ಗೋಕರ್ಣ, ಧರ್ಮಸ್ಥಳಕ್ಕೆ ಹೊಸ ಬಸ್ ಸೇವೆ, ವೇಳಾಪಟ್ಟಿ
ಕಾರವಾರ, ಜನವರಿ 01: ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸ ಬಸ್ ಸೇವೆಗಳನ್ನು ಘೋಷಣೆ ಮಾಡಿದೆ. ವಾ.ಕ.ರ.ಸಾ.ಸಯ ಉತ್ತರ ಕನ್ನಡ ವಿಭಾಗದ ಕುಮಟಾ ಘಟಕ ಈ ಬಸ್ ಸೇವೆ ಆರಂಭಿಸಿದ್ದು, ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ದೇವಾಲಯಕ್ಕೆ ತೆರಳುವ ಭಕ್ತರು, ಗೋಕರ್ಣದ ಪ್ರವಾಸಿಗರು ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕುಮಟಾ ಘಟಕ ನೂತನವಾಗಿ ಗೋಕರ್ಣ-ಧರ್ಮಸ್ಥಳ, ಕಾರವಾರ-ಶಿವಮೊಗ್ಗ ಮಾರ್ಗದಲ್ಲಿ ಬಸ್ ಸಂಚಾರವನ್ನು ಪ್ರಾರಂಭಿಸಿದೆ. ಬಸ್ ಹೊರಡುವ ವೇಳೆಯ ಮತ್ತು ಮಾರ್ಗದ ಮಾಹಿತಿಯನ್ನು ಪ್ರಯಾಣಿಕರ ಅನುಕೂಲಕ್ಕಾಗಿ ನೀಡಿದೆ.

ಗೋಕರ್ಣ-ಧರ್ಮಸ್ಥಳ ಮಾರ್ಗದ ಬಸ್ (ಬಿಡುವ ವೇಳೆ)
* ಗೋಕರ್ಣ : 16.00
* ಕುಮಟಾ : 17.30
* ಹೊನ್ನಾವರ : 18.00
* ಭಟ್ಕಳ : 19.00
* ಕುಂದಾಪುರ: 20.00
* ಉಡುಪಿ : 21:15
* ಧರ್ಮಸ್ಥಳ (ತಲುಪುವ ವೇಳೆ) : 03:30
ಧರ್ಮಸ್ಥಳ-ಕುಮಟಾ
* ಧರ್ಮಸ್ಥಳ : 08:00
* ಉಡುಪಿ : 10.45
* ಕುಂದಾಪುರ : 11.30
* ಭಟ್ಕಳ : 12.30
* ಹೊನ್ನಾವರ : 13.15
* ಕುಮಟಾ : 14:00 (ತಲುಪುವ ವೇಳೆ)
ಕಾರವಾರ-ಶಿವಮೊಗ್ಗ ಬಸ್ (ಬಿಡುವ ವೇಳೆ)
* ಕಾರವಾರ : 17.20
* ಅಂಕೋಲಾ : 18.00
* ಕುಮಟಾ : 19.15
* ಹೊನ್ನಾವರ : 20.00
* ಸಾಗರ : 22.45
* ಶಿವಮೊಗ್ಗ : 00.15 (ತಲುಪುವ ವೇಳೆ)
ಶಿವಮೊಗ್ಗ-ಗೋಕರ್ಣ ಬಸ್ (ಬಿಡುವ ವೇಳೆ)
* ಶಿವಮೊಗ್ಗ : 6.45
* ಸಾಗರ : 8.30
* ಹೊನ್ನಾವರ : 10.45
* ಕುಮಟಾ : 11.15
* ಗೋಕರ್ಣ : 12.00 (ತಲುಪುವ ವೇಳೆ)
ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರ. ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಡಿಸೆಂಬರ್ 30 ರಿಂದಲೇ ನೂರಾರು ಪ್ರವಾಸಿಗರು ಧರ್ಮಸ್ಥಳಕ್ಕೆ ದೇವರ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಹಲವು ಭಕ್ತರು ಅಲ್ಲೇ ವಾಸ್ತವ್ಯ ಹೂಡಿದ್ದು, ಬುಧವಾರ ವರ್ಷದ ಮೊದಲ ದಿನ ದೇವರ ದರ್ಶನ ಮಾಡಿಕೊಂಡು ಮುಂದಿನ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ. ಬುಧವಾರ ಧರ್ಮಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಇರುವುದು ಕಂಡುಬಂದಿದೆ.
ಗೋಕರ್ಣ ಧಾರ್ಮಿಕ ಮತ್ತು ಪ್ರವಾಸಿ ತಾಣ. ದೇವಾಲಯಕ್ಕೆ ಹೋಗುವಂತೆ ಬೀಚ್‌ಗಳನ್ನು ನೋಡಲು ಪ್ರವಾಸಿಗರು ಗೋಕರ್ಣಕ್ಕೆ ಭೇಟಿ ನೀಡುತ್ತಾರೆ. ಆದ್ದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಈ ಮಾರ್ಗದಲ್ಲಿ ಹೊಸ ಬಸ್ ಸೇವೆಯನ್ನು ಆರಂಭಿಸಿದ್ದು, ಜನರು ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದೆ.
'ಶಕ್ತಿ' ಯೋಜನೆ ಜಾರಿಗೆ ಬಂದ ಬಳಿಕ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಸಾರಿಗೆ ನಿಗಮಗಳು ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತವೆ. ಕರ್ನಾಟಕ ಸರ್ಕಾರ ಸಾರಿಗೆ ಸಂಸ್ಥೆಗಳಿಗೆ ಭವಿಷ್ಯನಿಧಿ ಬಾಕಿ ಹಾಗೂ ಇಂಧನ ಬಾಕಿ ಹೊಣೆಗಾರಿಕೆಯನ್ನು ಪಾವತಿಸಲು ಸರ್ಕಾರದ ಖಾತರಿ/ ಗ್ಯಾರಂಟಿಯೊಂದಿಗೆ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆಯಲು ಅನುಮೋದನೆ ನೀಡಿದೆ. ಇದರಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 646 ಕೋಟಿ ರೂ. ಸಾಲ ಮಾಡಲು ಅನುಮತಿ ನೀಡಲಾಗಿದೆ.












Click it and Unblock the Notifications