ಪರಿಶಿಷ್ಟ ಪಂಗಡಕ್ಕೆ ಮೊಗೇರ ಸಮುದಾಯ, ಸುಪ್ರಿಂ ಮಹತ್ವದ ತೀರ್ಪು

Subscribe to Oneindia Kannada

ನವದೆಹಲಿ, ನವೆಂಬರ್ 10: ಮೊಗೇರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಇಂದು ಸುಪ್ರಿಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮೊಗೇರ ಜನಾಂಗವು ಕರಾವಳಿಯ ಚಿಕ್ಕ ಸಮುದಾಯವಾಗಿದ್ದು, ಇವರು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಜೀವಿಸುತ್ತಾರೆ. ದಕ್ಷಿಣ ಕನ್ನಡದ ಮೊಗೇರರನ್ನು ಪರಿಶಿಷ್ಟ ಜಾತಿಗೆ ಈಗಾಗಲೇ ಸೇರಿಸಲಾಗಿದೆ.

Mogera community to Scheduled Tribes: Supreme Court

ಆದರೆ ಉತ್ತರ ಕನ್ನಡದ ಮೊಗೇರರು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು ಮುಂದುವರಿದ ಜನಾಂಗವಾಗಿದೆ ಎಂಬ ಆರೋಪಗಳಿತ್ತು. ಇವರಿಗೆ ಪ್ರವರ್ಗ 1ರಲ್ಲಿ ಮಾನ್ಯತೆ ನೀಡಲಾಗಿತ್ತು.

ಹೀಗಿದ್ದೂ ಕೆಲವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ನೀಡಲಾಗಿದ್ದ ಪ್ರಮಾಣ ಪತ್ರವನ್ನು ಸರಕಾರ ವಾಪಸ್ ಪಡೆದಿತ್ತು. ಕೊನೆಗೆ ಈ ಪ್ರಕರಣ ಸುಪ್ರಿಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರಿಂ ಕೋರ್ಟ್ ಪರಿಶಿಷ್ಟ ಪಂಗಡಕ್ಕೆ ಮೊಗೇರರನ್ನು ಸೇರಿಸಿ ತೀರ್ಪು ನೀಡಿದೆ.

ಇದರಿಂದ ಉತ್ತರ ಕನ್ನಡದ ಮೊಗೇರರು ಪರಿಶಿಷ್ಠ ಪಂಗಡದ ಪ್ರಮಾಣ ಪತ್ರ ಪಡೆಯಲಿದ್ದಾರೆ. ಜತೆಗೆ ಪರಿಶಿಷ್ಟರಿಗೆ ಸಿಗುವ ಸೌಲಭ್ಯಗಳನ್ನು ಪಡೆಯಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court today gave a significant verdict to add the Mogera community to the Scheduled Tribes.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