• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಲ್ಲಾಪುರ ಕ್ಷೇತ್ರ ಉಪಚುನಾವಣೆ: ಗೆಲ್ಲುವ ಹಠದಲ್ಲಿ ಹೆಬ್ಬಾರ್, ನಾಯ್ಕ

By ಕಾರವಾರ ಪ್ರತಿನಿಧಿ
|

ಉಪ ಚುನಾವಣೆ ನಡೆಯುತ್ತಿರುವ ಹದಿನೈದು ಕ್ಷೇತ್ರಗಳ ಪೈಕಿ ಯಲ್ಲಾಪುರ ಕ್ಷೇತ್ರ ಕೂಡ ಒಂದು. 2018ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಪಡೆದುಕೊಂಡಿದ್ದ ಶಿವರಾಮ್ ಹೆಬ್ಬಾರ್ ರಾಜೀನಾಮೆ ನೀಡಿ ಅನರ್ಹರಾಗಿದ್ದರಿಂದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದೆ.

ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಈ ಬಾರಿ ಬಿಜೆಪಿ ಅಭ್ಯರ್ಥಿ. ಶಿವರಾಮ ಹೆಬ್ಬಾರ್ ಹಾಗೂ ಕಾಂಗ್ರೆಸ್ ನ ಭೀಮಣ್ಣ ನಾಯ್ಕ ನಡುವೆ ಈ ಬಾರಿ ನೇರ ಹಣಾಹಣಿ ಏರ್ಪಟ್ಟಿದೆ. ಜೆಡಿಎಸ್ ‍ನಿಂದ ಎ.ಚೈತ್ರಾ ಗೌಡ ಕಣದಲ್ಲಿದ್ದಾರೆ. ಉಳಿದಂತೆ ಜೈತುನಾಬಿ ಜಿಗಳೂರ (ಕರ್ನಾಟಕ ರಾಷ್ಟ್ರ ಸಮಿತಿ), ಸುನಿಲ್ ಪವಾರ್ (ಉತ್ತಮ ಪ್ರಜಾಕೀಯ ಪಕ್ಷ), ಚಿದಾನಂದ ಹರಿಜನ, ಮಹೇಶ ಹೆಗಡೆ (ಪಕ್ಷೇತರರು) ಸ್ಪರ್ಧಿಸಿದ್ದಾರೆ.

LIVE : ಸಿದ್ದರಾಮಯ್ಯ ಶೀಘ್ರ ಬಿಜೆಪಿಗೆ: ಮತಗಟ್ಟೆ ಮುಂದೆ ರಮೇಶ್ ಭವಿಷ್ಯLIVE : ಸಿದ್ದರಾಮಯ್ಯ ಶೀಘ್ರ ಬಿಜೆಪಿಗೆ: ಮತಗಟ್ಟೆ ಮುಂದೆ ರಮೇಶ್ ಭವಿಷ್ಯ

ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರ ವಿರುದ್ಧ ಶಿವರಾಮ ಹೆಬ್ಬಾರ್ ಗೆಲ್ಲಲೇಬೇಕೆಂದು ಹಟ ತೊಟ್ಟಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಕ್ಷೇತ್ರಕ್ಕೆ ಬಂದು ಭರ್ಜರಿ ಚುನಾವಣಾ ಪ್ರಚಾರವನ್ನೂ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರೂ ತಾವೇನೂ ಕಮ್ಮಿಯಿಲ್ಲ ಎನ್ನುವಂತೆ ಅವಿರತವಾಗಿ ಪ್ರಚಾರ ನಡೆಸಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರ ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಭಾಗವನ್ನು ಒಳಗೊಂಡಿದೆ. ಇಲ್ಲಿ 1,72,547 ಒಟ್ಟು ಮತದಾರರಿದ್ದು, 87,899 ಪುರುಷರು, 84,647 ಮಹಿಳೆಯರು, 1 ತೃತೀಯ ಲಿಂಗಿ ಮತದಾರರಿದ್ದಾರೆ.

