Get Updates
Get notified of breaking news, exclusive insights, and must-see stories!

ಉತ್ತರ ಕನ್ನಡದ ಲೈಟ್‌ಹೌಸ್‌ಗೆ ನಿಷೇಧಿತ ವಲಯ ಬೋರ್ಡ್: ಪ್ರವಾಸಿಗರ ಕೆಂಗಣ್ಣಿಗೆ ಗುರಿಯಾದ ನಿರ್ಧಾರ

ಕಾರವಾರ, ಜನವರಿ 11: ಅರಬ್ಬಿ ಸಮುದ್ರದಲ್ಲಿ ನಡುಗಡ್ಡೆಯಾಗಿ ಪ್ರವಾಸಿಗರ ನೆಚ್ಚಿನ ಕೇಂದ್ರವಾಗಿದ್ದ ಲೈಟ್‌ಹೌಸ್ ಇದೀಗ ನಿಷೇಧಿತ ವಲಯವನ್ನಾಗಿ ಬೋರ್ಡ್ ಹಾಕಲಾಗಿದ್ದು, ದೇಶದ ವಿವಿಧ ಕಡೆಗಳಿಂದ ಆಗಮಿಸುವ ಪ್ರವಾಸಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಸಮುದ್ರ ವ್ಯಾಪ್ತಿಯಲ್ಲಿ ಇರುವ ವಿವಿಧ ನಡುಗಡ್ಡೆಗಳಲ್ಲಿ ಲೈಟ್ ಹೌಸ್ ಸಹ ಒಂದು. ಈ ಹಿಂದೆ ದೇಶದ ಕರಾವಳಿ ವ್ಯಾಪ್ತಿಯಲ್ಲಿರುವ ಒಟ್ಟೂ 194 ಲೈಟ್ ಹೌಸ್ ಪ್ರವಾಸಿ ಹಾಟ್ ಸ್ಪಾಟ್ ಮಾಡಲು ಕೇಂದ್ರ ಯೋಜನೆ ರೂಪಿಸಿತ್ತು. ಇದರಿಂದ ಜಿಲ್ಲೆಯ ಕಾರವಾರ, ಹೊನ್ನಾವರ, ಭಟ್ಕಳದಲ್ಲಿರುವ ಲೈಟ್ ಹೌಸ್ ಸಹ ದೇಶದ ಮುಖ್ಯ ಪ್ರವಾಸಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕಿತ್ತು. ಆದರೆ ಈಗ ಈ ಪ್ರದೇಶದಲ್ಲಿ ನಿಷೇಧಿತ ವಲಯ ಎಂದು ಬರೆಯಲಾಗಿದ್ದು ಪ್ರವಾಸಿಗರಿಗೆ ಪ್ರವೇಶವಿಲ್ಲ ಎಂದು ಹಾಕಲಾಗಿದೆ.

Prohibited Zone Board For Lighthouse In Uttara Kannada

ಕಾರವಾರದ ಲೈಟ್ ಹೌಸ್ ಹೊರವಲಯದಲ್ಲಿ ನೌಕಾನೆಲೆಯ ಬೇಸ್ ಇದೆ. ಇದರಿಂದಾಗಿ ಲೈಟ್ ಹೌಸ್ ನಿಷೇಧಿತ ವಲಯ ಎಂದು ಮಾಡಿರಬಹುದು ಶಂಕೆ ಸಹ ಇದೆ. ಇಲ್ಲಿನ ಲೈಟ್ ಹೌಸ್‌ಗೆ ರಾಜ್ಯದ ಬೇರೆ ಬೇರೆ ಜಿಲ್ಲೆ ಹಾಗೂ ವಿವಿಧ ರಾಜ್ಯದಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದರು. ಬರುವ ಪ್ರವಾಸಿಗರಿಗೆ ಈಗ ನಿರಾಸೆ ಮೂಡಿಸಿದೆ.

ದೇಶದಲ್ಲಿ ಈಗಿರುವ 194 ಲೈಟ್‌ಹೌಸ್‌ಗಳಲ್ಲಿ 100 ವರ್ಷಕ್ಕಿಂತ ಹಳೆಯ ಲೈಟ್‌ಹೌಸ್‌ಗಳನ್ನು ಗುರುತಿಸುವ ಕಾರ್ಯ ನಿರ್ವಹಿಸುತ್ತಿದ್ದು ಈ ಲೈಟ್‌ಹೌಸ್‌ಗಳ ಪ್ರದೇಶದಲ್ಲಿ ಮ್ಯೂಸಿಯಂಗಳನ್ನು ಸ್ಥಾಪಿಸಲಿದ್ದು ಆ ಪ್ರದೇಶದ ಇತಿಹಾಸಕ್ಕೆ ಸಂಬಂಧಿಸಿದ ಮ್ಯೂಸಿಯಂ, ಅಕ್ವೇರಿಯಂ, ಮಕ್ಕಳ ಉದ್ಯಾನ ಮತ್ತು ಗಾರ್ಡನ್ ಹಾಗೂ ಜಲಕ್ರೀಡೆಗೆ ಒತ್ತು ನೀಡುವ ಯೋಜನೆ ರೂಪಿಸಲಾಗಿತ್ತು.

