ಪಠ್ಯ ಪುಸ್ತಕದಲ್ಲಿ ರಾಷ್ಟ್ರೀಯತೆ ತುಂಬುವುದು ತಪ್ಪಲ್ಲ: ಪೂಜಾರಿ
ಕಾರವಾರ, ಮೇ 3: "ಕೆಲವು ಸಾಹಿತಿಗಳು ಪಠ್ಯ ಪುಸ್ತಕಗಳಲ್ಲಿ ತಮ್ಮ ಪಾಠವನ್ನು ತೆಗೆಯಿರಿ ಎಂದು ಸರಕಾರಕ್ಕೆ ಪತ್ರಗಳನ್ನು ಬರೆಯುತ್ತಿದ್ದಾರೆ. ಪಠ್ಯದಲ್ಲಿ ಅವರ ಪಾಠವೇ ಇಲ್ಲ. ಕೆಲವರು ಹೇಳುತ್ತಿರುವುದು ಸತ್ಯ. ಆದರೆ ಬಹಳ ಜನ ತಮ್ಮ ಪಾಠವನ್ನು ಹಾಕಬೇಡಿ ಎಂದು ಹೇಳುತ್ತಿದ್ದಾರೆ. ಇಲ್ಲದೇ ಇರುವ ಪಾಠವನ್ನು ಎಲ್ಲಿಂದ ತೆಗೆಯುವುದು?" ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯ ವಾಡಿದರು.
ಶುಕ್ರವಾರ ಕಾರವಾರದಲ್ಲಿ ಮಾತನಾಡಿದ ಅವರು, "ಒಂದು ಸರ್ಕಾರ ಜನಪರವಾಗಿ ಹೊಸ ಯೋಜನೆಗಳನ್ನು, ಹೊಸ ಯೋಚನೆಗಳನ್ನು, ರಾಷ್ಟ್ರೀಯತೆಯನ್ನು ಬಿಂಬಿಸುವ ವಾತಾವರಣ ನಿರ್ಮಿಸಲು ಪಠ್ಯ ಪುಸ್ತಕಗಳು ಕೂಡ ಒಂದು ವ್ಯವಸ್ಥೆಯಾಗಿದೆ. ಪಠ್ಯ- ಪುಸ್ತಕಗಳಲ್ಲಿ ರಾಷ್ಟ್ರಿಯತೆ, ರಾಷ್ಟ್ರಭಕ್ತಿ ತುಂಬುವುದು ತಪ್ಪಲ್ಲ" ಎಂದರು.
"ಪಠ್ಯ- ಪುಸ್ತಕದ ಪರಿಷ್ಕರಣೆಯಾಗುತ್ತಿರುವುದು ಹೊಸತಲ್ಲ. ಅನೇಕ ಬಾರಿ ಪಠ್ಯ- ಪುಸ್ತಕಗಳ ಬದಲಾವಣೆಯಾಗಿದೆ. ನಾನು ಓದುವಾಗ ಈಶ್ವರ, ಗಣಪತಿಯ ಚಿತ್ರಗಳು ಪಠ್ಯದಲ್ಲಿದ್ದವು. ಆದರೆ ಅಂದಿನ ಈ ಪುಸ್ತಕಗಳನ್ನು ಬದಲಾಯಿಸಿದವರು ಯಾರು?" ಎಂದು ಪ್ರಶ್ನಿಸಿದರು.
"ಪಠ್ಯ- ಪುಸ್ತಕದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈಗಲೂ ಕೂಡ ನಮ್ಮ ಸರ್ಕಾರ ಅನೇಕ ವಿಚಾರಗಳನ್ನು ತರಲು ಪಠ್ಯ- ಪುಸ್ತಕದ ಪರಿಷ್ಕರಣೆಗೆ ಸಮಿತಿಯೊಂದನ್ನು ರಚಿಸಿದೆ. ಆ ತಜ್ಞರ ಸಮಿತಿ ಕೆಲವು ಸೂಕ್ಷ್ಮತೆ, ರಾಷ್ಟ್ರೀಯತೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಮಕ್ಕಳಿಗೆ ರಾಷ್ಟ್ರಭಕ್ತಿ ಎಂದರೆ ಏನು ಎನ್ನುವುದನ್ನು ಹೇಳುವುದು ಪಠ್ಯದಲ್ಲಿ ಅವಶಕ್ಯತೆ ಇದೆ ಎಂದು ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ" ಎಂದರು.