ಕಾಗವಾಡ ವಿಧಾನ ಸಭಾ ಕ್ಷೇತ್ರ; ಅದಲು ಬದಲು ನಾಯಕರ ಹಣಾಹಣಿಕಾಗವಾಡ ವಿಧಾನ ಸಭಾ ಕ್ಷೇತ್ರ; ಅದಲು ಬದಲು ನಾಯಕರ ಹಣಾಹಣಿ

ಕ್ಷೇತ್ರದಲ್ಲಿ ಒಟ್ಟು 231 ಮತಗಟ್ಟೆಗಳಿದ್ದು, 103 ಸೂಕ್ಷ್ಮ ಮತಗಟ್ಟೆಗಳಾಗಿವೆ. 128 ಸಾಮಾನ್ಯ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮುಂಡಗೋಡದ ಬಸವನಗರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಯಲ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಖಿ ಮತಗಟ್ಟೆಗಳಿದ್ದು, ಯಲ್ಲಾಪುರದ ಕೋಟೆಮನೆ ಪ್ರಾಥಮಿಕ ಶಾಲೆಯಲ್ಲಿ ಬುಡಕಟ್ಟು ಮತಗಟ್ಟೆ ರೂಪಿಸಲಾಗಿದೆ. ಮುಂಡಗೋಡದ ಇಂದೂರಿನ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಗವಿಕಲಸ್ನೇಹಿ ಮತಗಟ್ಟೆ ನಿರ್ಮಿಸಲಾಗಿದೆ. ಮತದಾನದ ದಿನ ಒಟ್ಟು 1,344 ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್ ಜಾಗ ತುಂಬುವವರ್ಯಾರು?ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್ ಜಾಗ ತುಂಬುವವರ್ಯಾರು?

ಜಾತಿವಾರು ಮತ ಲೆಕ್ಕಾಚಾರ: ಕ್ಷೇತ್ರದಲ್ಲಿ ಒಟ್ಟು 1,72,630 ಮತದಾರರಿದ್ದು, ಇಲ್ಲಿ ಹವ್ಯಕರ ಮತಗಳೇ ನಿರ್ಣಾಯಕವಾಗಿದೆ. ಬ್ರಾಹ್ಮಣರು- 26,000, ಮರಾಠ -23,000, ಎಸ್.ಸಿ- 21,000, ಲಿಂಗಾಯತ- 21,000. ನಾಮದಾರಿ-20,000. ಮುಸ್ಲಿಂ-20,000, ಗೌಳಿ- 11,000, ಎಸ್‌ಟಿ- 8000, ಕ್ರಿಶ್ಚಿಯನ್-3000, ಗಂಗಾಮತ-3000, ಒಕ್ಕಲಿಗ-2000, ಕುರುಬ-1500, ಮಡಿವಾಳ -1500, ಕುಣಬಿ-1500, ಜೈನ್ -800, ಸವಿತಾ ಸಮಾಜ-600, ನಾಡವರ-500, ರಜಪೂತ- 500, ಉಪ್ಪಾರ-500 ಇದ್ದಾರೆ.

2018ರ ಚುನಾವಣಾ ಫಲಿತಾಂಶ: 2018ರ ಚುನಾವಣೆಯಲ್ಲಿ ಅರಬೈಲ್ ಹೆಬ್ಬಾರ್ ಶಿವರಾಮ್ ಅವರು ಕಾಂಗ್ರೆಸ್ ನಿಂದ 66,290 ಮತಗಳಿಂದ ಗೆದಿದ್ದರು. ಬಿಜೆಪಿಯ ವಿ ಎಸ್ ಪಾಟೀಲ ಅವರನ್ನು 1,483 ಮತಗಳ ಅಂತರದಿಂದ ಸೋಲಿಸಿದ್ದರು.

English summary
Yellapura Constituency is also one among the 15 constituencies facing by elections, there are 1,72,547 voters in this constituency, Here is a update of by election in yellapur constituency
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X