• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಲಾಧಾರಿಗಳಿಗೆ ಜೊತೆಯಾದ ಶ್ವಾನ: ಧಾರವಾಡದಿಂದ 9 ದಿನಗಳ ನಿರಂತರ ಪಾದಯಾತ್ರೆ

By ಉತ್ತರ ಕನ್ನಡ ಪ್ರತಿನಿಧಿ
|
Google Oneindia Kannada News

ಕಾರವಾರ, ನವೆಂಬರ್‌ 30: ದೇವರ ಮೇಲಿನ ಭಕ್ತಿ ಹಾಗೂ ಸಮರ್ಪಣಾ ಭಾವಕ್ಕೆ ಯಾವುದೇ ಮಿತಿಗಳಿಲ್ಲ. ಅದು ಮಾನವರಿರಲಿ, ಪ್ರಾಣಿಗಳೇ ಆಗಿರಲಿ. ಭಕ್ತಿ ಹಾಗೂ ನಂಬಿಕೆ ಎಲ್ಲರಲ್ಲೂ ಒಂದೇ ಆಗಿರಲಿದೆ.

ಶಬರಿಮಲೆ ಪಾದಾಯಾತ್ರೆಗೆ ಹೊರಟಿದ್ದ ಅಯ್ಯಪ್ಪ ಸ್ವಾಮಿ ವೃತಾಧಾರಿಗಳೊಂದಿಗೆ ಶ್ವಾನವೊಂದು ಹೆಜ್ಜೆ ಹಾಕಿ ನೂರಾರು ಕಿ.ಮೀ ಕ್ರಮಿಸಿರುವ ಅಚ್ಚರಿಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ಕಾರವಾರದ ದಿಂಡಿ ಉತ್ಸವದಲ್ಲಿ ಗಮನ ಸೆಳೆದ 'ಕಾಂತಾರ'ದ ಪಂಜುರ್ಲಿ ದೈವಕಾರವಾರದ ದಿಂಡಿ ಉತ್ಸವದಲ್ಲಿ ಗಮನ ಸೆಳೆದ 'ಕಾಂತಾರ'ದ ಪಂಜುರ್ಲಿ ದೈವ

ಧಾರವಾಡದಿಂದ ಕೇರಳದ ಶಬರಿಮಲೆಗೆ ಹೊರಟ ಅಯ್ಯಪ್ಪ ಸ್ವಾಮಿ ಭಕ್ತರಾದ ನಾಗನಗೌಡ ಪಾಟೀಲ್, ಮಂಜು ಹಾಗೂ ರವಿ ಎನ್ನುವವರಿಗೆ ಮಾರ್ಗ ಮಧ್ಯೆ ಶ್ವಾನವೊಂದು ಜೊತೆಯಾಗಿದ್ದು, ವೃತಾಧಾರಿಗಳೊಂದಿಗೆ ತಾನು ಕೂಡ ನೂರಾರು ಕಿಲೋ ಮೀಟರ್‌ ಕ್ರಮಿಸಿದೆ.

ಪಾದಯಾತ್ರಿಗಳಿಗೆ ಜೊತೆಯಾದ ಶ್ವಾನ: 210 ಕಿ.ಮೀ ಯಾತ್ರೆ

ಪಾದಯಾತ್ರಿಗಳಿಗೆ ಜೊತೆಯಾದ ಶ್ವಾನ: 210 ಕಿ.ಮೀ ಯಾತ್ರೆ

ದಕ್ಷಿಣ ಭಾರತದ ಪುಣ್ಯ ಕ್ಷೇತ್ರ ಶಬರಿಮಲೆಗೆ ಪ್ರತಿ ನಿತ್ಯ ದೇಶದ ನಾನಾ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ. ಹುಬ್ಬಳ್ಳಿ ಧಾರವಾಡದಿಂದಲೂ ಪ್ರತಿನಿತ್ಯ ಸಾವಿರಾರು ವೃತಧಾರಿಗಳು ಶಬರಿಮಲೆಗೆ ತೆರಳುತ್ತಾರೆ. ಅದರಂತೆ ಧಾರವಾಡದ ಮಂಗಳಗಟ್ಟಿಯಿಂದ ಶಬರಿಮಲೆಗೆ ಪಾದಯಾತ್ರೆ ಹೊರಟಿದ್ದ ಮೂವರು ಮಾಲಾಧಾರಿಗಳಿಗೆ, ದಾರಿ ಮಧ್ಯೆ ಶ್ವಾನವೊಂದು ಜೊತೆಯಾಗಿದೆ. ಇದುವರೆಗೆ 210 ಕಿ.ಮೀ ಪಾದಯಾತ್ರೆ ನಡೆದಿದ್ದು, ಸದ್ಯ ಈ ತಂಡ ಹೊನ್ನಾವರ ತಲುಪಿದೆ. ಇನ್ನು ಧಾರವಾಡದಿಂದ ಶಬರಿಮಲೆ ತೆರಳಲು 1,100 ಕಿ.ಮೀ ಕ್ರಮಿಸಬೇಕಿದೆ.

