ದಿಕ್ಕಾಪಾಲಾಗಿ ಓಡಿದ ಅಧಿಕಾರಿಗಳು! ದಾಳಿ ಮಾಡಿದ್ದು ಯಾರು ಅಂತೀರಾ...

ಕಾರವಾರ, ಡಿಸೆಂಬರ್ 19: ಭಟ್ಕಳದಲ್ಲಿ ಘನತ್ಯಾಜ್ಯ ಘಟಕದ ಸ್ಥಳ ಪರಿಶೀಲನೆಗೆ ತೆರಳಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮೇಲೆ ಏಕಾಏಕಿ ದಾಳಿಯಾಗಿದೆ. ದಾಳಿ ನಡೆಸಿದ್ದು, ಬೇರಾರೂ ಅಲ್ಲ, ಹಂದಿ.

ಪಟ್ಟಣದ ಸಾಗರ ರಸ್ತೆಯಲ್ಲಿನ ಪುರಸಭೆಯ ಘನತ್ಯಾಜ್ಯ ಘಟಕದ ಸ್ಥಳ ಪರಿಶೀಲನೆಗೆ ಪುರಸಭೆ ಅಧಿಕಾರಿಗಳು, ಪೊಲೀಸರು, ತಾಲೂಕು ಆಡಳಿತದ ಸಿಬ್ಬಂದಿ ಹಾಗೂ ಸ್ಥಳೀಯರು ತೆರಳಿದ್ದರು. ಈ ಸಂದರ್ಭದಲ್ಲಿ ಕಸದ ರಾಶಿಯಲ್ಲಿದ್ದ ಹಂದಿಗಳು ಸ್ಥಳಕ್ಕೆ ತೆರಳಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮೇಲೆ ದಾಳಿಗೆ ಮುಂದಾಗಿದ್ದು ಹಂದಿ ದಾಳಿಯಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕರು ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ.

Pig Chased Officers Who Went For Inspection In Bhatkal

ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ತೊಂದರೆಯಾಗದೇ ಪಾರಾಗಿದ್ದಾರೆ. ಪಟ್ಟಣದಲ್ಲಿ ಇತ್ತೀಚೆಗೆ ಹಂದಿಗಳ ಕಾಟ ಹೆಚ್ಚಾಗಿದ್ದು ಅಧಿಕಾರಿಗಳಿಗೂ ಅದರ ಅನುಭವ ಆಗುವಂತಾಯಿತು. ಸಾರ್ವಜನಿಕರಿಗೂ ಪ್ರತಿನಿತ್ಯ ಹಂದಿಗಳಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತಿದ್ದು ಸಂಬಂಧಪಟ್ಟವರು ಹಂದಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+