• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರದಲ್ಲಿ ತಾಯಿಯ ಅಂತ್ಯಸಂಸ್ಕಾರಕ್ಕೆ ಪರದಾಡಿದ ಯೋಧ

|
Google Oneindia Kannada News

ಕಾರವಾರ, ಜುಲೈ 8: ಕಾರವಾರದ ನೌಕಾನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನ ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರ ನಡೆಸಲು ಯೋಧ ಪರದಾಡಿದ ಘಟನೆ ಇಂದು ನಡೆದಿದೆ.

ಜಾರ್ಖಂಡ್ ಮೂಲದ ಯೋಧ ಸುಮಿತ್ ಕುಮಾರ್ ಸೆಹೆಗಲ್ ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರ ತಾಯಿ ಅನಿತಾ ದೇವಿ ಅವರನ್ನು ಕೆಲ ದಿನಗಳ ಹಿಂದೆ ಕಾರವಾರಕ್ಕೆ ಕರೆ ತಂದು ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ದಾಖಲಿಸಿದ್ದರು.‌ ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಬೆಂಗಳೂರು; ಕೋವಿಡ್‌ನಿಂದ ತಂದೆ ಸಾವು; ಮಗಳಿಂದ ಅಂತ್ಯ ಸಂಸ್ಕಾರಬೆಂಗಳೂರು; ಕೋವಿಡ್‌ನಿಂದ ತಂದೆ ಸಾವು; ಮಗಳಿಂದ ಅಂತ್ಯ ಸಂಸ್ಕಾರ

ಕೊರೊನಾ ಲಾಕ್​ಡೌನ್​ ಕಾರಣದಿಂದ ತಾಯಿ ಮೃತದೇಹವನ್ನು ಜಾರ್ಖಂಡ್​‌ಗೆ ಕೊಂಡೊಯ್ಯಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣಗೊಂಡಿದ್ದು, ಕಾರವಾರದಲ್ಲಿಯೇ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದರು. ಅದರಂತೆ ಕಾರವಾರದ ಚೆಂಡಿಯಾ ಗ್ರಾಮ ಪಂಚಾಯಿತಿ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಅನುಮತಿ ಸಹ ಪಡೆದುಕೊಂಡಿದ್ದರು.

ಆದರೆ ಅರಗಾ ಮತ್ತು ಚೆಂಡಿಯಾದ ಸಾರ್ವಜನಿಕರು ತಮ್ಮೂರಿನ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕೊರೊನಾ ಆತಂಕವಿರುವ ಕಾರಣ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ತಾಯಿಗೆ ಕೊರೊನಾ ಟೆಸ್ಟ್​ ನಡೆಸಿದ್ದಾಗಿ ಯೋಧ ತಿಳಿಸಿದರೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಂಸ್ಕಾರ ನಡೆದಿಲ್ಲ. ಸ್ಥಳಕ್ಕೆ ತೆರಳಿದ ಪೊಲೀಸರು ಕೂಡ ಸ್ಥಳೀಯರ ಮನವೊಲಿಸಲು ಪ್ರಯತ್ನಿದ್ದು, ಆದರೂ ಪ್ರಯೋಜನವಾಗಿಲ್ಲ.

 Soldier Struggled To Perform His Mother Funeral In Karwar

ಬಳಿಕ ಯೋಧ ಪೊಲೀಸರು ಹಾಗೂ ಅಧಿಕಾರಿಗಳ ಬಳಿ ಅಂಗಲಾಚಿದ್ದು, ತಾಯಿಯ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದ. ಕೊನೆಗೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರ ನೇತೃತ್ವದಲ್ಲಿ ಸರ್ವೋದಯನಗರದ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.

English summary
Soldier working in karwar navy has struggled to perform his mother's funeral because of locals opposition
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X