9 ದಿನಗಳ‌ ಕಾಲ ನಿರಂತರ ಪಾದಯಾತ್ರೆ

9 ದಿನಗಳ‌ ಕಾಲ ನಿರಂತರ ಪಾದಯಾತ್ರೆ

ಮೂವರು ಭಕ್ತರು ಬರಿಗಾಲಿನಲ್ಲಿ ಧಾರವಾಡದಿಂದ ಯಾತ್ರೆ ಪ್ರಾರಂಭಿಸಿದಾಗ ಧಾರವಾಡದ ನರೇಂದ್ರ ಟೋಲ್ ಬಳಿ ಶ್ವಾನ ಜೊತೆಯಾಗಿದೆ. ಪ್ರಾರಂಭದಲ್ಲಿ ಶ್ವಾನ ತಮ್ಮನ್ನು ಹಿಂಬಾಲಿಸಿ ಬರುತ್ತಿರುವುದು ಯಾರ ಗಮನಕ್ಕೆ ಬಂದಿರಲಿಲ್ಲ. ಆದರೆ ಬಹುದೂರ ಸಾಗಿ ಬಂದಾಗಲೂ ಶ್ವಾನ ತಮ್ಮ ತಂಡದ ಬೆನ್ನ ಹಿಂದೆಯೇ ಬರುತ್ತಿರುವುದನ್ನು ಕಂಡು ಸ್ವಾಮಿಗಳ ತಂಡ ಅಚ್ಚರಿಗೊಂಡಿದೆ. ಶ್ವಾನಕ್ಕೆ ತಿಂಡಿ ಹಾಕಿದ್ದಾರೆ. ಬಳಿಕವೂ ಹಿಂಬಾಲಿಸಿದೆ. ಶ್ವಾನವನ್ನು ಹಿಂದೆ ಹೋಗಲಿ ಎಂದು ಓಡಿಸಿದ್ದರೂ ಕೂಡ ತೆರಳದೆ ನಿರಂತರವಾಗಿ 9 ದಿನಗಳ‌ ಕಾಲ ಜೊತೆ ಹೆಜ್ಜೆ ಹಾಕಿದೆ. ಪಾದಯಾತ್ರೆ ವೇಳೆ ಈ ತಂಡದ ಜೊತೆಗ ಹೆಜ್ಜೆ ಹಾಕುವ ಶ್ವಾನ, ವೃತಧಾರಿಗಳ ತಂಡ ವಿಶ್ರಾಂತಿ ಪಡೆಯುವ‌ ಸಂದರ್ಭ ಅದೂ ವಿಶ್ರಾಂತಿ ಪಡೆಯುತ್ತದೆ. ಮುಂಜಾನೆ ಬೇಗ ಈ ತಂಡದ ಜೊತೆಗೆ ಹೆಜ್ಜೆ ಹಾಕಲು ಆರಂಭಿಸುವ ಶ್ವಾನ, ತಂಡದಿಂದ ಸುಮಾರು ಮುಂದೆ ಹೋಗಿ ತಂಡದ ದಾರಿ ಕಾಯುತ್ತದೆ ಎನ್ನಲಾಗಿದೆ.

ಈ ಶ್ವಾನದಷ್ಟು ಮನುಷ್ಯನನ್ನು ಪ್ರೀತಿ ಮಾಡುವ ಶ್ವಾನ ಬೇರೆಲ್ಲೂಇಲ್ಲ

ಈ ಶ್ವಾನದಷ್ಟು ಮನುಷ್ಯನನ್ನು ಪ್ರೀತಿ ಮಾಡುವ ಶ್ವಾನ ಬೇರೆಲ್ಲೂಇಲ್ಲ

ಸದ್ಯ ಪಾದಯಾತ್ರೆಯಲ್ಲಿ ಜೊತೆಯಾಗಿರುವ ಶ್ವಾನವನ್ನು ದೇವರು ನಮಗೆ ಜೊತೆಯಾಗಿ ಕಳುಹಿಸರಬೇಕು. ಇದೇ ಕಾರಣಕ್ಕೆ ನಾವು ತಯಾರಿಸುವ ಆಹಾರವನ್ನು ಮೊದಲು ನಾವು ಅದಕ್ಕೆ ನೀಡುತ್ತೇವೆ. ನಾವು ಪ್ರತಿವರ್ಷ ಶಬರಿಮಲೆ ತೀರ್ಥಯಾತ್ರೆ ಮಾಡುತ್ತೇವೆ, ಆದರೆ ಇದು ಹೊಸ ಅನುಭವ‌ ಎಂದು ಮಾಲಾಧಾರಿ ನಾಗನ ಗೌಡ ಪಾಟೀಲ್ ಹೇಳಿದ್ದಾರೆ.


