ಬದಲಾದ ಕೈ ಸಾರಥಿ: ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸಾಯಿ ಗಾಂವಕರ್ ನೇಮಕ

ಕಾರವಾರ, ಜನವರಿ 23: ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಬದಲಿಸಿದ್ದು, ಹತ್ತು ವರ್ಷಗಳಿಗೂ ಹೆಚ್ಚು ಕಾಲ ಅಧ್ಯಕ್ಷರಾಗಿದ್ದ ಭೀಮಣ್ಣ ನಾಯ್ಕ ಬದಲಾಗಿ ಅಂಕೋಲಾ ಮೂಲದ ಸಾಯಿ ಗಾಂವಕರ್ ಅವರನ್ನು ಜಿಲ್ಲಾಧ್ಯಕ್ಷರಾಗಿ ನೇಮಿಸಿ ಪಕ್ಷ ಆದೇಶಿಸಿದೆ.

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಳೆದ ಹತ್ತು ವರ್ಷಕ್ಕೂ ಅಧಿಕ ಕಾಲದಿಂದ ಭೀಮಣ್ಣ ನಾಯ್ಕ ನಿಭಾಯಿಸಿದ್ದರು. ವಿಧಾನ ಪರಿಷತ್ ಚುನಾವಣೆ ನಂತರ ಜಿಲ್ಲಾಧ್ಯಕ್ಷ ಬದಲಾವಣೆಯ ಕೂಗು ಕೇಳಿಬಂದಿದ್ದು ಸ್ವಂತ ಭೀಮಣ್ಣ ನಾಯ್ಕರೇ ಬದಲಾವಣೆ ಮಾಡುವಂತೆ ಹೇಳಿಕೊಂಡಿದ್ದರು. ಇದರ ನಡುವೆ ಭೀಮಣ್ಣ ನಾಯ್ಕರಿಗೆ ಕೆಪಿಸಿಸಿ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಗಿತ್ತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಇದಾದ ನಂತರ ವೆಂಕಟೇಶ ಹೆಗಡೆ ಹೊಸಬಾಳೆ, ರವೀಂದ್ರ ನಾಯ್ಕ, ಶ್ರೀಪಾದ ಹೆಗಡೆ ಕಡವೆ, ಸೇರಿದಂತೆ ಹಲವರು ಪ್ರಯತ್ನ ನಡೆಸಿದ್ದರು.

ಬದಲಾವಣೆಗೆ ಎಐಸಿಸಿ ಅಧ್ಯಕ್ಷರ ಸೂಚನೆ..?

ಇನ್ನು ಕಾಂಗ್ರೆಸ್ ಸೇವಾದಳದಲ್ಲಿ ಗುರುತಿಸಿಕೊಂಡಿದ್ದ ಸಾಯಿ ಗಾಂವಕರ್ ಸಹ ಪ್ರಯತ್ನ ನಡೆಸಿದ್ದು, ಕಳೆದ ಆರು ತಿಂಗಳ ಹಿಂದೆಯೇ ಸಾಯಿ ಗಾಂವಕರ್ ಅವರನ್ನು ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲಾಗುವುದು ಎನ್ನಲಾಗಿತ್ತು. ಸದ್ಯ ಚುನಾವಣೆ ಸಮೀಪಿಸುತ್ತಿದ್ದು, ಅಂತಿಮವಾಗಿ ಎಐಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ಜಿಲ್ಲಾಧ್ಯಕ್ಷ ಹುದ್ದೆಯನ್ನು ಬದಲಿಸಿ ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಆದೇಶಿಸಿದ್ದಾರೆ.

Sai Gaonkar Appointed As Uttara Kannada District Congress President

ಜಿಲ್ಲೆಯಲ್ಲಿ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಹಾಗೂ ಮಾಜಿ ಸಚಿವ ಆರ್ ವಿ ದೇಶಪಾಂಡೆ ಎರಡು ಬಣಗಳು ಜಿಲ್ಲಾ ಕಾಂಗ್ರೆಸ್‌ನಲ್ಲಿದೆ. ಎರಡು ಬಣಕ್ಕೂ ಹೊಂದಾಣಿಕೆ ಆಗುವಂತಹ ಅಭ್ಯರ್ಥಿ ನೇಮಕ ಮಾಡಲು ಪಕ್ಷ ಮುಂದಾಗಿತ್ತು. ಸಾಯಿ ಗಾಂವಕರ್ ಈ ಹಿಂದೆ ಮಾರ್ಗರೇಟ್ ಆಳ್ವಾ ಅವರ ಜೊತೆ ಉತ್ತಮ ಸಂಭಂದವನ್ನ ಹೊಂದಿದ್ದರು. ಅಲ್ಲದೇ ದೇಶಪಾಂಡೆ ಅವರ ಜೊತೆ ಸಹ ಒಡನಾಟ ಹೊಂದಿದ್ದ ಹಿನ್ನಲೆಯಲ್ಲಿ ಎರಡು ನಾಯಕರು ಸಾಯಿ ಗಾಂವಕರ್ ಹೆಸರನ್ನ ಪಕ್ಷಕ್ಕೆ ತಿಳಿಸಿದ್ದರು ಎನ್ನಲಾಗಿದೆ. ಚುನಾವಣೆ ಸಂದರ್ಭದಲ್ಲಿ ತಮ್ಮದೇ ಒಡನಾಟದ ಜಿಲ್ಲಾಧ್ಯಕ್ಷ ಇರಲಿ ಎನ್ನುವ ಹಿನ್ನಲೆಯಲ್ಲಿ ಸಾಯಿಗಾಂವಕರ್ ಅವರನ್ನು ಮಾಡಿದ್ದಾರೆ ಎನ್ನಲಾಗಿದೆ.

ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಂತಿಮ ಹಂತಕ್ಕೆ ಕಾಂಗ್ರೆಸ್ ಟಿಕೆಟ್‌ ಪಟ್ಟಿಯಲ್ಲಿ ಸಾಯಿ ಗಾಂವಕರ್ ಹೆಸರು ಕೇಳಿ ಬಂದಿತ್ತು. ವಿದೇಶದಲ್ಲಿದ್ದ ಮಾಜಿ ಸಚಿವ ಆರ್.ವಿ.ದೇಶಪಾಂಡೆ ರಾಜ್ಯಕ್ಕೆ ವಾಪಾಸ್ ಆದ ನಂತರ ಭೀಮಣ್ಣ ನಾಯ್ಕ ಬದಲು ಸಾಯಿ ಗಾಂವಕರ್ ಅವರಿಗೆ ಟಿಕೇಟ್ ನೀಡುವಂತೆ ಪಟ್ಟು ಹಿಡಿದಿದ್ದರು. ಜಿಲ್ಲೆಯ ಮಾಜಿ ಶಾಸಕರುಗಳು, ಮಧು ಬಂಗಾರಪ್ಪ ನವರ ಪ್ರಯತ್ನದಿಂದ ಭೀಮಣ್ಣ ನಾಯ್ಕರಿಗೆ ಟಿಕೆಟ್‌ ಸಿಕ್ಕಿತ್ತು. ಸದ್ಯ ಪರಿಷತ್ ಟಿಕೆಟ್‌ ಕೈ ತಪ್ಪಿದ್ದಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ ಎನ್ನುವುದು ಪಕ್ಷದ ನಾಯಕರ ಅಭಿಪ್ರಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+