Prohibited Zone Board For Lighthouse In Uttara Kannada

ಬ್ರಿಟಿಷರು ನಿರ್ಮಿಸಿದ ಈ ದೀಪಸ್ತಂಭದ ತುದಿಯಲ್ಲಿ ಆಗಿನ ಕಾಲದಲ್ಲಿ ಸೀಮೆಎಣ್ಣೆ ದೀಪ ಉರಿಸಲಾಗುತ್ತಿತ್ತು. ಈಗ ಸೌರ ವಿದ್ಯುತ್ ಬಳಕೆ ಮಾಡಿಕೊಂಡು ಪ್ರಖರವಾದ ಬೆಳಕು ಸೂಸುವ ವ್ಯವಸ್ಥೆ ಮಾಡಲಾಗಿದೆ. ಫಲಕಗಳ ಮೂಲಕ ಬೆಳಕು ಹೊರ ಬಂದು 20 ನಾಟಿಕಲ್ ಮೈಲು ದೂರದವರೆಗೆ ಗೋಚರಿಸುತ್ತದೆ.

ಲೈಟ್ ಹೌಸ್‌ನ ಸ್ತಂಭವು ಗೋಲಾಕಾರದಲ್ಲಿದೆ. ಅದರ ತುದಿಗೆ ತಲುಪಿದಾಗ ವಿಶಾಲವಾಗಿ ಕಾಣುವ, ನೀಲಿ ಬಣ್ಣದ ಸಮುದ್ರ ಆಕರ್ಷಕವಾಗಿ ಕಾಣುತ್ತದೆ. ದೀಪಸ್ತಂಭದ ನಿರ್ವಹಣೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಲೈಟ್ ಹೌಸ್‌ಗಳ ನಿರ್ದೇಶನಾಲಯದಿಂದಲೇ ಆಗುತ್ತದೆ. ಅದರ ಕೇಂದ್ರ ಕಚೇರಿ ಉತ್ತರ ಪ್ರದೇಶದ ನೊಯಿಡಾದಲ್ಲಿದೆ.

ಲೈಟ್‌ಹೌಸ್‌ಗಳಲ್ಲಿ ಬಹುತೇಕ ಲೈಟ್‌ಪೋಲ್‌ಗಳು ಶತಮಾನಗಳಷ್ಟು ಹಳೆಯದಾಗಿದ್ದು ಹಾಗೂ ಈ ಲೈಟ್‌ಹೌಸ್‌ಗಳಲ್ಲಿ ಇರುವ ಲೆನ್ಸ್ರೂಮ್, ಕಟ್ಟಡ ಅಲ್ಲಿ ಉಪ್ಪುನೀರಿಗೂ ತುಕ್ಕು ಹಿಡಿಯದ ಲೋಹ. ಲೈಟ್‌ಹೌಸ್ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಸರ್ಕಾರ ನಿರ್ಧರಿಸಿತ್ತು ಕೇಂದ್ರ ಸರ್ಕಾರವು ಈಗ ಅಭಿವೃದ್ಧಿ ಪಡಿಸಲು ಯೋಜಿಸಿದ 194 ಲೈಟ್‌ಹೌಸ್‌ಗಳಲ್ಲಿ ಜಿಲ್ಲೆಯ 3 ಲೈಟ್‌ಹೌಸ್‌ಗಳೂ ಸೇರಿದ್ದು ಈ ಮೂರು ಲೈಟ್‌ಹೌಸ್‌ಗಳು ಶತಮಾನಕ್ಕಿಂತ ಹಳೆಯದಾಗಿದೆ.

