ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ವರದಿ; ಗ್ರಾಮ ಪಂಚಾಯತಿ ಗ್ರಂಥಾಲಯಗಳಿಗೆ ಹೊಸ ರೂಪ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಮಾರ್ಚ್ 11; ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯತಿಗಳ ಗ್ರಂಥಾಲಯ ಈಗ ಮೊದಲಿನಂತಿಲ್ಲ. ಬಗೆ ಬಗೆಯ ಪುಸ್ತಕಗಳು ಲಭ್ಯವಿರುವುದರಿಂದ ವಿದ್ಯಾರ್ಥಿಗಳು ಮಾರು ಹೋಗಿದ್ದಾರೆ. ಗ್ರಂಥಾಯಲಗಳು ಕಂಗೊಳಿಸುತ್ತಿರುವುದರಿಂದ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ.

ಗ್ರಾಮ ಪಂಚಾಯತಿ ಗ್ರಂಥಾಲಯಗಳು ಮದುವಣಗಿತ್ತಿಯಂತೆ ಕಂಗೊಳಿಸುತ್ತಿವೆ. ಸುಣ್ಣ ಬಣ್ಣ ಕಾಣದ ಗ್ರಂಥಾಲಯವನ್ನು ಬ್ರ‍್ಯಾಂಡಿಂಗ್ ಮಾಡಲಾಗಿದೆ. ಸರಕಾರ ಜಾರಿಗೆ ತಂದಿರುವ 'ಓದುವ ಬೆಳಕು' ಕಾರ್ಯಕ್ರಮದ ಮೂಲಕ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಸಂಸದ ತೇಜಸ್ವಿ ಸೂರ್ಯ ಅವರಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 1.2 ಲಕ್ಷ ಪುಸ್ತಕ ವಿತರಣೆಸಂಸದ ತೇಜಸ್ವಿ ಸೂರ್ಯ ಅವರಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 1.2 ಲಕ್ಷ ಪುಸ್ತಕ ವಿತರಣೆ

ಜಿಲ್ಲೆಯ ಪ್ರತಿ ತಾಲೂಕಿನಲ್ಲಿ 3 ಗ್ರಂಥಾಲಯವನ್ನು ಬ್ರ‍್ಯಾಂಡಿಂಗ್ ಮಾಡಲಾಗಿದೆ. 33 ಗ್ರಂಥಾಲಯವನ್ನು ಈ ಕಾರ್ಯಕ್ರಮದಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅಂಕೋಲಾ 591, ಭಟ್ಕಳ 477, ಶಿರಸಿ 558, ಮುಂಡಗೋಡ 264, ದಾಂಡೇಲಿ 350, ಹಳಿಯಾಳ1123, ಸಿದ್ದಾಪುರ 567, ಹೊನ್ನಾವರ 293, ಕಾರವಾರ 115, ಯಲ್ಲಾಪುರ 493, ಜೊಯಿಡಾ 392, ಕುಮಟಾ 1130 ವಿದ್ಯಾರ್ಥಿಗಳು ಗ್ರಂಥಾಲಯದ ಪ್ರಯೋಜನ ಪಡೆಯುತ್ತಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ಪರಿಸ್ಥಿತಿ ಬಗ್ಗೆ ಪುಸ್ತಕ ಹೊರತನ್ನಿ ಕರ್ನಾಟಕ-ಮಹಾರಾಷ್ಟ್ರ ಗಡಿ ಪರಿಸ್ಥಿತಿ ಬಗ್ಗೆ ಪುಸ್ತಕ ಹೊರತನ್ನಿ

ಜಿಲ್ಲಾ ಪಂಚಾಯಿತಿ ಸಿಇಓ ಪ್ರಿಯಾಂಗ ಎಮ್. ಈ ಕುರಿತು ಮಾಹಿತಿ ನೀಡಿದ್ದಾರೆ. "ಗ್ರಾಮ ಪಂಚಾಯತಿಯು ಗ್ರಂಥಾಲಯಗಳನ್ನು ಗ್ರಾಮೀಣ ಪ್ರದೇಶಗಳ ಜ್ಞಾನ ಕೇಂದ್ರಗಳಾಗಿ ಅಭಿವೃದ್ಧಿಪಡಿಸುತ್ತಿದೆ. ಇವು ಮಕ್ಕಳ ಕಲಿಕೆಗೆ ಆಶಾಕಿರಣವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಜಾರಿಗೆ ತಂದಿರುವ 'ಓದುವ ಬೆಳಕು' ಕಾರ್ಯಕ್ರಮ ಜಿಲ್ಲೆಯಲ್ಲಿ ಅಕ್ಷರಶಃ ಜಾರಿಗೆ ಬಂದಿದೆ" ಎಂದು ಹೇಳಿದ್ದಾರೆ.

