Dam Water level: ಕದ್ರಾ, ಸೂಪಾ, ಗೇರುಸೊಪ್ಪ ಜಲಾಶಯ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ
ಉತ್ತರ ಕನ್ನಡ, ಜುಲೈ. 09: ರಾಜ್ಯದ ಕರಾವಳಿ ಹಾಗೂ ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಉತ್ತರ ಕನ್ನಡದಲ್ಲಿಯೂ ವರುಣನ ಆರ್ಭಟ ಜೋರಾಗಿಯೇ ಇದೆ. ಭಾರಿ ಮಳೆ ಪರಿಣಾಮ ರಾಜ್ಯದ ಅನೇಕ ಜಲಾಶಗಳು ತುಂಬಿದ್ದು, ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.
ಕರಾವಳಿ, ಉತ್ತರ ಕನ್ನಡ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಕಳೆದ ಐದು ದಿನದಿಂದಲೂ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರೆಯುತ್ತಿದೆ. ಇದೇ ವೇಳೆ ಕೊಡಸಳ್ಳಿ ಜಲಾಶಯ, ಕದ್ರಾ ಜಲಾಶಯ, ಸೂಪಾ ಜಲಾಶಯ, ತಟ್ಟಿ ಹಳ್ಳ ಜಲಾಶಯ, ಗೇರುಸೊಪ್ಪ ಜಲಾಶಯ, ಬೊಮ್ಮನಹಳ್ಳಿ ಜಲಾಶಯ, ಲಿಂಗನಮಕ್ಕಿ ಜಲಾಶಯಗಳಲ್ಲಿ ನೀರಿನ ಮಟ್ಟ ತುಂಬುತ್ತಿದೆ. ಹಾಗಾದರೆ ಉತ್ತರ ಕನ್ನಡ ಜಿಲ್ಲೆಯ ಈ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಜುಲೈ 09ರಂದು ಉತ್ತರ ಕನ್ನಡ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ
* ಕೊಡಸಳ್ಳಿ ಜಲಾಶಯ
ಗರಿಷ್ಠ ಮಟ್ಟ: 75.50
ಇಂದಿನ ನೀರಿನ ಮಟ್ಟ: 69.40
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 9144.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 11739.0
ಮಳೆಯ ಪ್ರಮಾಣ: 4.0 ಮಿ ಮೀ
* ಕದ್ರಾ ಜಲಾಶಯ:
ಗರಿಷ್ಠ ಮಟ್ಟ: 34.50
ಇಂದಿನ ನೀರಿನ ಮಟ್ಟ: 30.11
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 18194.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 28387.0
ಮಳೆಯ ಪ್ರಮಾಣ: 8.0 ಮಿ ಮೀ
* ಸೂಪಾ ಜಲಾಶಯ
ಗರಿಷ್ಠ ಮಟ್ಟ: 564.00
ಇಂದಿನ ನೀರಿನ ಮಟ್ಟ: 533.00
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 19687.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 2033.00
ಮಳೆಯ ಪ್ರಮಾಣ (ಮಿ ಮೀ): 9.6

* ತಟ್ಟಿ ಹಳ್ಳ ಜಲಾಶಯ
ಗರಿಷ್ಠ ಮಟ್ಟ: 468.38
ಇಂದಿನ ನೀರಿನ ಮಟ್ಟ: 451.73
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 613.00
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 0.00
ಮಳೆಯ ಪ್ರಮಾಣ (ಮಿ ಮೀ): 3.0
* ಗೇರುಸೊಪ್ಪ ಜಲಾಶಯ
ಗರಿಷ್ಠ ಮಟ್ಟ: 55.00
ಇಂದಿನ ನೀರಿನ ಮಟ್ಟ: 48.21
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 6437.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 10884.0
ಮಳೆಯ ಪ್ರಮಾಣ: 53.4
* ಬೊಮ್ಮನಹಳ್ಳಿ ಜಲಾಶಯ
ಗರಿಷ್ಠ ಮಟ್ಟ: 438.38
ಇಂದಿನ ನೀರಿನ ಮಟ್ಟ: 434.10
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 2181.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 5173.0
ಮಳೆಯ ಪ್ರಮಾಣ: 2.0
* ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ: 1819.00
ಇಂದಿನ ನೀರಿನ ಮಟ್ಟ: 1770.80
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 23420.00
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 1405.29
ಮಳೆಯ ಪ್ರಮಾಣ: 37.4 ಮಿ ಮೀ












Click it and Unblock the Notifications