ಇದರಲ್ಲಿ ಕಾರವಾರದ ಲೈಟ್‌ಹೌಸ್ ನಿರ್ಮಾಣವನ್ನು 1860ರಲ್ಲಿ ಬ್ರಿಟೀಷರು ಆರಂಭಿಸಿದ್ದು 1868ರಲ್ಲಿ ಇದು ಕಾರ್ಯಾರಂಭ ಮಾಡಿತ್ತು. ಈ ಲೈಟ್ ಹೌಸನ್ನು ಪ್ಯಾರಿಸ್ ನ ಬಾಬ್ಲೇರ್‌ ಬೆನಾರ್ಡ್, ಟರೆನ್ನೆ ಎಂಬ ಕಂಪನಿ ನಿರ್ಮಿಸಿತ್ತು. ಈವರೆಗೂ ಅರಬ್ಬಿ ಸಮುದ್ರದಲ್ಲಿ ಹಡಗುಗಳಿಗೆ ಈ ಲೈಟ್‌ಹೌಸ್ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದೆ. ಕಾರವಾರ ಬೀಚ್‌ನಿಂದ ಸಮುದ್ರದಲ್ಲಿ 10 ಕಿ.ಮೀ. ದೂರದಲ್ಲಿ ನಡುಗಡ್ಡೆ ಇದ್ದು ಈ ನಡುಗಡ್ಡೆಯು ನಾವಿಕ ಪ್ರಯಾಣದ ದೃಷ್ಟಿಯಿಂದ ಅತಿ ಮುಖ್ಯವಾಗಿದೆ.

ಭಟ್ಕಳದ ಲೈಟ್‌ಹೌಸ್‌ನ ಉಸ್ತುವಾರಿ ಈಗ ನೌಕಾಪಡೆಯು ನೋಡಿಕೊಳ್ಳುತ್ತಿದ್ದು ಇದನ್ನು 1861 ರಲ್ಲಿ ಬ್ರಿಟೀಷರು ನಿರ್ಮಿಸಿದ್ದರು. ಗುಡ್ಡದ ಮೇಲಿರುವ ಈ ಲೈಟ್‌ಹೌಸ್‌ನ್ನು 1936ರಲ್ಲಿ ನವೀಕರಣಗೊಳಿಸಲಾಗಿತ್ತು. 1956-58 ರಲ್ಲಿ ಈ ಲೈಟ್‌ಹೌಸ್‌ನ ಮೇಲೆ ಲೈಟ್ ಕ್ಯಾಬಿನ್ ಹಾಗೂ ಸಿಗ್ನಲ್ ಕಂಬಗಳನ್ನು ಹೊಸದಾಗಿ ನಿರ್ಮಿಸಲಾಗಿತ್ತು. 1998, ಮಾರ್ಚ್ 21ರಂದು ಈ ಲೈಟ್‌ಹೌಸ್‌ನ ಮೇಲೆ ಆಧುನಿಕ ಲ್ಯಾಂಪ್ ಅಳವಡಿಸಲಾಗಿದೆ. ಹೊನ್ನಾವರದ ಲೈಟ್‌ಹೌಸ್ ಸಹ ಶತಮಾನದಷ್ಟು ಹಳೆಯದಾಗಿದೆ.

ಉತ್ತಮ ಪ್ರವಾಸಿ ತಾಣವಾಗಬೇಕಾಗಿದ್ದ ಲೈಟ್ ಹೌಸ್ ಈಗ ನಿಷೇಧಿತ ವಲಯವನ್ನಾಗಿ ಮಾಡಲಾಗಿದೆ. ಆದರೆ ಲೈಟ್ ಹೌಸ್ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಕೆಳ ಭಾಗದಲ್ಲಿ ಗಾರ್ಡ್‌ ನಿರ್ಮಾಣ ಮಾಡಲಾಗಿದೆ. ಲೈಟ್ ಹೌಸ್ ಪ್ರದೇಶವನ್ನು ನಿಷೇಧಿತ ವಲಯವನ್ನಾಗಿ ಮಾಡಿದ್ದರೇ ಲಕ್ಷಾಂತರ ರೂ. ವೆಚ್ಚದಲ್ಲಿ ಗಾರ್ಡ್ನ್ ನಿರ್ಮಾ ಮಾಡುವುದಾದರೂ ಏಕೆ? ಎನ್ನುವ ಪ್ರಶ್ನೆ ಎದುರಾಗಿದೆ. ಗಾರ್ಡ್‌ ನಿರ್ಮಾಣ ಮಾಡಿ ಸುತ್ತಮುತ್ತಲಿನ ಬೇಸ್‌ನ ಅಧಿಕಾರಿಗಳಿಗೆ ರಿಲಾಕ್ಸ್ ಮಾಡಲು ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಪ್ರವೇಶ ನಿಷೇಧ ಮಾಡಿ ಈ ಸ್ಥಳ ಅಭಿವೃದ್ಧಿ ಮಾಡಲಾಗುತ್ತಿದೆಯೇ ಎನ್ನುವುದು ಪ್ರವಾಸಿಗರ ಪ್ರಶ್ನೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+