ಡಿಜಿಟಲ್ ಗ್ರಂಥಾಲಯ ಆರಂಭ; ಉಚಿತವಾಗಿ ಪುಸ್ತಕ ಓದಿ ಡಿಜಿಟಲ್ ಗ್ರಂಥಾಲಯ ಆರಂಭ; ಉಚಿತವಾಗಿ ಪುಸ್ತಕ ಓದಿ

ಈಗ ಹೇಗಿದೆ ಗ್ರಂಥಾಲಯ?

ಈಗ ಹೇಗಿದೆ ಗ್ರಂಥಾಲಯ?

ಈ ಗ್ರಂಥಾಲಯಗಳಲ್ಲಿ 6 ರಿಂದ 18 ವರ್ಷದ ವಯಸ್ಸಿನ ಮಕ್ಕಳಿಗಾಗಿಯೇ ಆಯ್ಕೆ ಮಾಡಲಾದ ಪುಸ್ತಕಗಳನ್ನು ಪ್ರತ್ಯೇಕ ವಿಭಾಗವನ್ನಾಗಿ ಮಾಡಲಾಗಿದೆ. ದಾನಿಗಳು, ಸ್ವಯಂ ಸೇವಾ ಸಂಸ್ಥೆಯವರು ಹಾಗೂ ಕಾರ್ಪೋರೇಟ್ ಸಂಸ್ಥೆಗಳು ನೀಡುವ ಹೊಸ ಹಾಗೂ ಜೋಪಾನವಾಗಿ ಬಳಸಿದ ಪುಸ್ತಕಗಳಿಂದ ಗ್ರಂಥಾಲಯಗಳನ್ನು ಪುನಶ್ಚೇತನಗೊಳಿಸಲಾಗಿದೆ. ಗ್ರಾಮೀಣ ಪ್ರದೇಶದ 6 ರಿಂದ 18 ವಯಸ್ಸಿನ ಮಕ್ಕಳನ್ನು ಗುರುತಿಸಿ, ಗುರುತಿಸಲಾದ ಮಕ್ಕಳ ಪಟ್ಟಿಯನ್ನು ವಾರ್ಡ್, ಗ್ರಾಮವಾರು ವಿಂಗಡಿಸಿಕೊಂಡು ನಂತರ ವಾರ್ಡ್, ಗ್ರಾಮವಾರು ಸಮಯವನ್ನು ನಿಗದಿಪಡಿಸಿ ಮಕ್ಕಳ ನೋಂದಣಿ ಅಭಿಯಾನ ನಡೆಸಲಾಗಿದೆ.

100 ಮಕ್ಕಳ ನೋಂದಣಿ

100 ಮಕ್ಕಳ ನೋಂದಣಿ

ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯವರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಗ್ರಾಮ ಪಂಚಾಯತಿಯ ಶಿಕ್ಷಣ ಕಾರ್ಯಪಡೆಯ ಸದಸ್ಯರ ನೆರವಿನೊಂದಿಗೆ ಗ್ರಾಮೀಣ ಪ್ರದೇಶದ 6 ರಿಂದ 18 ವಯಸ್ಸಿನ ಶೇಕಡಾ 100 ಮಕ್ಕಳು ಉಚಿತವಾಗಿ ಗ್ರಂಥಾಲಯಗಳಲ್ಲಿ ನೋಂದಾಯಿಸಿಕೊಳ್ಳುವಂತೆ ಮಾಡಲಾಗಿದೆ.

ಮಕ್ಕಳನ್ನು ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ನೋಂದಾಯಿಸಲು ಮಕ್ಕಳ ದಿನಾಚರಣೆ ಪ್ರಯುಕ್ತ ಸಾಂಕೇತಿಕ ಕಾರ್ಯಕ್ರಮ ಆಯೋಜಿಸಿ ಪ್ರಾರಂಭಿಸುವ ಮೂಲಕ ಈ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಪ್ರತಿದಿನ ನೋಂದಾಯಿಸಲಾದ ಮಕ್ಕಳ ಸಂಖ್ಯೆಯನ್ನು ಪಂಚತಂತ್ರ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ.