ಪ್ರಶಸ್ತಿಗಳನ್ನು ಯಾರು ವಾಪಸ್ ಮಾಡಿಲ್ಲ
"ಕೆಲವರ ಹುನ್ನಾರದಿಂದ ರಾಜ್ಯದಲ್ಲಿ ಹುಯಿಲೆಬ್ಬಿಸುವಂಥ ವಾತಾವರಣ ನಿರ್ಮಾಣವಾಗುತ್ತಿದೆ. ಬ್ರಹ್ಮಶ್ರೀ ನಾರಾಯಣಗುರುಗಳ, ಭಗತ್ ಸಿಂಗ್ ಪಾಠವನ್ನು ತೆಗೆದು ಹಾಕಲಾಗಿದೆ ಎಂದು ಒಮ್ಮೆ ಬೊಬ್ಬೆ ಹಾಕಿದರು. ನಾನೇ ಅದಕ್ಕೆ ಸ್ಪಷ್ಟನೆ ನೀಡಿದೆ. ಕೆಲವು ಸಾಹಿತಿಗಳು, ಬುದ್ಧಿಜೀವಿಗಳು, ವಿಚಾರವಾದಿಗಳು ದೇಶದಲ್ಲಿ ಅಹಿಷ್ಣುತೆ ಇದೆ ಎಂದು ಹೇಳಿ ಕೆಲವು ಅತಿ ಶ್ರೇಷ್ಠರು ಅವರಿಗೆ ಸಿಕ್ಕ ಪ್ರಶಸ್ತಿಗಳನ್ನು ವಾಪಸ್ಸು ಮಾಡಿರುವುದನ್ನ ನಾನೇ ಸದನದಲ್ಲಿ ಪ್ರಶ್ನೆ ಮಾಡಿದ್ದೆ. ಯಾವ ಸಾಹಿತಿಗಳು ಅವರಿಗೆ ಸಿಕ್ಕ ಶ್ರೇಷ್ಠ ಪ್ರಶಸ್ತಿಗಳನ್ನು ವಾಪಸ್ಸು ಮಾಡಿದ್ದಾರೆ? ಎಂದು ಸದನದಲ್ಲಿ ಪ್ರಶ್ನಿದಾಗ, ಅವರು ಪತ್ರಿಕೆಯಲ್ಲಿ ಮಾತ್ರ ಹೇಳಿದ್ದಾರೆ. ನಮಗೆ ಝೆರಾಕ್ಸ್ ಕಾಪಿ ಮಾತ್ರ ಕಳುಹಿಸಿಕೊಟ್ಟಿದ್ದಾರೆ. ನಗದು ಬಹುಮಾನವನ್ನಾಗಲಿ, ಪ್ರಶಸ್ತಿಯನ್ನಾಗಲಿ ವಾಪಸ್ಸು ಮಾಡಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ನನಗೆ ಉತ್ತರ ನೀಡಿದರು" ಎಂದು ಸಚಿವರು ಹೇಳಿದರು.

ಪಠ್ಯಪುಸ್ತಕ ಚರ್ಚೆಗೆ ವಿಚಾರವಲ್ಲ
"ಹುಯಿಲೆಬ್ಬಿಸುವ ವಾತಾವರಣ, ಗುಮ್ಮನ ಬಿಟ್ಟು ಹೆದರಿಸುವುದು ಹಿಂದೆಯೂ ನಡೆದಿತ್ತು, ಇವತ್ತು ಕೂಡ ನಡೆಯುತ್ತಿದೆ. ಪಠ್ಯ ಪುಸ್ತಕದ ವಿಚಾರದಲ್ಲಿ ಯಾವುದೇ ಚರ್ಚೆಗೆ ಅವಕಾಶಗಳಿಲ್ಲ. ದೇವನೂರು ಮಹಾದೇವಾ ಅಂತಹ ಕೆಲವು ಹಿರಿಯರು ಕೆಲವು ವಿಚಾರಗಳನ್ನು ಉಲ್ಲೇಖ ಮಾಡಿದ್ದಾರೆ. ಪಠ್ಯ ಪರಿಷ್ಕರಣೆ ವಿಚಾರದಲ್ಲಿ ತಿಳಿದುಕೊಂಡಿರುವ ತಪ್ಪಿನ ವಿಚಾರಗಳಿಗೆ ಬೇಕಾದ ಮಾಹಿತಿಗಳನ್ನು ಒದಗಿಸಿ ಸಮಾಧಾನಪಡಿಸುವುದಾಗಿ ಆ ಉಲ್ಲೇಖಗಳಿಗೆ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳಿದ್ದಾರೆ" ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