ಇನ್ನು ಈ ಬಗ್ಗೆ ಮಾಲಧಾರಿಗಳ ತಂಡದಲ್ಲಿರುವ ಮಂಜು ಎನ್ನುವವರು ಮಾತನಾಡಿದ್ದು, ಶ್ವಾನ ನಮ್ಮ ಜೊತೆಯಾಗಿನಿಂದಲೂ ನಮಗೆ ಒಳ್ಳೆಯದಾಗುತ್ತಿದೆ. ನಾನೂ ಸಹ ಶ್ವಾನ ಸಾಕಿದ್ದೆ. ಈ ಶ್ವಾನದಷ್ಟು ಮನುಷ್ಯನನ್ನು ಪ್ರೀತಿ ಮಾಡುವ ಶ್ವಾನ ಬೇರೆಲ್ಲೂಇಲ್ಲ. ನಮ್ಮ ಜೊತೆಗೂಡಿ ಇರುವ ಶ್ವಾನ ನಮ್ಮ ಜೊತೆ ಆಟವಾಡುತ್ತದೆ. ನಮ್ಮ ವಸ್ತುಗಳನ್ನು ಕಾಯುತ್ತದೆ, ಮಾತ್ರವಲ್ಲದೆ ಅಷ್ಟೇ ಉತ್ಸಾಹದಿಂದ ನಮ್ಮೊಡನೆ ಹೆಜ್ಜೆ ಹಾಕುತ್ತದೆ. ಇದು ಅಯ್ಯಪ್ಪ ಸ್ವಾಮಿಯ ಲೀಲೆ ಎಂದಿದ್ದಾರೆ.

ಸಹಸ್ರಾರು ಕಿಮೀ ಚಾರಣಕ್ಕೆ ಸಿದ್ಧವಾದ ಮಾಳಗಿ

ಸಹಸ್ರಾರು ಕಿಮೀ ಚಾರಣಕ್ಕೆ ಸಿದ್ಧವಾದ ಮಾಳಗಿ

ಇನ್ನು ಈ ಪ್ರೀತಿಯ ಶ್ವಾನಕ್ಕೆ ಮಾಳಗಿ ಎಂದು ಹೆಸರಿಸಿದ್ದಾರೆ. ಮಾಳಗಿ ಎಂದರೆ ಶಬರಿಮಲೆಗೆ ಬರುವ ಮಹಿಳಾ ವೃತ್ತಧಾರಿಗಳನ್ನು ಮಾಳಿಗೆಪುರತ್ತಮ್ಮ ಅಂತಾ ಕರೆಯುತ್ತಾರೆ. ಹೀಗಾಗಿ ಶಬರಿಮಲೆ ಪಾದಯಾತ್ರೆಗೆ ಜೊತೆಯಾದ ಶ್ವಾನಕ್ಕೆ ಮಾಳಗಿ ಎಂದು ಹೆಸರನ್ನು ಇಡಲಾಗಿದೆ. ಮಾಳಗಿ ಈಗ ನಾಗನಗೌಡ ಪಾಟೀಲ್ , ಮಂಜು ಹಾಗೂ ರವಿ ಅವರ ಪ್ರೀತಿಯ ಶ್ವಾನವಾಗಿದೆ.

ಒಟ್ಟಾರೆ ಭಕ್ತಿಯ ಮಹಿಮೆ ಎಂಬಂತೆ ಶಬರಿಮಲೆ ಯಾತ್ರಿಕರನ್ನು ಹಿಂಬಾಲಿಸಿದ ಶ್ವಾನವೊಂದು ಸಹಸ್ರಾರು ಕಿ.ಮೀ ಚಾರಣ ಮಾಡುತ್ತಿರುವುದು ಎಲ್ಲರಲ್ಲೂ ಅಚ್ಚರಿಮೂಡಿಸಿದೆ.

English summary
Stray Dog Walks 210 KM With Sabarimala Devotees From Dharwad. now team padayatra reached Honnavara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X