ಗ್ರಾಮೀಣ ಜ್ಞಾನ ಕೇಂದ್ರ

ಗ್ರಾಮೀಣ ಜ್ಞಾನ ಕೇಂದ್ರ

ಈ ರೀತಿ ನೋದಾಯಿತಗೊಂಡ ಎಲ್ಲಾ ಮಕ್ಕಳಿಗೆ ಒಂದು ಪುಸ್ತಕವನ್ನು ನೀಡಲು ಸದಸ್ಯತ್ವ ಭದ್ರತಾ ಠೇವಣಿಯನ್ನು ಗ್ರಾಮ ಪಂಚಾಯತಿಗಳಲ್ಲಿ ಸಂಗ್ರಹಿಸಲಾಗುವ ಗ್ರಂಥಾಲಯ ಸೆಸ್‌ನಿಂದ ಭರಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ಮತ್ತು ಪರಿಣಿತ ನಿವೃತ್ತ ಶಿಕ್ಷಕರಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ.

"ಗ್ರಂಥಾಲಯಗಳನ್ನು ಗ್ರಾಮೀಣ ಪ್ರದೇಶಗಳ ಜ್ಞಾನ ಕೇಂದ್ರಗಳಾಗಿ ಅಭಿವೃದ್ಧಿಪಡಿಸುತ್ತಿದೆ. ಇವು ಮಕ್ಕಳ ಕಲಿಕೆಗೆ ಆಶಾಕಿರಣವಾಗಿದೆ. ಓದುವ ಬೆಳಕು ಕಾರ್ಯಕ್ರಮ ಜಿಲ್ಲೆಯಲ್ಲಿ ಅಕ್ಷರಶಃ ಜಾರಿಗೆ ಬಂದಿದೆ" ಎನ್ನುತ್ತಾರೆ ಜಿಲ್ಲಾ ಪಂಚಾಯತಿ ಸಿಇಓ ಪ್ರಿಯಾಂಗ ಎಮ್.

Recommended Video

Ramesh Jarkiholi ಏನು ಅಂಥ ನನಿಗೆ ಚೆನ್ನಾಗೇ ಗೊತ್ತು?? | D K Shivakumar | Oneindia Kannada
ಏನಿದು ‘ಓದುವ ಬೆಳಕು’ ಕಾರ್ಯಕ್ರಮ?

ಏನಿದು ‘ಓದುವ ಬೆಳಕು’ ಕಾರ್ಯಕ್ರಮ?

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ದೇಶದ ಮಕ್ಕಳು ಸಾಮಾಜಿಕವಾಗಿ, ಭಾವನಾತ್ಮಕವಾಗಿ ಹಾಗೂ ಶೈಕ್ಷಣಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಶಾಲೆಗಳು ಮುಚ್ಚಿರುವುದರಿಂದ ಕಲಿಕೆಯಲ್ಲಿ ಉಂಟಾಗಿರುವ ನಷ್ಟದ ಜೊತೆಗೆ ಶೈಕ್ಷಣಿಕ ಬೆಳವಣಿಗೆಗೂ ಹಿನ್ನಡೆಯಾಗಿತ್ತು. ಹಲವಾರು ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ ಮಕ್ಕಳು ಪ್ರಸ್ತುತ ಪರಿಸ್ಥಿತಿಯಿಂದಾಗಿ ಬಾಲ್ಯವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿಗೆ ಸಿಲುಕುತ್ತಿದ್ದಾರೆ. ಮಕ್ಕಳಿಗೆ ಆಗುತ್ತಿರುವ ಮತ್ತಷ್ಟು ನಷ್ಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಯು ಗ್ರಂಥಾಲಯಗಳನ್ನು ಗ್ರಾಮೀಣ ಪ್ರದೇಶಗಳ ಜ್ಞಾನ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಮೂಲಕ ಹಾಗೂ ಗ್ರಂಥಾಲಯಗಳು ಮಕ್ಕಳ ಕಲಿಕೆಗೆ ಆಶಾಕಿರಣವಾಗುವ ಮೂಲಕ ಅವರ ಉಜ್ವಲ ಭವಿಷ್ಯಕ್ಕೆ ದಾರಿ ದೀಪವಾಗಬೇಕಿದ್ದು, ಈ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ‘ಓದುವ ಬೆಳಕು' ಕಾರ್ಯಕ್ರಮ ಜಾರಿಗೊಳಿಸಿದೆ.

English summary
Uttara Kannada zilla panchayat developed grama panchayat library under Oduva Belakua scheme of government. 6 to 18 years old village students can using this grama panchayat library.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X