಅರ್ಜಿ ಹಾಕಲಾಗಿತ್ತು. ಆದರೆ ಸರ್ಕಾರದ ಪರ ವಕೀಲರು ನೀರನ್ನು ವೈಜ್ಞಾನಿಕ ರೀತಿಯಲ್ಲಿಯೇ ಸಂಸ್ಕೃಣೆ ಮಾಡಲಾಗುತ್ತಿದೆ ಎಂದು ಭರವಸೆ ಕೊಟ್ಟ ಕಾರಣ ಹೈಕೋರ್ಟ್ ಈ ಆದೇಶ ನೀಡಿದೆ.












Click it and Unblock the Notifications