ಹಿಜಾಬ್ ವಿಚಾರ ಮುಗಿದು ಹೋದ ಅಧ್ಯಾಯ
"ಹಿಜಾಬ್ ಹಾಕಿಕೊಂಡು ಬಂದಿದ್ದೇ ಅಶಾಂತಿ ಸೃಷ್ಟಿಸುವುದಕ್ಕಾಗಿ. ಈ ದೇಶದ ನೆಲ- ಜಲ- ಸಂವಿಧಾನವನ್ನ ಸ್ವೀಕರಿಸುತ್ತೇನೆ ಎಂಬುವವನು ಕೋರ್ಟಿನ ವಿರುದ್ಧವಾಗಿ ನಡೆದುಕೊಳ್ಳುವುದು ಸರಿಯಲ್ಲ. ಆದೇಶದ ವಿರುದ್ಧ ನಡೆದುಕೊಂಡ ಎಲ್ಲರ ವಿರುದ್ಧವೂ ಕ್ರಮ ಕೈಕೊಳ್ಳಬೇಕಾಗುತ್ತದೆ. ಪ್ರಮೋದ್ ಮುತಾಲಿಕ್ ಹಿಂದುತ್ವದ ಬಗ್ಗೆ ಬಹಳ ಹೋರಾಟಗಳನ್ನು ಮಾಡಿದವರು. ಯಾವುದೇ ಸರ್ಕಾರವಿದ್ದರೂ ಕೂಡ ಜಾಗೃತಿ ಮಾಡುವಂಥ ಹೇಳಿಕೆಗಳನ್ನು ಅವರು ಕೊಡುತ್ತಿರುತ್ತಾರೆ. ಪ್ರಚಲಿತ ವಿದ್ಯಮಾನದಲ್ಲಿ ಲೌಡ್‌ಸ್ಪೀಕರ್ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಸುಪ್ರೀಂಕೋರ್ಟ್ ಆದೇಶ ಅನುಷ್ಠಾನ ಮಾಡಲು ಎಲ್ಲಾ ಕಡೆ ನಿರ್ದೇಶನ ನೀಡಿದೆ. ಹೀಗಾಗಿ ಯಾವುದೇ ಧರ್ಮ, ಜಾತಿ, ಜನಾಂಗವನ್ನು ನೋಡದೆ ಕೆಲವು ಕಡೆ ತೆಗೆದಿದ್ದಾರೆ, ಇನ್ನೂ ಕೆಲವು ಕಡೆ ತೆರವು ಮಾಡುತ್ತಿದ್ದಾರೆ" ಎಂದು ಸಚಿವರು ಸ್ಪಷ್ಟಪಡಿಸಿದರು.

ಯಕ್ಷಗಾನಕ್ಕೆ ಸೀಮಿತ ಶಬ್ಧವಿರುತ್ತದೆ
ಯಕ್ಷಗಾನದಲ್ಲಿ ಮೈಕ್ ಬಳಸುವ ವಿಚಾರವಾಗಿ ಮಾತನಾಡಿದ ಪೂಜಾರಿ, "ಯಕ್ಷಗಾನ ಒಂದು ವ್ಯವಸ್ಥೆಯ ನಡುವೆ ನಡೆಯುವ ಕಲೆ. ಅದು ಒಂದು ಕಟ್ಟಡದ ವ್ಯಾಪ್ತಿಯಲ್ಲಿ ನಡೆಯುತ್ತದೆ. ಅಲ್ಲದೆ ಆಯಾ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು, ಸೀಮಿತ ಶಬ್ದದಲ್ಲಿ ಮಾಡಲಾಗುತ್ತದೆ. ಆದರೂ ಭವಿಷ್ಯದಲ್ಲಿ ಅದಕ್ಕೇನು ವ್ಯವಸ್ಥೆಗಳನ್ನು ಮಾಡಬೇಕೆಂದು ಯೋಚನೆಗಳನ್ನು ಮಾಡುತ್ತೇವೆ" ಎಂದು ಶ್ರೀನಿವಾಸ ಪೂಜಾರಿ ಹೇಳಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications