ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೌಕಾನೆಲೆಯಲ್ಲಿ ಅತಿ ಕಡಿಮೆ ಮತದಾನ:ರಕ್ಷಣಾ ಸಿಬ್ಬಂದಿ ವಿರುದ್ಧ ಅಸಮಾಧಾನ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಏಪ್ರಿಲ್ 25:ಐಎನ್‌ಎಸ್ ಕದಂಬ ನೌಕಾನೆಲೆಯ ಮತಗಟ್ಟೆಯಲ್ಲಿ ಈ ಬಾರಿಯೂ ಕೇವಲ ಶೇ 8.84ರಷ್ಟು ಮಾತ್ರ ಮತ ಚಲಾವಣೆಯಾಗಿದೆ.

ನಗರ ಭಾಗದ ಸೀಬರ್ಡ್ ನೌಕಾನೆಲೆಯ ಕೇಂದ್ರೀಯ ವಿದ್ಯಾಲಯದಲ್ಲಿರುವ ಮತಗಟ್ಟೆ ಸಂಖ್ಯೆ 139ರಲ್ಲಿ ಒಟ್ಟು 916 ಮತದಾರರು ಇದ್ದಾರೆ. ಇದರಲ್ಲಿ 835 ಪುರುಷ, 81 ಮಹಿಳೆಯರು ಸೇರಿದ್ದಾರೆ. ಆದರೆ, ಮಂಗಳವಾರ (ಏ.23) ರಂದು ನಡೆದ ಲೋಕಸಭಾ ಚುನಾವಣೆಯ ಮತದಾನದ ದಿನ ಕೇವಲ 81 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ. 60 ಪುರುಷ ಹಾಗೂ 21 ಮಹಿಳಾ ಮತದಾರರು ಮಾತ್ರ ಮತ ಚಲಾವಣೆ ಮಾಡಿದ್ದಾರೆ.

 ಕರ್ನಾಟಕ ಲೋಕಸಮರ 2ನೇ ಹಂತ ಅಂತ್ಯ: ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಕರ್ನಾಟಕ ಲೋಕಸಮರ 2ನೇ ಹಂತ ಅಂತ್ಯ: ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

ಕಳೆದ ಬಾರಿ ಕೂಡ ಇಲ್ಲಿ ಕೇವಲ ಎರಡು ಮತ ಚಲಾವಣೆ ಆಗಿತ್ತು. ಈ ಬಾರಿ ಕೂಡ ತಮಗೂ ಚುನಾವಣೆಗೂ ಸಂಬಂಧ ಇಲ್ಲದಂತೆ ರಕ್ಷಣಾ ಇಲಾಖೆಯ ಸಿಬ್ಬಂದಿ ನಡೆದುಕೊಂಡಿದ್ದಾರೆ. 2014ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಶೇ 30 ರಷ್ಟು ಮತ ಚಲಾವಣೆಯಾಗಿತ್ತು.

Very low voting near INS Kadamba naval booth

ಉತ್ತರ ಕನ್ನಡ ಜಿಲ್ಲೆ ಗುಡ್ಡಗಾಡು ಪ್ರದೇಶ. ಆದರೂ ಇಲ್ಲಿ ತೆವಳುತ್ತಾ ಬಂದು ಮತದಾನ ಮಾಡಿದ ಉದಾಹರಣೆಗಳಿವೆ. ಅಕ್ಷರಸ್ಥರಾಗಿ, ಎಲ್ಲ ಸವಲತ್ತು ಇದ್ದೂ ಮತ ಚಲಾಯಿಸಿದ ರಕ್ಷಣಾ ಸಿಬ್ಬಂದಿ ವಿರುದ್ಧ ಇದೀಗ ವ್ಯಾಪಕ ಅಸಮಾಧಾನ ಉಂಟಾಗಿದೆ.

English summary
Very low voting near INS Kadamba naval booth.This time only 8.84 percent votes were cast. Now people expressed displeasure against the defense staff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X